Advertisement

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ: ರೂಪಾ

02:24 PM Jan 07, 2020 | Team Udayavani |

ಶ್ರೀರಂಗಪಟ್ಟಣ: 18 ವರ್ಷ ತುಂಬಿದ ಯುವಕ/ ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ತಹಶೀಲ್ದಾರ್‌ ರೂಪಾ ಹೇಳಿದರು.

Advertisement

ಶ್ರೀರಂಗನಾಥ ದೇವಾಲಯದ ಮುಂದೆ ಮಿಂಚಿನ ನೋಂದಣಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 1ನೇ ಜನವರಿ 2020ಕ್ಕೆ 18 ವರ್ಷ ತುಂಬಿದವರು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವವರು ಹೆಸರು ನೋಂದಾಯಿಸಿ ಕೊಳ್ಳಬಹುದು. ಜ.6ರಿಂದ 3 ದಿನ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊತ್ತತ್ತಿ ಹೋಬಳಿ 1,2,3 ಕ್ಕೆ ಒಳಪಡುವ ಮತ್ತು ತಾಲೂಕಿನ ಪ್ರಥಮ ದರ್ಜೆ ಕಾಲೇಜು, ತಾಲೂಕು ಕಚೇರಿ ಮತ್ತು ತಾಲೂಕಿನ ಆಯಾಯ ಬಿಎಲ್‌ಒ ಕೇಂದ್ರಗಳಲ್ಲಿ ನಮೂನೆ-6ರ ಅರ್ಜಿ ಫಾರಂ ಜೊತೆಗೆ  ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನಕಲು, ಇತ್ತೀಚಿನ ಭಾವಚಿತ್ರ, ಆಧಾರ್‌ಕಾರ್ಡ್‌ ನಕಲು ಹಾಗೂ ಪಡಿತರ ಚೀಟಿ ನಕಲು ಸ್ವೀಕರಿಸಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.

ಪಟ್ಟಣದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಬ್ಯಾನರ್‌ ಹಿಡಿದು ಪಟ್ಟಣದ ಮುಖ್ಯಬೀದಿ, ಬಸ್‌ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸಿದರು. ತಾಪಂ ಇಒ ನಾಗಲಕ್ಷ್ಮೀ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next