ಯಾದಗಿರಿ: ನಗರದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಕ್ಕೆ ದಿ| ಕೂಲೂರು ಮಲ್ಲಪ್ಪನವರ ಹೆಸರಿಟ್ಟು ಹಿರಿಯ ಸ್ವಾತಂತ್ರ್ಯ ಸೇನಾನಿಗೆ ಗೌರವ ಸಲ್ಲಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ರಾಜ್ಯ ಸರ್ಕಾಕ್ಕೆ ಒತ್ತಾಯಿಸಿದರು.
ಇಲ್ಲಿನ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಹೈದ್ರಾಬಾದ ಕರ್ನಾಟಕ ಗಾಂಧಿ ಎಂದೆ ಖ್ಯಾತರಾದ ಹಾಗೂ ಸ್ವಾತಂತ್ರ ಹೋರಾಟಗಾರ ದಿ| ಕೂಲೂರು ಮಲ್ಲಪ್ಪನವರ ಜಯಂತಿಯಲ್ಲಿ ಮಾತನಾಡಿದರು.
ಕೂಲೂರು ಮಲ್ಲಪ್ಪನವರು ದೇಶಖಂಡ ಮಹಾನ್ ಹೋರಾಟಗಾರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಜಿಲ್ಲೆಯಲ್ಲಿ ಅವರ ಹೆಸರಿನ ಗ್ರಂಥಾಲಯ ಹಾಗೂ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಅವರ ಹೆಸರಿಡುವಂತೆ ಸ್ಥಳೀಯ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೂಲೂರು ಮಲ್ಲಪ್ಪನವರ ಸ್ಮಾರಕ ಭವನಕ್ಕೆ ಸರ್ಕಾರ 2017-18ನೇ ಸಾಲಿನಲ್ಲಿ ಬಂದಂತಹ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಮಾರಕ ಭವನ ನನೆಗುದಿಗೆ ಬಿದ್ದಿದ್ದು ನಾಚಿಕೆ ತರುವಂತಿದೆ. ಹಿಂದೆಯೆ ಭವನ ಸ್ಥಾಪನೆಗೆ ಜಾಗ ಹೊಂದಿದ್ದರು. ಕೂಡ ಸ್ಮಾರಕ ಅಭಿವೃದ್ಧಿಗೊಳಿಸಲು ಅಧಿಕಾರಿಗಳಿಗೆ ಏನು ದೊಡ್ಡ ಸಮಸ್ಯೆ ಇದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಮಲ್ಲು ಮಾಳಿಕೇರಿ, ಯುವ ಘಟಕ ಜಿಲ್ಲಾಧ್ಯಕ್ಷರಾದ ವಿಶ್ವರಾಧ್ಯ ದಿಮ್ಮೆ, ಯುವ ನಗರಾಧ್ಯಕ್ಷ ಕಾಶಿನಾಥ ನಾನೇಕ, ಸಿದ್ದಪ್ಪ ಕೊಯಿಲೂರು, ತಬ್ರೇಜ್ ಅಹ್ಮದ್, ಅಬ್ದುಲ್ ಅಜೀಜ್, ದೀಪಕ ಒಡೆಯರ್, ಸಾಬು ನಿಲಳ್ಳಿ, ವಾಸು ಪಸ್ಪುಲ್, ಮುದಕಪ್ಪ, ಬೋಜಲಿಂಗ ತೇಳಗೆರಿ ಇದ್ದರು.