Advertisement
ಸುದ್ದಿಗಾರರೊಂದಿಗೆ “ಪ್ರಿನ್ಸೆಸ್ ರಸ್ತೆ’ ನಾಮಕರಣ ವಿವಾದ ಸಂಬಂಧ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಯಾವುದಾರೂ ರಸ್ತೆ ಅಥವಾ ಬಡಾವಣೆಗೆ ತಮ್ಮ ಹೆಸರು ಇಡಬೇಕು ಎನ್ನುವ ಮನಸ್ಸಿದ್ದರೆ ಇಡೀ ರಾಜ್ಯಕ್ಕೇ ಅವರ ಹೆಸರನ್ನು ಇಟ್ಟು ಬಿಡಲಿ ಎಂದು ಲೇವಡಿ ಮಾಡಿದರು. ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಜನತಾದಳದ್ದೂ ಜಿ.ಟಿ. ದೇವೇಗೌಡರದೂ ಗಂಡ-ಹೆಂಡತಿ ಸಂಬಂಧದಂತೆ. ಜಗಳ, ಮುನಿಸು ಇರುತ್ತದೆ. ಹಾಗಂತ ಸಂಬಂಧವೇನೂ ಮುರಿಯುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಜೆಡಿಎಸ್ನಿಂದ ಶಾಸಕ ಜಿಟಿಡಿ ದೂರ ಉಳಿದಿರುವ ವಿಚಾರಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆಯಾಯ ಸಂದರ್ಭಕ್ಕೆ ತಕ್ಕಂತೆ ಜಿ.ಟಿ. ದೇವೇಗೌಡರು ತಮಗೆ ಅನ್ನಿಸಿದ್ದನ್ನು ಹೇಳುತ್ತಾರೆ. ಅಷ್ಟಕ್ಕೆ ನಮ್ಮ-ಅವರ ಸಂಬಂಧ ಮುಗಿಯಿತು ಎಂದು ಅರ್ಥವಲ್ಲ. ಅವರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮಲ್ಲೇ ನಮ್ಮ ಜತೆಯೇ ಇದ್ದಾರೆ ಎಂದರು.