Advertisement
ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 1,790 ಮತಗಟ್ಟೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯ 5 ಕ್ಷೇತ್ರದ 1,078 ಮತಗಟ್ಟೆಗಳಲ್ಲಿ ‘ಮಿಂಚಿನ ನೋಂದಣಿ’ ಆಯೋಜಿಸಲಾಗಿತ್ತು. ಸಾವಿರಾರು ಜನರು ತಮ್ಮ ಹೆಸರನ್ನು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಮತದಾರರ ನೋಂದಣಿ ನಡೆಯಿತು. ದ.ಕ. ಜಿಲ್ಲೆಯ ವಿವಿಧೆಡೆ ಸಂಜೆ ಸಮಯದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಜನರ ಆಗಮನ ಸ್ವಲ್ಪ ಕಡಿಮೆ ಇತ್ತು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 11,017 ಅರ್ಜಿಗಳು ಸಲ್ಲಿಕೆಯಾದವು. ಇವುಗಳಲ್ಲಿ ಹೆಸರು ಸೇರ್ಪಡೆಗೆ 7,203 ಅರ್ಜಿ, ಹೆಸರು ತೆಗೆಯಲು 1,740, ತಿದ್ದುಪಡಿಗೆ 1,921, ಒಂದು ಕ್ಷೇತ್ರದಲ್ಲಿ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಹೆಸರು ವರ್ಗಾಯಿಸಲು 153 ಅರ್ಜಿಗಳು ಇವೆ. ಇದರಲ್ಲಿ ಬೈಂದೂರು ಕ್ಷೇತ್ರದಲ್ಲಿ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾದವು. ಅಲ್ಲಿ ಹೊಸ ಹೆಸರು ಸೇರ್ಪಡೆಗೊಳಿಸಲು 1,720 ಅರ್ಜಿಗಳು ಬಂದವು.
Related Articles
Advertisement
ಒಂದೆಡೆ 60 ಮತದಾರರು!ಮಂಗಳೂರಿನ ಶಕ್ತಿನಗರ ನಾಲ್ಯ ಪದವಿನ ವಾರ್ಡ್‌ನ ಒಂದೇ ಡೋರ್ ನಂಬರಿನಲ್ಲಿ 60ಕ್ಕೂ ಅಧಿಕ ಮತದಾರರ ಹೆಸರು ಇದೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.