Advertisement

ಮೈಕೆಲ್‌ನಿಂದ ಕೈ ನಾಯಕ ಅಹ್ಮದ್‌ ಪಟೇಲ್‌ ಹೆಸರು ಪ್ರಸ್ತಾಪ?

06:00 AM Dec 25, 2018 | |

ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್‌ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವನ್ನು ಬಂಧಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ಹೊರಗೆಡವಿದ್ದಾನೆ. 

Advertisement

ಡೀಲ್‌ಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿತ್ತು ಎಂದು ಹೇಳಲಾಗಿರುವ ಟಿಪ್ಪಣಿ ಯಲ್ಲಿರುವ “ಎ.ಪಿ’ ಎಂಬ ಹೆಸರು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌, “ಫಾಮ್‌’ ಎನ್ನುವುದು “ಗಾಂಧಿ ಕುಟುಂಬ’ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಗಿ ಸಿಬಿಐ ಮೂಲಗಳನ್ನು ಉಲ್ಲೇಖೀಸಿ “ಟೈಮ್ಸ್‌ ನೌ’ ಸುದ್ದಿವಾಹಿನಿ ವರದಿ ಮಾಡಿದೆ.

ಚಾನೆಲ್‌ ಹೇಳಿಕೊಂಡಿರುವ ಪ್ರಕಾರ, ವಿಚಾರಣೆ ವೇಳೆ ಈ ವಿಷಯ ತಿಳಿಸಿದರೂ, ಕೂಡಲೇ ಆತ ಹೇಳಿಕೆ ನಿರಾಕರಿಸಿದ್ದು, ಅಹ್ಮದ್‌ ಪಟೇಲ್‌ ಅಥವಾ ಗಾಂಧಿ ಕುಟುಂಬದವರನ್ನು ಭೇಟಿಯಾಗಿಲ್ಲ. ಈ ಬಗೆಗಿನ ಟಿಪ್ಪಣಿ ಸಿದ್ಧಗೊಳಿಸಿದ್ದು ಮತ್ತೂಬ್ಬ ಮಧ್ಯವರ್ತಿ ಗಿಡೋ ಹಶೆ ಎಂದೂ ಹೇಳಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ, ಎಚ್‌ಎಎಲ್‌ನಲ್ಲಿ ಲೈಟ್‌ ಯುಟಿಲಿಟಿ ಹೆಲಿ ಕಾಪ್ಟರ್‌ ಯೋಜನೆಯ ಗುತ್ತಿಗೆಗಾಗಿ 15 ಲಕ್ಷ ರೂ. ಲಂಚ ಪಾವತಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಿವೃತ್ತ ಗ್ರೂಪ್‌ ಕ್ಯಾಪ್ಟನ್‌ವೊಬ್ಬರಿಗೆ ಅದನ್ನು ಸಂದಾಯ ಮಾಡಲಾಗಿದೆ ಎಂದು ದೈನಿಕವೊಂದು ವರದಿ ಮಾಡಿದೆ.

ವಿದೇಶ ಪ್ರವಾಸಕ್ಕೆ ಅನುಮತಿ: ಸಿಬಿಐ ವಿಚಾರಣೆ ಗೊಳಪಟ್ಟಿರುವ ವಿವಿಐಪಿ ಹೆಲಿಕಾಪ್ಟರ್‌ ಹಗರಣ ಆರೋಪಿ ಮಾಜಿ ವಾಯುಪಡೆ ಮುಖ್ಯಸ್ಥ ಎಸ್‌ಪಿ ತ್ಯಾಗಿ ಅವರಿಗೆ ಮಾರ್ಚ್‌ನಲ್ಲಿ ಅಮೆರಿಕಕ್ಕೆ ತೆರಳಲು ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next