Advertisement

ಮುಖ್ಯ ಸ್ಥಳಗಳಿಗೆ ಪೊಲೀಸ್‌ ಹುತಾತ್ಮರ ಹೆಸರು: ಶಾ

11:38 AM Jun 29, 2019 | Team Udayavani |

ಶ್ರೀನಗರ: ಜಮ್ಮು -ಕಾಶ್ಮೀರದಲ್ಲಿ ಉಗ್ರರು ಮತ್ತು ಭಯೋತ್ಪಾದಕರ ವಿರುದ್ಧ ಪೊಲೀಸರು ಕೆಚ್ಚೆದೆಯಿಂದ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ವಿದ್ರೋಹಿಗಳ ವಿರುದ್ಧ ನಡೆದ ಹೋರಾಟದಲ್ಲಿ ಹುತಾತ್ಮರಾದ ಪೊಲೀಸರ ಹೆಸರನ್ನು ಕಣಿವೆ ರಾಜ್ಯದ ಪ್ರಮುಖ ಸ್ಥಳಗಳಿಗೆ ಇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ತಿಳಿಸಿದ್ದಾರೆ. ಗೃಹ ಸಚಿವರ ಎರಡು ದಿನಗಳ ಪ್ರವಾಸದ ಬಗ್ಗೆ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ಎ.ಪಿ.ಮಾಹೇಶ್ವರಿ ಮತ್ತು ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್‌.ಸುಬ್ರಹ್ಮಣ್ಯಂ ವಿವರ ನೀಡಿದ್ದಾರೆ.

Advertisement

ಉಗ್ರವಾದ ಹರಡುವರು ಮತ್ತು ಅವರಿಗೆ ಹಣಕಾಸಿನ ನೆರವು ನೀಡುವವರ ವಿರುದ್ಧ ಶೂನ್ಯ ಸಹನೆಯ ನಿಲುವು ತಳೆಯುವಂತೆ ಸೂಚಿಸಿದ್ದಾರೆ. ಜು.1ರಿಂದ ಅಮರನಾಥ ಯಾತ್ರೆ ಶುರುವಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತಾ ಕ್ರಮಗಳು, ಮುನ್ನೆಚ್ಚರಿಕಾ ವಿಚಾರಗಳನ್ನು ಕೈಗೊಂಡಿದೆ ಎಂದು ಎ.ಪಿ.ಮಾಹೇಶ್ವರಿ ಮತ್ತು ಬಿ.ವಿ.ಆರ್‌.ಸುಬ್ರಹ್ಮಣ್ಯಂ ಹೇಳಿದ್ದಾರೆ.

ದೇಶಕ್ಕೇ ಹೆಮ್ಮೆ: ಅನಂತನಾಗ್‌ ಜಿಲ್ಲೆಯಲ್ಲಿ ಜೂ.12ರಂದು ಉಗ್ರಗಾಮಿಗಳ ದಾಳಿಯಿಂದ ಅಸುನೀಗಿದ ಪೊಲೀಸ್‌ ಅಧಿಕಾರಿ ಅರ್ಶದ್‌ ಅಹ್ಮದ್‌ ನಿವಾಸಕ್ಕೆ ಕೇಂದ್ರ ಗೃಹ ಸಚಿವರು ಭೇಟಿ ನೀಡಿದರು. ಅವರ ತಂದೆ-ತಾಯಿ ಮುಶಾ¤ಕ್‌ ಅಹ್ಮದ್‌ ಖಾನ್‌ ಮತ್ತು ಮೆಹಬೂಬಾ ಬೇಗಂರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. “ದೇಶವೇ ನಿಮ್ಮ ಪುತ್ರನ ತ್ಯಾಗದ ಬಗ್ಗೆ ಹೆಮ್ಮೆ ಪಡುತ್ತಿದೆ’ ಎಂದು ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next