Advertisement

ಆರ್‌ಸಿಬಿಯಿಂದ ಬೆಂಗಳೂರು ಹೆಸರು ತೆಗೆಯಿರಿ: ಕೆಎಸ್‌ಸಿಎಗೆ ಪತ್ರ

12:58 PM Apr 02, 2019 | Sriram |

ಬೆಂಗಳೂರು: ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ತಂಡ ಕಳಪೆ ನಿರ್ವಹಣೆ ನೀಡಿ ಸೋಲುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.

Advertisement

ರಾಜ್ಯದಲ್ಲಿ ಇದೀಗ ಟೀಕೆಗಳ ತೀವ್ರತೆ ಹೆಚ್ಚಾಗಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಸಿಬಿ ಯಿಂದ “ಬೆಂಗಳೂರು’ಹೆಸರನ್ನು ತೆಗೆಯಬೇಕು ಎಂದು ಕೆಎಸ್‌ಸಿಎ (ರಾಜ್ಯ ಕ್ರಿಕೆಟ್‌ ಸಂಸ್ಥೆ)ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. “ರಾಜ್ಯದಿಂದ ವಿಶ್ವಕ್ಕೆ ಹಲವಾರು ಕ್ರಿಕೆಟಿಗರನ್ನು ಪರಿಚಯಿಸಲಾಗಿದೆ. ಸಾಧಕರ ಗಣಿಯಾಗಿರುವ ರಾಜ್ಯದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದರೂ ಅವರನ್ನೆಲ್ಲ ಬಿಟ್ಟು ಆರ್‌ಸಿಬಿ ಫ್ರಾಂಚೈಸಿ ಬೇರೆ ರಾಜ್ಯದ ಆಟಗಾರರಿಗೆ ಮಣೆ ಹಾಕಿದೆ. ಇದೀಗ ಸತತ ಸೋಲು ಅನುಭವಿಸಿದೆ. ಇದರಿಂದ ರಾಜ್ಯ ಕ್ರಿಕೆಟಿಗರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ “ಬೆಂಗಳೂರು’ ಹೆಸರನ್ನು ಆರ್‌ಸಿಬಿಯಿಂದ ತೆಗೆಯಬೇಕು ಎಂದು ಸಾಯಿದತ್ತ ಎನ್ನುವವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next