Advertisement

ಕೈಜೋಡಿಸಿ, ನಡುಬಾಗಿಸಿ ನಮಸ್ಕಾರ

03:50 AM Jun 16, 2021 | Team Udayavani |

ರಸ್ತೆಯಲ್ಲಿ ನಡೆದು ಹೋಗುವಾಗ, ಕಚೇರಿಯಲ್ಲಿ, ಅಂಗಡಿಯ ಮುಂದೆ, ಸಂತೆಯಲ್ಲಿ ಹಲವು ಮಂದಿ ಹೊಸಬರು ನಮ್ಮ ಕಣ್ಣಿಗೆ ಬೀಳುತ್ತಾರೆ. ಕೆಲವರೊಂದಿಗೆ ಮಾತುಕತೆ, ವ್ಯವಹಾರ ನಡೆಯುತ್ತದೆ. ಇನ್ನು ಕೆಲವರು ಹೀಗೆ ಎದುರಾಗಿ ಹಾಗೆ ಹೋಗಿಬಿಡುತ್ತಾರೆ. ಇಂಥ ಸಂದರ್ಭ ಗಳಲ್ಲೆಲ್ಲ ತೀರ್ಮಾನಕ್ಕೆ ಬರುವುದು ನಮ್ಮ ಮೂಲಸ್ವಭಾವಗಳಲ್ಲಿ ಒಂದು. “ಈತ ಕೆಟ್ಟವನಿರಬಹುದು’, “ಈಕೆ ಎಷ್ಟು ಚೆಂದ’, “ಅವನ ಮುಖವೇ!’, “ಆಕೆ ಖಂಡಿತ ಗಂಡುಬೀರಿ’ ಎಂದು ನಮ್ಮಷ್ಟಕ್ಕೆ ನಾವೇ ನಿರ್ಧರಿಸಿ ಬಿಡು ತ್ತೇವೆ. ಇದು ನಮ್ಮಲ್ಲಿ ಎಷ್ಟು ರೂಢಿಯಾಗಿದೆ ಎಂದರೆ, ಅದು ನಮ್ಮ ಅರಿವು ಇಲ್ಲದೆಯೇ, ಅಪ್ರಜ್ಞಾಪೂರ್ವಕವಾಗಿ ಆಗಿಬಿಡುತ್ತದೆ. ಕ್ಷಣಾರ್ಧ ದಲ್ಲಿ ತೀರ್ಮಾನ, ನಿರ್ಧಾರ, ತೀರ್ಪು ಆಗಿಬಿಡುತ್ತದೆ.

Advertisement

ಇಂಥ ತೀರ್ಮಾನಗಳು ತಪ್ಪಾಗಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಈ ನಿರ್ಣಯಗಳನ್ನು ನಾವು ತೆಗೆದು ಕೊಳ್ಳುವುದು ನಮ್ಮ ಹಿಂದಿನ ಅನುಭವ ಗಳ ಆಧಾರದಲ್ಲಿ. ಉದಾಹರಣೆಗೆ, ಗಟ್ಟಿ ಧ್ವನಿಯಲ್ಲಿ ಮಾಡನಾಡುವ ವ್ಯಕ್ತಿ ಬಹಳ ಜೋರಿರಬಹುದು ಎನ್ನುವ ತೀರ್ಮಾನ. ಸಿನೆಮಾಗಳಲ್ಲಿ ನೋಡಿ, ಎಷ್ಟೋ ವರ್ಷ ಗಳ ಹಿಂದೆ ಯಾರೊ ಒಬ್ಬ ಜೋರಿನ ವ್ಯಕ್ತಿ ಗಟ್ಟಿ ಧ್ವನಿಯನ್ನು ಹೊಂದಿದ್ದುದು – ಇಂಥ ಅನುಭವಗಳ ಆಧಾರದಲ್ಲಿ ನಮ್ಮ ತೀರ್ಮಾನ ನಡೆಯುತ್ತದೆ. ಈ ಹಳೆಯದರ ಭಾರ ಈ ಕ್ಷಣದ ಆಧಾರ ದಲ್ಲಿ ಯಾವುದೇ ವಸ್ತು ಅಥವಾ ವ್ಯಕ್ತಿಯ ಜತೆಗೆ ವ್ಯವಹರಿಸಲು ನಮಗೆ ಬಿಡುವು ದಿಲ್ಲ. ಆದರೆ ನಿಜಕ್ಕೂ ವರ್ತಮಾನದಲ್ಲಿ ಆ ವ್ಯಕ್ತಿ ಅಥವಾ ವಸ್ತು ಹೇಗಿದ್ದಾರೆ/ ಹೇಗಿದೆ ಎನ್ನುವುದೇ ಬಹಳ ಮುಖ್ಯ.

ಹಾಗಾಗಿಯೇ ಹೊಸಬರನ್ನು ಕಂಡೊಡನೆ ತಲೆಬಾಗಿ ಎರಡೂ ಕೈ ಮುಗಿದು ನಮಸ್ಕರಿಸುವುದು. ನಾವು ತಲೆ ಬಾಗಿ ನಮಿಸಿದಾಗ ನಮ್ಮ ತೃಪ್ತಿ – ಅತೃಪ್ತಿಗಳು ಮೃದುವಾಗುತ್ತವೆ. ಏಕೆಂದರೆ ಎದುರಿಗಿರುವ ವ್ಯಕ್ತಿಯೂ ನಮ್ಮ ಹಾಗೆಯೇ ಸೃಷ್ಟಿಯ ಭಾಗವಾಗಿರುವುದನ್ನು ನಾವು ಮನಗಾಣುತ್ತೇವೆ.

ಈ ಜಗತ್ತಿನಲ್ಲಿ ಇರುವ ಪ್ರತಿಯೊಂದರಲ್ಲಿಯೂ ಸೃಷ್ಟಿಯ ಕೈವಾಡ ಇದೆ. ಸೃಷ್ಟಿಯ ಮೂಲ ಪ್ರತೀ ಅಣು-ಪರಮಾಣುಗಳಲ್ಲಿ ಇದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ನೆಲವನ್ನು ನೋಡುತ್ತ ತಲೆ ಬಗ್ಗಿಸಿ ನಮಿಸುವ ಸಂಪ್ರದಾಯ ಇದೆ. ಗಂಡಸು, ಹೆಂಗಸು, ಮಗು, ಗೋವು, ಮರ- ಎಲ್ಲದಕ್ಕೂ ನಾವು ತಲೆಬಾಗಿಸಿ ನಮಸ್ಕರಿ ಸುತ್ತೇವೆ. ಇದು ಸೃಷ್ಟಿಯ ಕೈವಾಡ ನಮ್ಮೊಳಗೂ ಇದೆ ಎಂಬುದನ್ನು ಸತತ ಜಾಗೃತಿಯಾಗಿ ಇರಿಸುವ ಕ್ರಿಯೆ. ನಾವು ಇದನ್ನು ಅರಿತುಕೊಂಡರೆ ಪ್ರತೀ ಬಾರಿ ನಮಿಸಿದಾಗಲೂ ಪರಮೋಚ್ಚ ಸೃಷ್ಟಿಯ ಕಡೆಗೆ ನಮ್ಮ ಗೌರವ ಎಂಬುದು ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರುತ್ತದೆ.

ನಮ್ಮ ಹಸ್ತಗಳಲ್ಲಿ ಲಕ್ಷಾಂತರ ನರಾಗ್ರಗಳಿವೆ. ನಮ್ಮ ನಾಲಗೆ ಮತ್ತು ಧ್ವನಿ ಮಾತನಾಡುವುದಕ್ಕಿಂತ ಹೆಚ್ಚಿನದನ್ನು ನಮ್ಮ ಹಸ್ತಗಳು ಹೇಳುತ್ತವೆ. ಯೋಗದಲ್ಲಿ ಮುದ್ರೆಗಳು ಹೇಳುವುದು ಕೂಡ ಇದನ್ನೇ. ನಮ್ಮ ಹಸ್ತಗಳನ್ನು ಜತೆ ಸೇರಿಸಿದೊಡನೆಯೇ ನಮ್ಮ ತೃಪ್ತಿ- ಅತೃಪ್ತಿಗಳು, ಇಬ್ಬಗೆಯ ವ್ಯಕ್ತಿತ್ವ, ಪರ- ವಿರೋಧಗಳು, ಬಯಕೆ- ತಿರಸ್ಕಾರಗಳು ತಟಸ್ಥವಾಗುತ್ತವೆ. ನಾವು ಏನು ಎನ್ನುವುದರ ಅಭಿವ್ಯಕ್ತಿ ಏಕತ್ರವಾಗುತ್ತದೆ. ನಮ್ಮೊಳಗಿನ ಎಲ್ಲ ಶಕ್ತಿ ಸಂಪನ್ಮೂಲಗಳು ಒಂದಾಗಿ ಸಕ್ರಿಯವಾಗುತ್ತವೆ.

Advertisement

ನಮಸ್ಕಾರ ಎನ್ನುವುದು ಸಂಪ್ರದಾಯದ ವಿಚಾರ ಮಾತ್ರ ಅಲ್ಲ. ನಾವು ಯಾವುದಾದರೊಂದು ಸಾಧನೆ ಮಾಡು ತ್ತಿರುವಾಗ, ಜಪ ತಪಗಳ ಸಂದರ್ಭ, ಧಾರ್ಮಿಕ ಕ್ರಿಯೆಗಳ ಸಂದರ್ಭದಲ್ಲಿ ಹಸ್ತ ಮತ್ತು ಬೆರಳುಗಳಿಂದ ವಿವಿಧ ಮುದ್ರೆಗಳನ್ನು ಮಾಡುತ್ತೇವೆ. ಅದರಿಂದ ಭಿನ್ನ ನಮೂನೆಯಲ್ಲಿ ಶಕ್ತಿ ಸಂಚಯನ ವಾಗುತ್ತದೆ. ವ್ಯಕ್ತಿಯೊಬ್ಬನನ್ನು ಕಂಡು ನಮಸ್ಕರಿಸುವುದರಿಂದ ಸಕಾರಾತ್ಮಕ ಶಕ್ತಿಯ ತರಂಗಗಳು ಆತ ನಮ್ಮೊಡನೆ ಚೆನ್ನಾಗಿರುವಂತೆ ಪ್ರೇರೇಪಿಸುತ್ತವೆ.
( ಸಾರ ಸಂಗ್ರಹ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next