Advertisement

ನಾಡಿಗೆ ನಾಲ್ವಡಿಯವರ ಕೊಡುಗೆ ಅಪಾರ

04:49 PM Jun 05, 2022 | Team Udayavani |

ಕೆ.ಆರ್‌.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದ ಮಹಾರಾಜರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೈ.ಡಿ.ರಾಜಣ್ಣ ಹೇಳಿದರು.

Advertisement

ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ನಾಲ್ವಡಿಯವರು 1895ರಲ್ಲಿ ಪಟ್ಟಾಭಿಕ್ತರಾದರೂ ಕೇವಲ 10 ವರ್ಷದ ಬಾಲಕರಾಗಿದ್ದರಿಂದ ಅವರ ತಾಯಿ ಮಹಾರಾಣಿ ವಾಣಿವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಡೆಸಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿಗಳನ್ನು ನಿಗಾ ವಹಿಸಿ ನಡೆಸಿದ್ದರಿಂದ ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ದೊರಕಿದರು ಎಂದರು.

ನಾಲ್ವಡಿಯವರು ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ ಮತ್ತಿತರ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ನಾವು ಸದಾ ಸ್ಮರಿಸಬೇಕು ಎಂದ ಅವರು, ಇಡೀ ವಿಶ್ವವೇ ಬೆರಗಾಗುವ ರೀತಿಯಲ್ಲಿ ಅಂದೇ ಮೈಸೂರು ವಿಶ್ವದ್ಯಾನಿಲಯವನ್ನು ಸ್ಥಾಪಿಸಿದ ನಾಲ್ವಡಿಯವರು ಮುಂದಿನ ನೂರಾರುವರ್ಷಗಳ ದೂರದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಜಿ.ಡಿಂಡಿಮಶಂಕರ್‌ ಮಾತನಾಡಿ, ಕೆ.ಆರ್‌.ನಗರ ಪಟ್ಟಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರ ಕೊಡುಗೆ ಅಪಾರವಾದುದು. ಆದ್ದರಿಂದ ಪಟ್ಟಣಕ್ಕೆ ಕೃಷ್ಣರಾಜನಗರ ಎಂದು ಅವರ ಹೆಸರನ್ನೇ ಇಡಲಾಗಿದೆ. ದೇಶದಲ್ಲಿಯೇ ನೀಲಿನಕ್ಷೆ ತಯಾರಿಸಿ ನಿರ್ಮಿಸಿದ ಯೋಜಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬೇರೆಡೆಯಿಂದ ಬಂದ ಸರ್ಕಾರಿ ನೌಕರರು ಒಮ್ಮೆ ಇಲ್ಲಿಗೆಬಂದರೆ ಪಟ್ಟಣದ ಸೌಂದರ್ಯಕ್ಕೆ ಮಾರುಹೋಗಿ ಇಲ್ಲಿಯೇ ವಾಸಮಾಡತೊಡಗುತ್ತಾರೆ ಎಂದು ಹೇಳಿದರು.

Advertisement

ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣದ ಪರಿಣಾಮ ಎಡತೊರೆ ಇಂದು ಕೃಷ್ಣರಾಜನಗರವಾಗಿ ಬಹಳ ಸುಸಜ್ಜಿತವಾಗಿ ಪಟ್ಟಣವನ್ನು ನಾಲ್ವಡಿಯವರು ನಿರ್ಮಾಣ ಮಾಡಿದ್ದಾರೆ. ಪಟ್ಟಣದ ಜನತೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್‌, ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷಜಿ.ಪ್ರಕಾಶ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ, ಪದಾಧಿಕಾರಿಗಳಾದ ಸಿ.ಆರ್‌. ಉದಯಕುಮಾರ್‌, ಎಚ್‌.ಎಸ್‌.ಸ್ವಾಮಿ, ಭಾಸ್ಕರ್‌, ರಾಮಕೃಷ್ಣ, ಮಧುವನ ಹಳ್ಳಿರಾಜು, ಬಿ.ಎಲ್‌. ಮಹದೇವ, ಎಚ್‌.ಕೆ.ಪುಟ್ಟೇಗೌಡ, ನಾರಾಯಣ್‌, ರಾಜಣ್ಣ, ಕೃಷ್ಣಯ್ಯ, ಗೋಪಾಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next