Advertisement
8 ಸಾ.ಅಡಿ ಎತ್ತರದಲ್ಲಿ ಹಾರಾಟಏರ್ಕ್ರಾಫ್ಟ್ಆ್ಯಂಡ್ ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ ಮೆಂಟ್ (ಎಎಸ್‌ಟಿಇ) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿಂಗ್ ಕಮಾಂಡರ್‌ಗಳಾದ ಕೆ.ವಿ. ಪ್ರಕಾಶ್ ಹಾಗೂ ಎನ್‌ಡಿಎಸ್ ರೆಡ್ಡಿ ಈ ವಿಮಾನವನ್ನು ಪರೀಕ್ಷೆಗೆ ಒಳಪಡಿಸಿದರು. ಇವರು ವಿಮಾನವನ್ನು ಭೂಮಿಯಿಂದ 7ರಿಂದ 8 ಸಾವಿರ ಅಡಿ ಎತ್ತರಕ್ಕೆ ಕೊಂಡೊಯ್ದು, ಅಲ್ಲಿ ಗಂಟೆಗೆ 60ರಿಂದ 70 ನಾಟ್ ವೇಗದಲ್ಲಿ ಚಲಾಯಿಸಿದರು.
ಈ ವಿಮಾನವನ್ನು ಅಧಿಕೃತ ತರ ಬೇತಿ ಗಾಗಿ ಬಳಸಬೇಕೆಂದರೆ ಅದಕ್ಕೆ ನಾಗರಿಕ ವಿಮಾನ ಸೇವೆಗಳ ಮಹಾ ನಿರ್ದೇಶಕರ ಕಚೇರಿಯಿಂದ (ಡಿಜಿಸಿಎ) ಅನುಮತಿ ಪತ್ರ ಅಗತ್ಯ. ಆ ಅನುಮತಿ ಸಿಗಬೇಕಿದ್ದರೆ ಈ ಪರೀಕ್ಷೆ ಅಗತ್ಯವಾಗಿತ್ತು. ಅದರಲ್ಲೂ, ವಿಮಾನವು ಹಾರಾಡುತ್ತಿರುವಾಗಲೇ ಇದರ ಎಂಜಿನ್‌ನ ಇನ್-ಫ್ಲೈಟ್ ಡಿಲೈಟ್ ಎಂಬ ಪರೀಕ್ಷೆ ನಡೆಸಲಾಗುತ್ತದೆ. ಅದು ತುಂಬಾ ನಿರ್ಣಾಯಕ ಹಂತದ್ದು ಎಂದು ಹೇಳಲಾಗಿದೆ. ಆ ಎಲ್ಲ ದೃಷ್ಟಿಯಿಂದ, ಪರೀಕ್ಷೆಯಲ್ಲಿ ಇದು ಉತ್ತೀರ್ಣವಾಗಿರುವುದೊಂದು ಮೈಲುಗಲ್ಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement