ವೆಲ್ಲೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿ ಶ್ರೀಹರನ್ ಗುರುವಾರ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾಳೆ. ಪುತ್ರಿಯ ವಿವಾಹವನ್ನು ನೆರವೇರಿ.ಸಲೆಂದು ಆಕೆಗೆ ನ್ಯಾಯಾಲಯವು 30 ದಿನಗಳ ಷರತ್ತುಬದ್ಧ ಪೆರೋಲ್ ನೀಡಿದೆ. 7 ಮಂದಿ ಹಂತಕರ ಪೈಕಿ ಒಬ್ಬಳಾಗಿ ರುವ ನಳಿನಿ 1991ರಿಂದಲೂ ಜೈಲು ವಾಸ ಅನುಭವಿಸುತ್ತಿ ದ್ದಾಳೆ. ಇದೇ ಮೊದಲ ಬಾರಿ ಈಕೆಗೆ 30 ದಿನಗಳ ದೀರ್ಘಾವಧಿಯ ಪೆರೋಲ್ ಸಿಕ್ಕಿದೆ. ಆದರೆ, ಮಾಧ್ಯಮಗಳ ಜತೆ ಮಾತನಾಡಲು, ರಾಜಕೀಯ ಪಕ್ಷಗಳು ಅಥವಾ ರಾಜಕೀಯ ನೇತಾರರೊಂದಿಗೆ ಮಾತನಾಡದಂತೆ ಆಕೆಗೆ ನಿರ್ಬಂಧ ಹೇರಲಾಗಿದೆ. ಉತ್ತಮ ನಡತೆ ತೋರಿಸಬೇಕು, ವೆಲ್ಲೂರು ಜಿಲ್ಲೆ ದಾಟಿ ಎಲ್ಲೂ ಹೋಗಬಾರದು, ಪೊಲೀಸ್ ಠಾಣೆಗೆ ಭೇಟಿ ನೀಡಿ, ರಿಜಿಸ್ಟ್ರಿಗೆ ಸಹಿ ಹಾಕುತ್ತಿರಬೇಕು ಎಂಬ ಷರತ್ತುಗಳನ್ನು ಮದ್ರಾಸ್ ಹೈಕೋರ್ಟ್ ವಿಧಿಸಿದೆ. ಪ್ರಸಕ್ತ ತಿಂಗಳಾರಂಭದಲ್ಲಿ ಹೈಕೋರ್ಟ್‌ನಲ್ಲಿ ಖುದ್ದಾಗಿ ವಾದಿಸಿದ್ದ ನಳಿನಿ, ತನಗೆ 6 ತಿಂಗಳ ಪೆರೋಲ್ ನೀಡುವಂತೆ ಕೋರಿದ್ದಳು. ಆದರೆ, ಅದಕ್ಕೆ ನಿರಾಕರಿಸಿದ್ದ ನ್ಯಾಯಪೀಠ 30 ದಿನಗಳ ಪೆರೋಲ್ಗೆ ಅವಕಾಶ ನೀಡಿತ್ತು.