Advertisement

ನಿರಪರಾಧಿಗಳ ಮೇಲಿನ ಹಲ್ಲೆ  ಖಂಡನೀಯ : ನಳಿನ್‌

02:20 AM Jul 14, 2017 | Team Udayavani |

ಉಳ್ಳಾಲ: ನಿರಪರಾಧಿಗಳ ಮೇಲಿನ ಹಲ್ಲೆ ಖಂಡನೀಯ. ಅಮಾಯಕರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಂಸದ ನಳಿನ್‌ ಕಟೀಲ್‌ ಹೇಳಿದರು. ಉಳ್ಳಾಲ ಆಜಾದ್‌ ನಗರದಲ್ಲಿ ಮಂಗಳವಾರ ದುಷ್ಕರ್ಮಿಗಳ ದಾಳಿಗೆ ಒಳಗಾದ ಉಳ್ಳಾಲ ಉಳಿಯ ನಿವಾಸಿ ಟೆಂಪೋ ಚಾಲಕ ಆಸ್ಟಿನ್‌ ಅವರನ್ನು ಇಲ್ಲಿನ ಸರೋಜ್‌ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರು ಮಾತನಾಡಿದರು. ದುಡಿಯುವ ವರ್ಗದ ಮೇಲೆ ನಡೆಯುತ್ತಿರುವ ಹಲ್ಲೆ ಖಂಡನೀಯ. ಯಾರೂ ಭಯಭೀತಗೊಳ್ಳದಿರಿ. ಪೊಲೀಸ್‌ ಬಂದೋಬಸ್ತ್ ಇನ್ನಷ್ಟು ಹೆಚ್ಚಿಸಲು ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಮುಂದೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಂದೋಬಸ್ತ್  ಏರ್ಪಡಿಸಿದ್ದಾರೆ ಎಂದರು.

Advertisement

ವಿಧಾನಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿ ಯಾರ್‌, ಅಲ್ಪಸಂಖ್ಯಾಕ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ| ಮುನೀರ್‌ ಬಾವಾ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್‌, ಉಪಾಧ್ಯಕ್ಷ ಯಶವಂತ ಅಮೀನ್‌, ಫಝಲ್‌ ಅಸೈಗೋಳಿ, ಅಝYರ್‌ ಮುಡಿಪು, ರಾಜೇಶ್‌ ಉಳ್ಳಾಲ, ಪೊಡಿಮೋನು ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಂಸದರು ಇತ್ತೀಚೆಗೆ ನಿಧನ ಹೊಂದಿದ ಉಳ್ಳಾಲ ಪುರಸಭೆಯ ಕೌನ್ಸಿಲರ್‌  ಹನೀಫ್‌ ಕೋಟೆಪುರ ಅವರ ನಿವಾಸಕ್ಕೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next