ಮಂಗಳೂರು: ಇಸ್ರೇಲ್ ನಲ್ಲಿರುವ ಕರಾವಳಿಯ ಜನರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತದೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇಸ್ರೇಲ್ ನಲ್ಲಿ ಹಮಾಸ್ ಬಂಡುಕೋರರು ನಡೆಸಿರುವ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದ್ದು ಇದೀಗ ಇಸ್ರೇಲ್ ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು ಅಲ್ಲದೆ ಉದ್ಯೋಗ ಅರಸಿ ಕರಾವಳಿಯಾ ಸಾವಿರಾರು ಮಂದಿ ಇದೀಗ ಇಸ್ರೇಲ್ ನಲ್ಲಿ ಸಿಲುಕಿದ್ದಾರೆ ಈ ಕುರಿತು ಮಾತನಾಡಿದ ನಳಿನ್ ಕುಮಾರ್ ಕಟೀಲ್ ಯಾರು ಭಯ ಪಡಬೇಕಾಗಿಲ್ಲ ಇಸ್ರೇಲ್ ನಲ್ಲಿ ಐದು ಸಾವಿರ ದ.ಕ ಜಿಲ್ಲೆಯ ಜನರು ಇದ್ದಾರೆಂಬ ಮಾಹಿತಿ ಇದೆ ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ, ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸ್ತೇವೆ ಅಲ್ಲದೆ ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದರು.
ಕರಾವಳಿಗರ ರಕ್ಷಣೆ ಕುರಿತು ಸಚಿವ ಮುರಳೀಧರನ್ ಅವರ ಜೊತೆಗೂ ನಾನು ಮಾತನಾಡಿದ್ದೇನೆ, ದ.ಕ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಇಸ್ರೇಲ್ ವಾಸಿಗಳ ಪೂರ್ಣ ಮಾಹಿತಿ ತರಿಸಿ ಕೊಳ್ಳಲು ಸೂಚಿಸ್ತೇನೆ ಯುದ್ಧದ ಪರಿಸ್ಥಿತಿ ಇದ್ದಾಗ ಅವರ ಮನೆಯವರಿಗೆ ಭಯದ ವಾತಾವರಣ ಇರುತ್ತವೆ, ಈಗಲೂ ಇಸ್ರೇಲ್ ನಲ್ಲಿದ್ದವರು ಸುರಕ್ಷಿತವಾಗಿ ಇದ್ದರೂ ಭಯದ ವಾತಾವರಣ ಇದ್ದೆ ಇರುತ್ತದೆ, ರಷ್ಯಾ-ಉಕ್ರೇನ್ ಯುದ್ದ ಆದಾಗಲೂ ಇಂಥದ್ದೇ ಪರಿಸ್ಥಿತಿ ಇತ್ತು ಆಗಲೂ ಅವರ ಮನೆಗಳಿಗೆ ತೆರಳಿ ಸಮಾಧಾನ ಹೇಳಿದ್ದೆವು, ಮೋದಿ ಸರ್ಕಾರ ಆಗಲೂ ಅಲ್ಲಿದ್ದ ಭಾರತೀಯರ ರಕ್ಷಣೆ ಮಾಡಿತ್ತು ಅದೇ ಕೆಲಸವನ್ನು ಈಗಲೂ ಮಾಡುತ್ತದೆ ಎಂದು ಹೇಳಿದರು.
ನಾನು ಎಂಬೆಸ್ಸಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ, ಯಾರೂ ಭಯ ಪಡೋ ಅಗತ್ಯ ಇಲ್ಲ, ಏನೇ ಆತಂಕ ಇದ್ದರೂ ನನ್ನನ್ನ ನೇರವಾಗಿ ಸಂಪರ್ಕಿಸಿ ಎಂದು ಹೇಳಿದರು.
ಇದನ್ನೂ ಓದಿ: Papillon: ಪ್ಯಾಪಿ ನೀನೆಷ್ಟು ನತದೃಷ್ಟ? ಇಲ್ಲಿಂದ ತಪ್ಪಿಸಿಕೊಳ್ಳುವ ಮಾರ್ಗ ಯಾವುದು ?