ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ ಅವರಿಗೆ ಈ ಹಿಂದೆ ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ಕೆಲಸ ಕೊಡಿಸಿತ್ತು. ಇದೀಗ ಕಾಂಗ್ರೆಸ್ ಸರಕಾರದ ಅವರನ್ನು ಉದ್ಯೋಗದಿಂದ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಈ ರೀತಿಯ ದ್ವೇಷ ಸಾಧಿಸದೆ ಅವರಿಗೆ ಮತ್ತೆ ಕೆಲಸ ನೀಡಬೇಕು. ಒಂದು ವೇಳೆ ಕೆಲಸ ನೀಡದಿದ್ದರೆ ಕೇಂದ್ರ ಸರಕಾರ ಸಾಮ್ಯದ ಸಂಸ್ಥೆಗಳನ್ನು ಕೆಲಸ ಕೊಡಿಸುತ್ತೇವೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದ ವೇಳೇ ಉಚಿತ ಗ್ಯಾರೆಂಟಿ ಭರವಸೆ ನೀಡಿದ ಕಾಂಗ್ರೆಸ್ ಇನ್ನೂ ಅದನ್ನು ಈಡೇರಿಸಿಲ್ಲ. ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿಲ್ಲ. ಒಂದು ತಿಂಗಳ ಒಳಗಾಗಿ ಉಚಿತ ಘೋಷಣೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಪೂರ್ಣ ಬಹುಮತ ಪಡೆದಿರುವ ಕಾಂಗ್ರೆಸ್ ಸಮಸ್ಯೆಗೆ ಪರಿಹಾರ ಮಾಡುವ ಬದಲು ಅಧಿಕಾರ ಹಂಚಿಕೆಯ ಚರ್ಚೆಯಲ್ಲಿದೆ. ಐದು ಉಚಿತ ಯೋಜನೆಗಳನ್ನು 20 ದಿನಗಳಾದರೂ ಹಂಚಿಕೆ ಮಾಡಿಲ್ಲ ಅಲ್ಲದೆ ಸರ್ಕಾರಿ ನೌಕರರು ಏಟು ತಿನ್ನುವ ಪರಿಸ್ಥಿತಿ ಬಂದಿದೆ, ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಹೋದವರಿಗೆ ಏಟು ಬೀಳುತ್ತಿದೆ, ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ಮಾಡಲಾಗಿದೆ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗಿದೆ. ಕಾಂಗ್ರೆಸ್ ದ್ವೇಷ ಸಾಧನೆ ಮೂಲಕ ಬಿಜೆಪಿಯನ್ನು ಕಟ್ಟಿಹಾಕುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರನ್ನು ಬಿಟ್ಟು ಹಲ್ಲೆ,ಹತ್ಯೆ ಮಾಡುತ್ತಿದೆ, ಕಾಂಗ್ರೆಸ್ ಗೆ ತಾಕತ್ ಇದ್ರೆ ಪಾಕ್ ಪರ ಜೈಕಾರ ಕೂಗಿದವರನ್ನು ಬಂಧಿಸಿ ಎಂದು ಕಿಡಿಕಾರಿದರು,
ಪ್ರವೀಣ್ ನೆಟ್ಟಾರ್ ಪತ್ನಿಗೆ ನೀಡಿದ್ದ ಉದ್ಯೋಗವನ್ನು ಕಾಂಗ್ರೆಸ್ ಕಿತ್ತುಕೊಂಡಿದೆ, ಅನುಕಂಪದ ಆಧಾರದ ಮೇಲೆ ಮತ್ತೆ ಉದ್ಯೋಗ ನೀಡಿ ಎಂದು ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ ಅವರು ನೀವು ಉದ್ಯೋಗ ನೀಡದಿದ್ದರೂ ಕೇಂದ್ರದ ಎನ್ಎಂಪಿಟಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸ್ಪೀಕರ್ ವಿರುದ್ಧ ವ್ಯಂಗ್ಯ: ಚಿಕ್ಕಮಗಳೂರು ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು