Advertisement

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

04:28 PM Oct 29, 2020 | keerthan |

ಚಿಕ್ಕಮಗಳೂರು: ಜನರಿಗೆ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಬಂದಿದೆ, ಚುನಾವಣೆಗೂ ಮುನ್ನವೇ ಬಿಜೆಪಿ ಮೊದಲ ಸ್ಥಾನಲ್ಲಿದೆ. ವಿಧಾನಸಭೆಯಲ್ಲಿ ನಮಗೆ 117 ಸ್ಥಾನವಿದೆ, ನಮಗೆ ಒಳಒಪ್ಪಂದ ಅವಶ್ಯಕತೆ ಇಲ್ಲ. ಒಳಒಪ್ಪಂದ ಮಾಡಿದರೆ ನಾವು ಗಟ್ಟಿಯಾಗಲ್ಲ, ರಾಷ್ಟ್ರೀಯ ಪಕ್ಷವೊಂದು ಯಾಕೆ ಒಳಒಪ್ಪಂದ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರ್.ಆರ್.ನಗರ ಮತ್ತು ಶಿರಾ  ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ. ಎರಡೂ ಕಡೆಯೂ ಕಾಂಗ್ರೆಸ್ ನಮಗೆ ಪ್ರಬಲ ಸ್ಪರ್ಧಿ, ಜೆಡಿಎಸ್ ಗೆ ಮೂರನೇ ಸ್ಥಾನ. ಆರ್.ಆರ್.ನಗರ 50 ಸಾವಿರ, ಶಿರಾ 15-20 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವಾಗುತ್ತದೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ

ಎರಡೂ ಕ್ಷೇತ್ರದ ಮತದಾರರು ಕಾಂಗ್ರೆಸ್-ಜೆಡಿಎಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶಿರಾದಲ್ಲಿ ಹತ್ತಾರು ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಗೆಲ್ಲಿಸಿದ್ದೇವೆ. ಜಯಚಂದ್ರ ಎರಡು ಬಾರಿ ಗೆದ್ದರೂ ಕ್ಷೇತ್ರಕ್ಕೆ ಏನೂ ಮಾಡಿಲ್ಲ, ಆಶ್ವಾಸನೆಗಳನ್ನೂ ಈಡೇರಿಸಿಲ್ಲ. ಕುಮಾರಸ್ವಾಮಿ ಸರ್ಕಾರವಿದ್ದಾಗಲೂ ಕ್ಷೇತ್ರಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಯಡಿಯೂರಪ್ಪ ಸಮಸ್ಯೆಗಳಿಗೆ ಉತ್ತರಿಸಿದ್ದಾರೆ, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿರುವುದು. ಹೀಗಾಗಿ ಜನರಿಗೆ ನಮ್ಮ ಮೇಲೆ ವಿಶ್ವಾಸ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next