Advertisement

Nalin Kumar Kateel ಜನರು ಬಂಡಾಯಕ್ಕೆ ಮಣೆ ಹಾಕುವುದಿಲ್ಲ

12:07 AM Jun 02, 2024 | Team Udayavani |

ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಹಕ್ಕಿದೆ. ಆದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ಮತದಾರರು ಬಂಡಾಯಕ್ಕೆ ಮಣೆ ಹಾಕುವುದಿಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ 1988ರಿಂದಲೂ ಬಿಜೆಪಿಗೆ ಶಕ್ತಿ ತುಂಬಿದ ಕ್ಷೇತ್ರಗಳು. ಈ ಬಾರಿಯ ಚುನಾವಣೆಯಲ್ಲಿಯೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುವರು ಎಂದರು.

ಕಾಂಗ್ರೆಸ್‌ ಹಿಂದೂ ವಿರೋಧಿ ನೀತಿ
ಕಾಂಗ್ರೆಸ್‌ ತುಷ್ಟೀಕರಣ ನೀತಿಯನ್ನು ಮುಂದುವರಿಸಿ ಸುಮೊಟೊ ಪ್ರಕರಣಕ್ಕೆ ಬಿ ರಿಪೋರ್ಟ್‌ ಹಾಕಿ, ಕೇಸು ದಾಖಲಿಸಿದ ಅಧಿಕಾರಿಯನ್ನು ರಜೆ ಮೇಲೆ ಕಳುಹಿಸಿದೆ. ಕಾಂಗ್ರೆಸ್‌ ಹಿಂದೂ ವಿರೋಧಿ ನೀತಿಯನ್ನು ನಿರಂತರವಾಗಿ ಪ್ರದರ್ಶಿಸುತ್ತಿದೆ ಎಂದ ಅವರು, ನಮಾಜ್‌ ವಿರುದ್ಧ ಹೇಳಿಕೆ ಕೊಟ್ಟದ್ದಕ್ಕಾಗಿ ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಶಾಸಕರಾದ ಡಾ| ಭರತ್‌ ಶೆಟ್ಟಿ ವೈ., ಹರೀಶ್‌ ಪೂಂಜ, ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಹರಿಕೃಷ್ಣ ಬಂಟ್ವಾಳ್‌, ಕ್ಯಾ| ಗಣೇಶ್‌ ಕಾರ್ಣಿಕ್‌, ವಿಕಾಸ್‌ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಕೊನೆ ತನಕವೂ ಕಾರ್ಯಕರ್ತ
ಪಕ್ಷ ನನಗೆ ಸಂಸದನಗಾಲು, ರಾಜ್ಯಾಧ್ಯಕ್ಷನಾಗಲು ಅವಕಾಶ ಕಲ್ಪಿಸಿದೆ. ಸಿಕಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ಇದೆ. ಕೊನೆ ತನಕವೂ ಕಾರ್ಯಕರ್ತನಾಗಿ ಇರುವೆ ಎಂದು ಪ್ರಶ್ನೆಯೊಂದಕ್ಕೆ ನಳಿನ್‌ ಉತ್ತರಿಸಿದರು.

Advertisement

ಎನ್‌ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ
ಮಂಗಳೂರು: ವಿಧಾನ ಪರಿಷತ್‌ ನೈಋತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಶಾಸಕ ಉಮಾನಾಥ ಕೊಟ್ಯಾನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಾಜಿ ಶಾಸಕ ರಘುಪತಿ ಭಟ್‌ ಚುನಾವಣೆಗೆ ಸ್ಪರ್ಧಿಸಿದ್ದರಲ್ಲಿ ತಪ್ಪೇನಿಲ್ಲ, ಆದರೆ ನಮ್ಮ ಅಧಿಕೃತ ಅಭ್ಯರ್ಥಿಗಳು ಡಾ| ಧನಂಜಯ ಸರ್ಜಿ ಮತ್ತು ಭೋಜೇಗೌಡರು. ಅವರು ಈಗಾಗಲೇ 2-3 ಸುತ್ತಿನಲ್ಲಿ ಮತದಾರರ ಸಂಪರ್ಕ ಮಾಡಿದ್ದಾರೆ. ಗೆಲುವಿನ ವಿಶ್ವಾಸವಿದೆ ಎಂದರು.

ಎಫ್‌ಐಆರ್‌ ಖಂಡನೀಯ: ಎಲ್ಲರಿಗೂ ಅವರವರ ಧರ್ಮದಲ್ಲಿ ಧಾರ್ಮಿಕ ಕಾರ್ಯ ಮಾಡಲು ಹಕ್ಕಿದೆ. ಆದರೆ ಸಾರ್ವಜನಿಕ ರಸ್ತೆಯಲ್ಲಿ ಮಾಡುವುದು ತಪ್ಪು. ಈ ಬಗ್ಗೆ ಪ್ರಕರಣದ ಬಗ್ಗೆ ತನಿಖೆ ಮಾಡದೇ ಕೈ ಬಿಟ್ಟದ್ದು ಮತ್ತೂಂದು ತಪ್ಪು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದವರ ವಿರುದ್ಧ ಪ್ರಕರಣ ಹಾಕಿ ಕಾಂಗ್ರೆಸ್‌ ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next