Advertisement

ಯುವರಾಜ್ ʼಆʼ ಸಹನಟಿ ಜತೆ ಹೊಟೇಲ್‌ ರೂಮ್‌ ನಲ್ಲಿ ಸಿಕ್ಕಿಬಿದ್ದಿದ್ದ.. ಶ್ರೀದೇವಿ ಭೈರಪ್ಪ

09:28 AM Jun 11, 2024 | Team Udayavani |

ಬೆಂಗಳೂರು: ನಟ ಯುವರಾಜ್‌ ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಎರಡೂ ಕಡೆಯಿಂದ ಗಂಭೀರವಾದ ಆರೋಪ- ಪ್ರತ್ಯಾರೋಪಗಳು ಕೇಳಿ ಬರುತ್ತಿದೆ.

Advertisement

ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಯುವರಾಜ್‌ ಕುಮಾರ್‌ ಅವರ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಶ್ರೀದೇವಿ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಿದ್ದರು.

ಯುವ ಪರ ವಕೀಲ ಹೇಳಿದ್ದೇನು?:

“ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ಆಧಾರದ ಮೇಲೆ ನಾವು ಅರ್ಜಿ ಹಾಕಿದ್ದೇವೆ. 54 ಪುಟಗಳ ಡಿವೋರ್ಸ್ ಪಿಟೀಷನ್‌ ಹಾಕಿದ್ದೇವೆ. ಶ್ರೀದೇವಿ ಭೈರಪ್ಪ ಅವರಿಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಯುವ ಹಾಗೂ ಶ್ರೀದೇವಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ತಿಂಗಳ ಹಿಂದೆ ರಾಧಯ್ಯನಿಗೆ ಮದುವೆ ಆಗಿದೆ. ಇದರಿಂದ ಶ್ರೀದೇವಿ ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಈಗ ಯುವನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದೈಹಿಕವಾಗಿ ಸಂಪರ್ಕಿಸಲು ಹೋದಾಗ ಅವಮಾನ ಮಾಡುತ್ತಿದ್ದರು. ಹಲ್ಲುಜ್ಜಿಕೊಂಡು ಬಾ, ಸ್ನಾನ ಮಾಡು ಅಂತ ಹೇಳುತ್ತಿದ್ದರು. ನೀನು ದೈಹಿಕವಾಗಿ ಫಿಟ್‌ ಇಲ್ಲ, ರಾಧಯ್ಯ ಫಿಟ್‌ ಇದ್ದಾನೆ ಎಂದು ಅವಮಾನ ಮಾಡುತ್ತಿದ್ದರು. ರಾಧಯ್ಯನ ಹೆಂಡತಿ ಮನೆಯಲ್ಲಿ ಇಲ್ಲದ್ದಿದ್ದಾಗ ಆತನ ಮನೆಗೆ ಹೋಗುತ್ತಾರೆ. ಈ ರೀತಿಯ ಸಂಬಂಧ ಇಟ್ಟುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಲೀಗಲ್‌ ನೋಟಿಸ್‌ ಗೆ ಉತ್ತರಿಸಿದ್ದೇನೆ ಎಂದು ಶ್ರೀದೇವಿ ಹೇಳಿದ್ದರು. ಇದೀಗ ಲೀಗಲ್‌ ನೋಟಿಸ್‌ ನಲ್ಲಿ ಏನು ಹೇಳಿದ್ದಾರೆ ಎನ್ನುವುದು ಗೊತ್ತಾಗಿದ್ದು, ಅನೈತಿಕ ಸಂಬಂಧ ಇಟ್ಟುಕೊಂಡಿದ್ದೇನೆ ಎಂದಿರುವ ಯುವ ವಿರುದ್ಧ ಶ್ರೀದೇವಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಮೇ.30 ರಂದು ಅವರು ನೋಟಿಸ್‌ ಗೆ ಉತ್ತರಿಸಿದ್ದಾರೆ.

Advertisement

ಸಪ್ತಮಿ ಗೌಡ ಜತೆ ಯುವ ಸಂಬಂಧ ಹೊಂದಿದ್ದಾರೆ: 26-5-2019 ರಂದು  5 ವರ್ಷಗಳ ಕಾಲ ಪ್ರೀತಿಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮಾಡಿಕೊಂಡೆವು. ಆ ಸಮಯದಲ್ಲಿ ಯುವರಾಜ್‌ ಕುಮಾರ್‌ ಅವರಿಗೆ ಕೆಲಸವಿರಲಿಲ್ಲ. ಅವರ ಆರ್ಥಿಕ ಸ್ಥಿತಿ ಸ್ಟೇಬಲ್‌ ಆಗಿ ಇರಲಿಲ್ಲ. ಮದುವೆಯ ಬಳಿಕ ಯುವ ಬದಲಾಗಿದ್ದರು. ಅವರ ವರ್ತನೆಯಲ್ಲಿ, ವ್ಯಕ್ತಿತ್ವದಲ್ಲಿ ಅನೇಕ ಬದಲಾವಣೆಗೆ ಕಾಣುತ್ತಿತ್ತು.

ವೈವಾಹಿಕ ಜೀವನದಲ್ಲಿ ಎಲ್ಲಾ ಮಾನಸಿಕ ಕಿರುಕುಳ, ಆರ್ಥಿಕ ಮತ್ತು ದೈಹಿಕ ಕಿರುಕುಳ, ದೌರ್ಜನ್ಯಗಳ ಹೊರತಾಗಿಯೂ, ಕುಟುಂಬದ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಯುವ ಅವರ ಸಹ-ನಟಿ ಸಪ್ತಮಿ ಗೌಡ ಅವರೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. 2023 ರ ಡಿಸೆಂಬರ್‌ ನಲ್ಲಿ ನಾನು ಭಾರತಕ್ಕೆ ಬಂದಾಗ ಸಪ್ತಮಿ ಗೌಡ ಅವರೊಂದಿಗೆ ಹೊಟೇಲ್‌ ರೂಮ್‌ ವೊಂದರಲ್ಲಿ ಯುವ ಸಿಕ್ಕಿಬಿದ್ದಿದ್ದರು. ಇದೇ ಕಾರಣದಿಂದ ನನ್ನನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.

ಸಪ್ತಮಿ ಗೌಡ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಂಡು, ಈಗ ನನ್ನ ಮೇಲೆಯೇ  ಮೋಸ ವಂಚನೆಯ ಆರೋಪವನ್ನು ಮಾಡಿ ತನ್ನ ಜವಾಬ್ದಾರಿಯಿಂದ ಹೊರ ನಡೆಯಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಪಶ್ಚಾತ್ತಾಪವಿಲ್ಲದೆ ನನ್ನ ವಿರುದ್ಧ ಈ ಸುಳ್ಳು ಮತ್ತು ನಿಷ್ಪ್ರಯೋಜಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋಟಿಸ್‌ ನಲ್ಲಿ ಶ್ರೀದೇವಿ ಭೈರಪ್ಪ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next