Advertisement

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

12:02 AM Jun 04, 2024 | Team Udayavani |

ಮಂಗಳೂರು: ಪಾಲ್ಘಾಟ್ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸಿ ಪ್ರತ್ಯೇಕ ವಿಭಾಗ ಮಾಡಬೇಕು ಅಥವಾ ಮೈಸೂರು ವಿಭಾಗಕ್ಕೆ ಸೇರಿಸಬೇಕು ಎಂಬ ರೈಲ್ವೇ ವಲಯದ ಬಹುಕಾಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನ ಈಗಾಗಲೇ ಆರಂಭವಾಗಿದೆ. ಕೇಂದ್ರದ ರೈಲ್ವೇ ಸಚಿವರಿಗೆ ಈ ವಿಚಾರವನ್ನು ಮನದಟ್ಟು ಮಾಡಲಾಗಿದ್ದು ಮೈಸೂರು ವಿಭಾಗಕ್ಕೆ ಸೇರಿಸುವ ಬಗ್ಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರ ಈಡೇರುವ ಲಕ್ಷಣಗಳಿವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಮಂಗಳೂರಿನಲ್ಲಿ ಆಯೋಜಿಸಲಾದ “ಸಂಸದರ ಜತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸದನಾದ ಬಳಿಕ 15 ವರ್ಷಗಳಲ್ಲಿ 1.80 ಲಕ್ಷ ಕೋ. ಅನುದಾನವನ್ನು ದ.ಕ. ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ತರಲಾಗಿದೆ. ಅದರಲ್ಲಿ 17 ಸಾವಿರ ಕೋಟಿ ರೂ. ವೆಚ್ಚದಲ್ಲಿ 3 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮಂಗಳೂರಿಗೆ ಪಾಸ್‌ಪೋರ್ಟ್‌ ಕಚೇರಿ ಆರಂಭಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಪರಿವರ್ತನೆ ಮಾಡಲಾಗಿದೆ.

ದೇಶದ ಏಕೈಕ ಕೋಸ್ಟ್‌ಗಾರ್ಡ್‌ ಅನ್ನು ಮಂಗಳೂರಿಗೆ ತರಲಾಗಿದೆ. ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಹೆಚ್ಚುವರಿ 2 ಪ್ಲಾಟ್‌ಫಾರಂ ನಿರ್ಮಾಣ, 100 ಜನೌಷಧಿ ಕೇಂದ್ರ, ಪ್ಲಾಸ್ಟಿಕ್‌ ಪಾರ್ಕ್‌ ಯೋಜನೆ, ಮೀನುಗಾರಿಕಾ ಜೆಟ್ಟಿ ಅನುಷ್ಠಾನಿಸಲಾಗಿದೆ ಎಂದರು.

ಎನ್‌ಎಂಪಿಎ ಅಭಿವೃದ್ಧಿ ಕಾಮಗಾರಿ ವೇಗ ಪಡೆದುಕೊಂಡಿದೆ. ಎಂಆರ್‌ಪಿಎಲ್‌ 3ನೇ ಹಂತದ ಕಾಮಗಾರಿ, ಎಸ್‌ಇಝಡ್‌ ವಿಸ್ತರಣೆ, ಮಂಗಳೂರಿಗೆ ಸ್ಮಾರ್ಟ್‌ ಸಿಟಿ, ಅಮೃತ ಯೋಜನೆ, ಬಳ್ಪ ಆದರ್ಶ ಗ್ರಾಮದ ಅಭಿವೃದ್ಧಿ, ನಗರದ ಜಪ್ಪು ಕುಡುಪ್ಪಾಡಿ, ಮಹಾಂಕಾಳಿ ಪಡ್ಪು , ಪಡೀಲ್‌ ರೈಲ್ವೇ ಮೇಲ್ಸೇತುವೆ ನಿರ್ಮಾಣ, ಬೈಕಂಪಾಡಿಯಲ್ಲಿ ರೈಲ್ವೇ ಮೇಲ್ಸೇತುವೆ ಸೇರಿದಂತೆ 2 ಸಾವಿರ ಕೋಟಿ ರೂ.ಗಳನ್ನು ರೈಲ್ವೇ ಅಭಿವೃದ್ಧಿಗೆ ನೀಡಲಾಗಿದೆ. ಜಲಸಿರಿ, ಗೇಲ್‌ ಗ್ಯಾಸ್‌ ಪೈಪ್‌ಲೈನ್‌ಯನ್ನು ಅನುಷ್ಠಾನ ಮಾಡಲಾಗಿದೆ ಎಂದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ರಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಉಪಸ್ಥಿತರಿದ್ದರು. ವಿಜಯ ಕೋಟ್ಯಾನ್‌ ನಿರೂಪಿಸಿದರು.

ಶಿರಾಡಿ ಸುರಂಗ, ನಂತೂರು ಫ್ಲೆ$çಓವರ್‌ ಅಂತಿಮ
ಶಿರಾಡಿ ಸುರಂಗ ಮಾರ್ಗ ಡಿಪಿಆರ್‌ ಮಾಡಿದಾಗ ಪ್ರಾರಂಭದಲ್ಲಿ 3 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. 2ನೇ ಬಾರಿ 12 ಸಾವಿರ ಕೋ.ರೂ.ಗೆ ಏರಿಕೆಯಾಗಿತ್ತು. ಈಗ ಪರಿವರ್ತನೆ ಮಾಡಿಕೊಂಡು 2,500 ಕೋಟಿ ರೂ. ಯೋಜನೆಗೆ ಡಿಪಿಆರ್‌ ಮಾಡಲಾಗಿದೆ. ಚಾರ್ಮಾಡಿ ಯೋಜನೆಯೂ ಚಾಲನೆ ದೊರಕಿದೆ.

ಮೂಡುಬಿದಿರೆ ರಾ.ಹೆ. ಕಾಮಗಾರಿ ನಡೆಯುತ್ತಿದ್ದು, ಭೂಸ್ವಾಧೀನ ಕಾರಣದಿಂದ ತಡವಾಗಿದೆ. ಅಡ್ಡಹೊಳೆ -ಬಿ.ಸಿ.ರೋಡ್‌ ಯೋಜನೆಯೂ ವೇಗ ಪಡೆದಿದೆ. ನಂತೂರಿನಲ್ಲಿ ಫ್ಲೆ$çಓವರ್‌ ಬಹುಬೇಡಿಕೆಯ ಯೋಜನೆಯಾಗಿದೆ. 360 ಕೋ.ರೂ.ಗೆ ಟೆಂಡರ್‌ ಕೂಡ ಆಗಿ ಕೆಲವು ತಿಂಗಳು ಆಗಿದೆ. ಆದರೆ ಭೂಸ್ವಾಧೀನ ಬಾಕಿಯಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದ ಕಾರಣದಿಂದ ಕೆಲಸ ನಡೆಸಲು ಆಗಿರಲಿಲ್ಲ. ಈಗ ಎಲ್ಲವೂ ಸರಿಯಾಗುತ್ತಿದ್ದು 1 ವಾರದಲ್ಲಿ ಇದು ಇತ್ಯರ್ಥವಾಗಿ ಕಾಮಗಾರಿ ಆರಂಭವಾಗಲಿದೆ. ಕೆಪಿಟಿ ಫ್ಲೆ$çಓವರ್‌ಗೆ ಕಾಮಗಾರಿ ಕೂಡ ಟೆಂಡರ್‌ ಆಗಿದ್ದು, ಈಗಾಗಲೇ ಮರ ತೆರವು ಕಾರ್ಯ ನಡೆದಿದೆ. ಪರಿಸರ ಹೋರಾಟಗಾರರ ಆಕ್ಷೇಪದಿಂದ ತಾತ್ಕಾಲಿಕ ತಡೆಯಿಂದ ಕೆಲಸಕ್ಕೆ ಸಮಸ್ಯೆ ಆಗಿದೆ ಎಂದು ನಳಿನ್‌ ಹೇಳಿದರು.

“ನಾನಾಗಿ ಕೇಳಿಲ್ಲ; ಮುಂದೆ ಕೇಳುವುದೂ ಇಲ್ಲ’
“ನಳಿನ್‌ ಅವರಿಗೆ ಈ ಬಾರಿ ಟಿಕೆಟ್‌ ತಪ್ಪಿದ್ದು ಯಾಕೆ?’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಂಘದ ಪ್ರಚಾರಕನಾಗಿ ಕಾರ್ಯ ಆರಂಭಿಸಿದ ನನಗೆ ಇಂತಹ ಜವಾಬ್ದಾರಿ ಕೊಡಿ ಎಂದು ಯಾವತ್ತೂ ಕೇಳಲಿಲ್ಲ. ಮುಂದೆ ಕೇಳುವುದೂ ಇಲ್ಲ. ಏನನ್ನೂ ಕೇಳದೆ ಪಕ್ಷವು ನನಗೆ ಬೇರೆ ಬೇರೆ ಜವಾಬ್ದಾರಿ ನೀಡಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನಿರುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next