Advertisement
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಮಂಗಳೂರಿನಲ್ಲಿ ಆಯೋಜಿಸಲಾದ “ಸಂಸದರ ಜತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ವಿಜಯ ಕೋಟ್ಯಾನ್ ನಿರೂಪಿಸಿದರು.
ಶಿರಾಡಿ ಸುರಂಗ, ನಂತೂರು ಫ್ಲೆ$çಓವರ್ ಅಂತಿಮಶಿರಾಡಿ ಸುರಂಗ ಮಾರ್ಗ ಡಿಪಿಆರ್ ಮಾಡಿದಾಗ ಪ್ರಾರಂಭದಲ್ಲಿ 3 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. 2ನೇ ಬಾರಿ 12 ಸಾವಿರ ಕೋ.ರೂ.ಗೆ ಏರಿಕೆಯಾಗಿತ್ತು. ಈಗ ಪರಿವರ್ತನೆ ಮಾಡಿಕೊಂಡು 2,500 ಕೋಟಿ ರೂ. ಯೋಜನೆಗೆ ಡಿಪಿಆರ್ ಮಾಡಲಾಗಿದೆ. ಚಾರ್ಮಾಡಿ ಯೋಜನೆಯೂ ಚಾಲನೆ ದೊರಕಿದೆ. ಮೂಡುಬಿದಿರೆ ರಾ.ಹೆ. ಕಾಮಗಾರಿ ನಡೆಯುತ್ತಿದ್ದು, ಭೂಸ್ವಾಧೀನ ಕಾರಣದಿಂದ ತಡವಾಗಿದೆ. ಅಡ್ಡಹೊಳೆ -ಬಿ.ಸಿ.ರೋಡ್ ಯೋಜನೆಯೂ ವೇಗ ಪಡೆದಿದೆ. ನಂತೂರಿನಲ್ಲಿ ಫ್ಲೆ$çಓವರ್ ಬಹುಬೇಡಿಕೆಯ ಯೋಜನೆಯಾಗಿದೆ. 360 ಕೋ.ರೂ.ಗೆ ಟೆಂಡರ್ ಕೂಡ ಆಗಿ ಕೆಲವು ತಿಂಗಳು ಆಗಿದೆ. ಆದರೆ ಭೂಸ್ವಾಧೀನ ಬಾಕಿಯಾಗಿ ನ್ಯಾಯಾಲಯದಲ್ಲಿ ಪ್ರಕರಣವಿದ್ದ ಕಾರಣದಿಂದ ಕೆಲಸ ನಡೆಸಲು ಆಗಿರಲಿಲ್ಲ. ಈಗ ಎಲ್ಲವೂ ಸರಿಯಾಗುತ್ತಿದ್ದು 1 ವಾರದಲ್ಲಿ ಇದು ಇತ್ಯರ್ಥವಾಗಿ ಕಾಮಗಾರಿ ಆರಂಭವಾಗಲಿದೆ. ಕೆಪಿಟಿ ಫ್ಲೆ$çಓವರ್‌ಗೆ ಕಾಮಗಾರಿ ಕೂಡ ಟೆಂಡರ್ ಆಗಿದ್ದು, ಈಗಾಗಲೇ ಮರ ತೆರವು ಕಾರ್ಯ ನಡೆದಿದೆ. ಪರಿಸರ ಹೋರಾಟಗಾರರ ಆಕ್ಷೇಪದಿಂದ ತಾತ್ಕಾಲಿಕ ತಡೆಯಿಂದ ಕೆಲಸಕ್ಕೆ ಸಮಸ್ಯೆ ಆಗಿದೆ ಎಂದು ನಳಿನ್ ಹೇಳಿದರು. “ನಾನಾಗಿ ಕೇಳಿಲ್ಲ; ಮುಂದೆ ಕೇಳುವುದೂ ಇಲ್ಲ’
“ನಳಿನ್ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದ್ದು ಯಾಕೆ?’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಂಘದ ಪ್ರಚಾರಕನಾಗಿ ಕಾರ್ಯ ಆರಂಭಿಸಿದ ನನಗೆ ಇಂತಹ ಜವಾಬ್ದಾರಿ ಕೊಡಿ ಎಂದು ಯಾವತ್ತೂ ಕೇಳಲಿಲ್ಲ. ಮುಂದೆ ಕೇಳುವುದೂ ಇಲ್ಲ. ಏನನ್ನೂ ಕೇಳದೆ ಪಕ್ಷವು ನನಗೆ ಬೇರೆ ಬೇರೆ ಜವಾಬ್ದಾರಿ ನೀಡಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನಿರುವೆ ಎಂದರು.