Advertisement
ಶುಕ್ರವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಕಾರ್ಯಕರ್ತರು, ಮುಖಂಡರ ಅಭಿ ನಂದನ ಸಭೆಯಲ್ಲಿ ಮಾತನಾಡಿದರು.
ವಿಧಾನಸಭೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಾಗಲೇ ಸಿದ್ದ ರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಬೇಕಿತ್ತು. ಈಗಲಾದರೂ ಎಚ್ಚೆತ್ತುಕೊಂಡರೆ ಲೋಕಸಭೆಯಲ್ಲಿ ಗೆದ್ದಿರುವ ಒಂದು ಸ್ಥಾನವಾದರೂ ಉಳಿದೀತು. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು ಎಂದರು.
Related Articles
ಟೀಕೆಯಲ್ಲೂ ಇರುವ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಪರ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ನಳಿನ್, ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
Advertisement
ನಳಿನ್ ಅವರಿಗೆ ಹಾರಾರ್ಪಣೆ ಮಾಡಿ ಅಭಿನಂದಿಸಲಾಯಿತು. ಮೀನಾಕ್ಷಿ ಶಾಂತಿಗೋಡು, ಮಲ್ಲಿಕಾ ಪ್ರಸಾದ್, ಗೋಪಾಲಕೃಷ್ಣ ಹೇರಳೆ, ಜೀವಂಧರ್ ಜೈನ್ ಉಪಸ್ಥಿತರಿದ್ದರು.
ಪುತ್ತೂರಲ್ಲಿ ವಿಜಯೋತ್ಸವಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸಂಜೀವ ಮಠಂದೂರು ಶಾಸಕರಾಗಿ ವರ್ಷ ಪೂರೈಸಿದ ಮತ್ತು ನಳಿನ್ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಪುತ್ತೂರಿನಲ್ಲಿ ವಿಜಯೋತ್ಸವ ನಡೆಯಲಿದೆ ಎಂದರು. ಡಿ. ಶಂಭು ಭಟ್ ವಂದಿಸಿದರು. ಪ್ರಜಾಪ್ರಭುತ್ವ ಹಬ್ಬದ ಸಾರ್ಥಕತೆ
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ದಿಗ್ವಿಜಯದ ಮೂಲಕ ದೇಶದಲ್ಲಿ ಇತಿಹಾಸ ನಿರ್ಮಾಣವಾಗಿದೆ. ತಾಯಿ-ಮಗ, ತಂದೆ-ಮಗನ ವಂಶಾಡಳಿತ ಬೇಡ ಎಂದು ತಿರಸ್ಕರಿಸಿರುವ ಜನತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟ ಕಡೆಯ ವ್ಯಕ್ತಿ ಆಡಳಿತ ಮಾಡಲು ಅವಕಾಶ ನೀಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆತ್ಮಾವಲೋಕನಕ್ಕೆ ಅವಕಾಶ ಎಂದವರು ಭಾವಿಸಬೇಕು ಎಂದರು.