Advertisement

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತಸಿದ್ಧ: ಕಟೀಲ್

12:08 PM Oct 29, 2020 | sudhir |

ಶಿರಾ: ಕ್ಷೇತ್ರದಲ್ಲಿ ಬಹು ನಿರೀಕ್ಷಿತ ಅಭಿವೃದ್ಧಿ ಇಲ್ಲಿಯವರೆಗೂ ಆಗಿಲ್ಲ, ಕಾಂಗ್ರೆಸ್‌ ಪಕ್ಷದ 10 ವರ್ಷ ಮತ್ತು ಜೆಡಿಎಸ್‌ ಪಕ್ಷ 10 ವರ್ಷ ಶಾಸಕರಾಗಿದ್ದರೂ ಕೂಡ ನೀರಾವರಿ ಯೋಜನೆಯ ರೂಪುರೇಷೆಗಳನ್ನೇ ಸಿದ್ಧಪಡಿಸಿಲ್ಲ ಅವರಿಗೆ ಮತ ಕೇಳುವ ಯಾವುದೇ
ನೈತಿಕತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕಿಡಿಕಾರಿದರು. ಶಿರಾ ವಿಧಾನಸಭಾ ಕ್ಷೇತ್ರದ ಪ್ರಚಾರ ಕಚೇರಿ ಸೇವಾ ಸದನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆ ಬಿಜೆಪಿ ಪರ ಒಲವು ತೋರಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವು
ಶತಸಿದ್ಧ ಎಂದರು.

Advertisement

ಜನರ ಬಗ್ಗೆ ಕಾಳಜಿ ಇದೆ: ಕಾಂಗ್ರೆಸ್‌ನವರು ಮತ ಪಡೆಯಲು ಹಣ ಆಮಿಷಗಳನ್ನು ಒಡ್ಡುತ್ತಾರೆ ಅದು ನಡೆಯದೆ ಹೋದರೆ ಗೂಂಡಾಗಿರಿ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನವರದ್ದು. ಇನ್ನು ನಮ್ಮ ಅಭ್ಯರ್ಥಿ ಡಾ.ಸಿ.ಎಂ. ರಾಜೇಶ್‌ಗೌಡ ಸೇವಾ ಮನೋಭಾವವುಳ್ಳವರಾಗಿದ್ದು, ವೈದ್ಯರಾಗಿ ಇಚ್ಛಾಶಕ್ತಿ ಇರುವ ಯುವಕರಾಗಿದ್ದು ಅವರ ಕುಟುಂಬ ಕೂಡ ರಾಜಕೀಯ ಹಿನ್ನೆಲೆ ಇರುವಂತವರು. ಹಾಗಾಗಿ ಕ್ಷೇತ್ರದ ಜನರಲ್ಲಿ ಅಭ್ಯರ್ಥಿ ಬಗ್ಗೆ ಆಶಾ ಭಾವನೆ ಮೂಡಿದೆ ಎಂದರು.

ಯಡಿಯೂರಪ್ಪರವರೇ ನಮ್ಮ ನಾಯಕರು:
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ಸರ್ವಾನುಮತದ ನಾಯಕರಾಗಿದ್ದು ಅವರು ಹುಟ್ಟು ಹೋರಾಟ ಗುಣದಿಂದ ನಾಯಕರಾಗಿ ಈ ಸ್ಥಾನಕ್ಕೆ ಅಲಂಕರಿಸಿದ್ದು ಅವರೇ ನಮ್ಮ ನಾಯಕರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಹಾಗೂ ರಾಜ್ಯ ಪ್ರಧಾನ ಕರ್ಯದರ್ಶಿ ರವಿಕುಮಾರ್‌, ಮೈಸೂರು ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ಗೌಡ ಇತರರು ಇದ್ದರು.

ಇದನ್ನೂ ಓದಿ:ಚುನಾವಣೆ ನಿಯಮ ಉಲ್ಲಂಘನೆ : ಪುಟ್ಟಣ್ಣ ಬೆಂಬಲಿಗನ ಬಂಧನ 85 ಸಾವಿರ ರೂ. ವಶ
**
ಪ್ರಥಮ ಬಾರಿ ಕಮಲ ಅರಳಲಿದೆ:ಎಂಟಿಬಿ
ಶಿರಾ: ಕಾಂಗ್ರೆಸ್‌ ಸರ್ಕಾರ ಸಿದ್ದರಾಮಯ್ಯರನ್ನು ಬಿಟ್ಟರೇ ಕುರುಬ ಸಮಾಜದ ಇತರೆ ಶಾಸಕರಿಗೆ ಮಂತ್ರಿ ಭಾಗ್ಯ ಕರುಣಿಸಲಿಲ್ಲ, ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನನಗೆ ವಿಧಾನ ಪರಿಷತ್‌ ಸ್ಥಾನ ನೀಡಿ ಸಂಪುಟದಲ್ಲಿ ಮಂತ್ರಿ ಮಾಡುವುದರ ಜೊತೆಗೆ ಶಿರಾ ತಾಲೂಕಿನ ಕುರುಬ ಸಮಾಜದ ಮುಖಂಡ ಬೇವಿನಹಳ್ಳಿ ಬಿ.ಕೆ.ಮಂಜುನಾಥ್‌ಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ.

ಕುರುಬ ಸಮಾಜಕ್ಕೆ ಇಂಥ ಅವಕಾಶ ನೀಡುತ್ತಿರುವ ಕಾರಣ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಬೆಂಬಲಿಸಿ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜು ಮನವಿ ಮಾಡಿದರು.

Advertisement

ತಾಲೂಕಿನ ಕಾಮಗೊಂಡನಹಳ್ಳಿ, ಪಟ್ಟನಾಯಕನಹಳ್ಳಿ, ಬೇವಿನಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ ಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಇದನ್ನೂ ಓದಿ:ಚೆನ್ನೈ ವಿಮಾನ ನಿಲ್ದಾಣದಲ್ಲಿ 23ಕೆಜಿ ಶಾರ್ಕ್ ರೆಕ್ಕೆ ವಶ: ಇದರಿಂದ ಏನು ತಯಾರಿಸುತ್ತಾರೆ?

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಶಾಸಕರನ್ನು ನೋಡಿ ಬೇಸರಗೊಂಡಿರು ಕಾರಣ ಜನ ಬಿಜೆಪಿ ಪಕ್ಷದತ್ತ ಹೆಚ್ಚು ಒಲವು ವ್ಯಕ್ತ ಪಡಿಸುತ್ತಿದ್ದು, ಶಿರಾ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮ ಈ ಬಾರಿ ಬಿಜೆಪಿ ಅಭ್ಯರ್ಥಿ ರಾಜೇಶ್‌ ಗೌಡ ಗೆಲುವು ಸಾಧಿಸಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಹುಲಿನಾಯ್ಕರ್‌, ಕುರುಬ ಸಮಾಜದ ಮುಖಂಡ ಮುಕುಡಪ್ಪ, ಮುಖಂಡರಾದ ಬಿ.ಕೆ.ಮಂಜುನಾಥ್‌, ನಿಜಲಿಂಗಪ್ಪ, ಪಿ.ಎನ್‌.ಗುಂಡಯ್ಯ,
ಪುಟ್ಟರಾಜು, ನಾಗೇಶ್‌ ಕಲ್ಮನೆ, ಮೈಲಾರಿ, ಚಂದ್ರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next