Advertisement

ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ

10:51 PM May 25, 2021 | Team Udayavani |

ಬೆಂಗಳೂರು: ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾದ ಸಪ್ನಾ ಬುಕ್ ಹೌಸ್ ಸಂಸ್ಥಾಪಕರಾದ ಸುರೇಶ್ ಸಿ. ಶಾ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಸಪ್ನಾ ಬುಕ್ ಹೌಸ್ ಆರಂಭಿಸಿದ ಶ್ರೀ ಸುರೇಶ್ ಅವರು ಸಂಸ್ಥೆಯನ್ನು ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಹೆಸರು ಪಡೆಯುವಂತೆ ಬೆಳೆಸಿದರು. 19 ಶಾಖೆಗಳನ್ನು ಹೊಂದಿರುವ “ಸಪ್ನಾ” ಕನ್ನಡ ಪುಸ್ತಕಗಳನ್ನು ವ್ಯಾಪಕವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಸತತವಾಗಿ ಮಾಡಿಕೊಂಡು ಬರುತ್ತಿತ್ತು ಎಂದು ಅವರ ಸೇವೆಯನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ :ಕೋವಿಡ್ ಪ್ರಕರಣ ಹೆಚ್ಚಳ : ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸಿಎಂ ಸೂಚನೆ

ಗಾಂಧಿನಗರದ “ಸಪ್ನಾ” ಪುಸ್ತಕದ ಅಂಗಡಿ ಬೆಂಗಳೂರಿನ ಪರಂಪರೆಯ ಒಂದು ಭಾಗವಾಗಿ ಎಲ್ಲಾ ಗ್ರಂಥಗಳಿಗೆ ನೆಚ್ಚಿನ ತಾಣವಾಗಿದೆ. ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕೆ ಸಪ್ನಾ ಬುಕ್ ಹೌಸ್ ಮಹತ್ತರ ಕೊಡುಗೆ ನೀಡಿದೆ. ಜನರಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸುವಲ್ಲಿ ಶ್ರೀ ಸುರೇಶ ಶಾ ಅವರ ಕೊಡುಗೆ ಅಪಾರ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next