Advertisement

ಜಮ್ಮು ಕಾಶ್ಮೀರದ ಡಿಡಿಸಿ ಗೆಲುವಿನಿಂದ ಬಿಜೆಪಿ ಅಲೆ ಸಾಬೀತು : ನಳಿನ್‌ ಕುಮಾರ್‌ ಕಟೀಲ್‌

08:08 PM Dec 23, 2020 | sudhir |

ಬೆಂಗಳೂರು: ಜಮ್ಮು -ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ. ಈ ಗೆಲುವಿನಿಂದ ದೇಶದಲ್ಲಿ ರೈತಪರ ಮತ್ತು ಅಭಿವೃದ್ಧಿ ಪರ ಇರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಲೆ ಇರುವುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

Advertisement

ಜಮ್ಮು -ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಕ್ರಮವನ್ನು ಅಲ್ಲಿನ ಜನರು ಸಮರ್ಥಿಸಿದ್ದಾರೆ ಎಂಬುದಕ್ಕೆ ಬಿಜೆಪಿ 75 ಸ್ಥಾನ ಗೆದ್ದುಕೊಂಡಿರುವುದೇ ಸಾಕ್ಷಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನಪ್ರಿಯತೆ ಪಡೆದಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಮುಂಬರುವ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನ ಪಡೆಯಲಿರುವುದರ ಮುನ್ಸೂಚನೆ ಇದಾಗಿದೆ. 370ನೇ ವಿಧಿಯ ಮರುಸ್ಥಾಪನೆಯ ಉದ್ದೇಶದೊಂದಿಗೆ ಗುಪ್ಕಾರ್‌ ಮೈತ್ರಿಕೂಟ ರಚಿಸಿಕೊಂಡ ಪಕ್ಷಗಳು ಡಿಡಿಸಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನೇನೂ ಮಾಡಿಲ್ಲ. ಬಿಜೆಪಿ ಮತ್ತು ಪಕ್ಷೇತರರು ಸೇರಿ ಶೇ.52ರಷ್ಟು ಮತ ಪ್ರಮಾಣವನ್ನು ಪಡೆದಿ¨ªಾರೆ. ಕಾಂಗ್ರೆಸ್‌ ಮತ್ತು ಮೆಹಬೂಬಾ ಮುಫ್ತಿ ಅವರ ಪಿಡಿಪಿ ಪಕ್ಷಗಳು ಪಕ್ಷೇತರರಿಗಿಂತ ಕಡಿಮೆ ಸ್ಥಾನ ಪಡೆದಿದ್ದು, ಈ ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಡಿ. 25ಕ್ಕೆ 9 ಕೋಟಿ ರೈತರಿಗೆ ಏಳನೇ ಕಂತಿನ ಪಿಎಂ-ಕಿಸಾನ್‌ ಮೊತ್ತ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next