Advertisement

ಕರಕುಶಲ ವಸ್ತುಗಳು ಇ ಮಾರುಕಟ್ಟೆ ಮೂಲಕ ವಿದೇಶಕ್ಕೆ: ಸಂಸದ ನಳಿನ್‌

12:30 AM Jan 11, 2023 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ದೇಸಿ ಸಂಸ್ಕೃತಿಯ ಅನಾವರಣದ ಜತೆಗೆ ಕರಕುಶಲ ವಸ್ತುಗಳ ಮಾರುಕಟ್ಟೆಗೆ ಆದ್ಯತೆ ನೀಡುತ್ತಿದೆ. ಇ ಮಾರುಕಟ್ಟೆ ಮೂಲಕ ದೇಶದ ವಿವಿಧ ಭಾಗಗಳ ಕರಕುಶಲ ವಸ್ತುಗಳನ್ನು ವಿದೇಶದ ಮಾರುಕಟ್ಟೆಗಳಿಗೆ ಪರಿಚಯಿಸಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಹೊಸದಿಲ್ಲಿಯ ಜವುಳಿ ಮಂತ್ರಾ ಲಯದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ವತಿಯಿಂದ ನಗರದ ವುಡ್‌ಲ್ಯಾಂಡ್‌ ಹೊಟೇಲ್‌ನ ಆವರಣದಲ್ಲಿ ಆಯೋಜಿಸ ಲಾಗಿರುವ “ಗಾಂಧಿ ಶಿಲ್ಪ ಬಜಾರ್‌’ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಪರಂಪರಾಗತವಾಗಿರುವ ಕುಶಲಕರ್ಮಿ ವೃತ್ತಿಗಳು ಹಲವು ಇವೆ. ನಮ್ಮ ಪೂರ್ವಿಕರು ವಂಶಪಾರಂಪರ್ಯ ವಾಗಿ ಬೆಳೆಸಿಕೊಂಡು ಬಂದಿರುವ ಕರ ಕುಶಲ ವೃತ್ತಿಗಳು ಇಂದು ದೇಶದಿಂದ ದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಪರಿಚಯ ವಾಗಬೇಕೆಂಬ ದೃಷ್ಟಿಯಿಂದ ಈ ರೀತಿಯ ವಸ್ತು ಪ್ರದರ್ಶನವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜತೆೆಯಾಗಿ ಆಯೋಜಿಸಿವೆ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸ್ಥಳೀಯ ಉತನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗಬೇಕು ಎಂಬುದು ಪ್ರಧಾನಿ ಆಶಯ. ಅದಕ್ಕೆ ಪೂರಕವಾಗಿ ಪೂರಕವಾಗಿ ದೇಶದ ಕರಕುಶಲ ಕರ್ಮಿಗಳಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಸಿಗುತ್ತಿದೆ ಎಂದರು.

ಪ್ರದರ್ಶನದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳ ಕರಕುಶಲಕರ್ಮಿಗಳು ತಮ್ಮ ಕಲಾಕೃತಿಗಳ, ಉತ್ಪನ್ನಗಳ ಪ್ರದರ್ಶನ ನೀಡುತ್ತಿದ್ದು, ಇದಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು.

Advertisement

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್‌ ಮಾತನಾಡಿ, ದೇಶಾದ್ಯಂತ ವಿವಿಧ ರಾಜ್ಯಗಳ ನೂರು ಮಂದಿ ಕರಕುಶಲ ಕರ್ಮಿಗಳ ಮಳಿಗೆಗಳನ್ನು ಇಲ್ಲಿ ಹಾಕಲಾಗಿದೆ, ಅವುಗಳಲ್ಲಿ ರಾಜ್ಯದ 30 ಮಳಿಗೆಗಳಿವೆ ಎಂದರು.

ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌., ನಿಗಮದ ಅಧ್ಯಕ್ಷ ಮಾರುತಿ ಮಲ್ಲಪ್ಪ ಅಷ್ಟಗಿ, ನಿರ್ದೇಶಕರಾದ ಜಿ.ಎಸ್‌. ದಯಾನಂದ, ಭಾರತ ಸರಕಾರದ ಜವಳಿ ಮಂತ್ರಾಲಯದ ಸಹಾಯಕ ನಿರ್ದೇಶಕ ಸಿ.ಬಿ. ಮೈಕಲ್‌, ನಿಗಮದ ಜನರಲ್‌ ಮ್ಯಾನೇಜರ್‌ ನಾಗರಾಜ್‌ ಹಾಗೂ ನಾಗೇಂದ್ರಪ್ಪ ಉಪಸ್ಥಿತರಿದ್ದರು.

18ರ ವರೆಗೆ ಪ್ರದರ್ಶನ
ಜ. 9ರಿಂದ 18ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ತೆರೆದಿರುತ್ತವೆ. ಕರಕುಶಲ ಆಲಂಕಾರಿಕ ವಸ್ತುಗಳು, ಹ್ಯಾಂಡ್‌ ವರ್ಕ್‌ ಸೀರೆಗಳು, ಸೋಲಾಪುರ ಚಪ್ಪಲಿ, ಚೆನ್ನರಾಯಪಟ್ಟಣದ ಗೊಂಬೆಗಳು, ಕೈಯಲ್ಲಿ ತಯಾರಿಸಿದ ಪೇಪರ್‌ ಲಕೋಟೆಗಳು ಸೇರಿದಂತೆ ಹಲವಾರು ಕರಕುಶಲ ವಸ್ತುಗಳು ಇಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next