Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ರೋಗ ನಿಯಂತ್ರಣಕ್ಕೆ ರವಿವಾರ ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಬರಬಾರದು. ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಭಾರತಿಯರಲ್ಲಿ ಮನವಿ ಮಾಡಿದ್ದಾರೆ.
Related Articles
Advertisement
ಸಾಮೂಹಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರು ಗುಂಪು ಪ್ರದೇಶದಿಂದ ದೂರ ಇರಬೇಕು ಎಂದು ಬಹಳ ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ. ಇದನ್ನು ಎಲ್ಲರು ಪಾಲಿಸುತ್ತಿದ್ದು ನಾವು ಇನ್ನು ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವೃದ್ಧರು ಮನೆಯಿಂದ ಹೊರಗೆ ಬರಲೆಬಾರದು. ಪ್ರಧಾನ ಮಂತ್ರಿ ಅವರು ರವಿವಾರ ದಿನ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಅವರ ಕರೆಗೆ ನಾವೆಲ್ಲರು ಸಹಕಾರ ನೀಡಬೇಕು. ಪಟ್ಟಣದಲ್ಲಿ ಈ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದರು.
ಡಾ| ಸಿ.ಬಿ. ವಿರಕ್ತಮಠ ಮಾತನಾಡಿ, ಕೊರೊನಾ ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿದೇಶದಿಂದ ಬಂದ ಈ ಸೋಂಕಿನ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಜಾಗೃತರಾಗಬೇಕು. ಮನೆ ಒಳಗೆ ಪ್ರವೇಶ ಮಾಡಬೇಕಾದರೆ ಸ್ವತ್ಛವಾಗಿ ಕೈ ತೊಳೆದುಕೊಂಡು ಪ್ರವೇಶ ಮಾಡಿ, ಹೊರಗಿನ ಆಹಾರ ಪದಾರ್ಥಗಳನ್ನು ಮುಟ್ಟಬೇಡಿ, ನಾವು ಇದರ ಭೀತಿಗೆ ಒಳಗಾಗದೆ ಇದರ ನಿಯಂತ್ರಣದ ಕ್ರಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.
ಖಾಜಾಹುಸೇನ್ ಎತ್ತಿನಮನಿ, ಬಸಣ್ಣ ವಡಗೇರಿ, ಚನ್ನಪ್ಪಗೌಡ ಹಂಪನಗೌಡರ, ಜಗದೀಶ ಜಾಲಹಳ್ಳಿ, ಚಂದ್ರು ಹಂಪನಗೌಡರ, ಗೌಡಪ್ಪ ಹಂಪನಗೌಡ್ರ, ಚನ್ನಸಬಪ್ಪ ತಾಳಿಕೋಟಿ, ನಿಂಗಣ್ಣ ಬಿರಾದಾರ, ಅಮರೇಶ ಮದರಿ, ವೀರೇಶ ಗೌಡರ, ಶಿವು ಗಂಗನಗೌಡರ ಇದ್ದರು.