Advertisement

ಬಿಜೆಪಿಗೆ ಉಲ್ಟಾ ಹೊಡೆದ ಮೀಸಲಾತಿ

04:15 PM Mar 13, 2020 | Naveen |

ನಾಲತವಾಡ: ಇಲ್ಲಿನ ಪಟ್ಟಣ ಪಂಚಾಯತ್‌ ಎರಡನೇ ಅವಧಿ
ಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳೆ ಎಂದು ಸರಕಾರ ಹೊಸ ಮೀಸಲಾತಿ ಪ್ರಕಟಣೆ ಮಾಡಿದೆ.

Advertisement

ಇದು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದುಕೊಂಡಿದ್ದ ಬಿಜೆಪಿಗೆ ಆಕಾಶಕ್ಕೆ ಏಣಿ ಇಡು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೊಸ ಮೀಸಲಾತಿಯ ಸಂಪೂರ್ಣ ಲಾಭವನ್ನು ಕಾಂಗ್ರೆಸ್‌, ಜೆಡಿಎಸ್‌ ಪಡೆದುಕೊಳ್ಳಲು ಕಸರತ್ತು ನಡೆಸಿವೆ. ಹೊಸ ಮೀಸಲಾತಿ ಪಟ್ಟಿ ಬಹಳ ನಾಟಕೀಯ ಸ್ಥಿತಿ ಕಂಡುಕೊಂಡಿದೆ. ಮೊದಲನೇ ಅವಧಿ ಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಪುರುಷಗೆ ಮೀಸಲಾಗಿತ್ತು. ಮೊದಲ ಅವಧಿ ಅಧಿಕಾರ ಮುಗಿದ ನಂತರ ಅಂದಿನ ಸಮಿಶ್ರ ಸರಕಾರ ಎಸ್ಸಿ ಮಹಿಳೆ ಸ್ಥಾನವೆಂದು ಮೀಸಲಾತಿ ಪ್ರಕಟಿಸಿದ ಮೂರು ದಿನಗಳಲ್ಲಿ ಮತ್ತೆ ಸಾಮಾನ್ಯ ಪುರುಷ ಎಂದು ಮೀಸಲು ಪ್ರಕಟಿಸಿತ್ತು.

ಮೀಸಲಾತಿ ಆದೇಶ ಬದಲಿಸುತಿದ್ದಂತೆ ಎಸ್ಸಿ ಮಹಿಳಾ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯದಲ್ಲಿ ಎಸ್ಸಿ ಮಹಿಳೆ ಸ್ಥಾನಕ್ಕೆ ಮೀಸಲಾತಿ ನೀಡಬೇಕು ಎಂದು ಆದೇಶ ಪಡೆದುಕೊಂಡ ಬಂದರು. ಆದರೆ ಈಗ ಪ್ರಕಟಗೊಂಡ ಹೊಸ ಮೀಸಲಾತಿ ಪಟ್ಟಿಯಿಂದ ಎಸ್ಸಿ ಮಹಿಳೆಗೆ ನಿರಾಶೆ ಮೂಡಿದೆ.

ತೀರ್ವ ಪೈಪೋಟಿ: ನಾಲತವಾಡ ಪಟ್ಟಣ ಪಂಚಾಯತನಲ್ಲಿ ನಾಲ್ಕು ಸಾಮಾನ್ಯ ಮಹಿಳೆಯರು ಇರುವುದರಿಂದ ಅಧ್ಯಕ್ಷ ಆಕಾಂಕ್ಷಿಗಳ ಮಧ್ಯ ತೀರ್ವ ಪೈಪೋಟಿ ಏರ್ಪಡುವ ಸಂಭವ ಹೆಚ್ಚಾಗಿದೆ. ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಆಪ್ತರಾದ ಮಹಾಂತೇಶ ಗಂಗನಗೌಡ ಅವರ ಪತ್ನಿ ಸುಮಾ ಗಂಗಾನಗೌಡರ  ಗೂ ಜೆಡಿಎಸ್‌ ಅಭ್ಯರ್ಥಿಗಳಾದ ಬಸಲಿಂಗಮ್ಮ ಮಸ್ಕಿ, ಭೀಮವ್ವ ಕ್ಷತ್ರಿ, ಸಂಗಮ್ಮ ಗಂಗನಗೌಡ ಅವರ ಮಧ್ಯ ಪೈಪೋಟಿ ನಡೆಯುವ ಸಂಭವ ಹೆಚ್ಚಾಗಿದೆ. ಒಂದು ವೇಳೆ ಅಧ್ಯಕ್ಷ ಚುನಾವಣೆ ಏರ್ಪಟ್ಟರೆ ಜೆಡಿಎಸ್‌ ಸದಸ್ಯರಿಗೆ ಕಾಂಗ್ರೆಸ್‌ ಸದಸ್ಯರು ಬೆಂಬಲ ನೀಡುವುದು ಖಚಿತವಾಗಿದೆ.

ಉಲ್ಟಾ ಹೊಡೆದ ಹೊಸ ಪಟ್ಟಿ: ಈ ಹಿಂದೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳಾ ಮೀಸಲನ್ನು ಮಾಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದ ಮೇಲೆ ಬಿಜೆಪಿಯಲ್ಲಿ ಹರ್ಷ ಉಂಟಾಗಿತ್ತು. ಬಿಜೆಪಿ ಅಭ್ಯರ್ಥಿ ಮಾತ್ರ ಎಸ್ಸಿ ಮಹಿಳೆ ಇರುವ ಕಾರಣ ಅವಿರೋಧವಾಗಿ ಆಯ್ಕೆ ಆಗುವ ಕನಸು ಕಂಡಿದ್ದರು. ಆದರೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್‌. ಪಾಟೀಲ ಅವರ ಆದೇಶ ಮೇರೆಗೆ ಹೊಸ ಮೀಸಲಾತಿ ಪಟ್ಟಿಯನ್ನು ಬದಲಾವಣೆ ಮಾಡಿದ ಕಾರಣ ಅವಿರೋಧವಾಗಿ ಆಯ್ಕೆ ಆಗುವ ಬಿಜೆಪಿ ಅಭ್ಯರ್ಥಿಯ ಕನಸನ್ನು ಅವರ ನಾಯಕರೇ ಭಂಗ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಸದಸ್ಯರ ಲೆಕ್ಕಾಚಾರ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಭದ್ರ ಕೋಟೆಯಾಗಿರುವ ನಾಲತವಾಡ ಪಟ್ಟಣದಲ್ಲಿ ಹೇಗಾದರು ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಬೇಕು ಎಂದು ಕನಸು ಕಂಡಿದ್ದ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಬಿಜೆಪಿಯನ್ನು ಯಾವುದೇ ಕಾರಣಕ್ಕು ಅ ಧಿಕಾರದ ಗದ್ದುಗೆ ಏರುವದಕ್ಕೆ ಬಿಡಬಾರದು ಎಂದು ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಲೆಕ್ಕಾಚಾರವಾಗಿದೆ. ಸದಸ್ಯರ ಬಲಾಬಲ ನೋಡಿದರೆ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು 10 ಹಾಗೂ ಬಿಜೆಪಿ ಪರವಾಗಿ ನಾಲ್ಕು ಜನ ಸದಸ್ಯರ ಬಲಾಬಲ ಇದೆ. ಹೀಗಾಗಿ ಈ ಬಾರಿ ಕೂಡ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಸೇರಿ ಅಧಿಕಾರ ನಡೆಸುವುದು ದೃಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next