Advertisement

ವಿದ್ಯುತ್‌ ಸುರಕ್ಷತೆ-ಜಾಗೃತಿ ಕಾರ್ಯಕ್ರಮ

04:43 PM Feb 07, 2020 | Naveen |

ನಾಲತವಾಡ: ಜೀವನಕ್ಕೆ ಗಾಳಿ, ನೀರು ಎಷ್ಟು ಮುಖ್ಯವೋ ಹಾಗೆ ವಿದ್ಯುತ್‌ ಅಷ್ಟೆ ಮುಖ್ಯವಾಗಿದೆ. ವಿದ್ಯುತ್‌ ಕೊರತೆ ನೀಗಿಸಲು ಕೇವಲ ನಿಗಮ ಮಾತ್ರವಲ್ಲದೇ ಗ್ರಾಹಕರು ಸಹಕರಿಸಬೇಕು ಎಂದು ಮುದ್ದೇಬಿಹಾಳ ಹೆಸ್ಕಾ ಉಪವಿಭಾಗದ ಎಇಇ ಆರ್‌.ಎನ್‌. ಹಾದಿಮನಿ ಹೇಳಿದರು.

Advertisement

ಸ್ಥಳೀಯ ಹೆಸ್ಕಾಂ ಕಾರ್ಯಾಲಯದಲ್ಲಿ ವಿದ್ಯುತ್‌ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮ, ಎಲ್‌ಇಡಿ ಬಲ್ಪಗಳ ಬಳಕೆಯ ಪ್ರಯೋಜನೆ ಹಾಗೂ ಸೌರಶಕ್ತಿ ಬಗ್ಗೆ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಒಂದು ಕೆಲಸಕ್ಕೂ ಕೂಡ ವಿದ್ಯುತ್‌ ಉಪಯೋಗವಿದೆ. ವಿದ್ಯುತ್‌ ಉತ್ಪಾದನೆಗಿಂತ ಬಳಸುವುದೇ ಹೆಚ್ಚಾಗಿದೆ. ಆದ್ದರಿಂದ ನಾವು ವಿದ್ಯುತ್‌ ಉಳಿತಾಯ ಮಾಡುವವರಾಗಬೇಕು. ಅನವಶ್ಯಕವಾಗಿ ವಿದ್ಯುತ್‌ ದೀಪ ಉರಿಸುವುದನ್ನು ಕಡಿಮೆ ಮಾಡಬೇಕು. ವಿದ್ಯುತ್‌ ಉಳಿತಾಯಕ್ಕೆ ಇನ್ನೊಂದು ಮಾರ್ಗವೆಂದರೆ ಪಟ್ಟಣದಲ್ಲಿ ಎಲ್ಲ ಜನರು ಎಲ್‌ಇಡಿ ಬಲ್ಪಗಳ ಬಳಕೆ ಮಾಡಬೇಕು ಎಂದರು.

ಉಪವಿಭಾಗದ ಹಿರಿಯ ಸಹಾಯಕ ಬಿ.ಎ. ಮಡಿವಾಳರ ಮಾತನಾಡಿ, ಹೆಸ್ಕಾಂ ಸಿಬ್ಬಂದಿಗಳು ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವುದರ ಜೊತೆಗೆ ನಿಗಮದ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ವಿದ್ಯುತ್‌ ಅವಘಡದಿಂದ ಸಿಬ್ಬಂದಿಗಳು ಮುಂಜಾಗೃತವಾಗಿ ಎಲ್ಲ ರೀತಿಯ ಸುರಕ್ಷತೆ ಮಾಡಿಕೊಳ್ಳಬೇಕು ಎಂದರು.

ನಾಲತವಾಡ ಶಾಖಾಧಿಕಾರಿ ಎಂ.ಎಸ್‌. ತೆಗ್ಗಿನಮಠ ಮಾತನಾಡಿ, ವಿದ್ಯುತ್‌ ಬಳಕೆಯಲ್ಲಿ ಗ್ರಾಹಕರು ಬಹಳ ಸುರಕ್ಷತೆ ವಹಿಸಬೇಕು. ಪ್ರಕೃತಿ ವಿಕೋಪಕ್ಕೆ ತಂತಿಗಳು ಹರಿದು ಬಿದ್ದರೆ ನಮ್ಮ ಗಮನಕ್ಕೆ ತನ್ನಿ. ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುತ್ತದೆ. ತಾವು ಸೇವೆಗೆ ಹಾಜರಾದ ನಂತರ ಕಂದಾಯ ವಸೂಲಾತಿ ಗುರಿ ಮುಟ್ಟಿದ್ದೇನೆ. ಇದಕ್ಕೆ ಸಹಕಾರ ನೀಡಿದ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದರು.

ಹುಲ್ಲೂರ ಶಾಖಾ ಧಿಕಾರಿ ಬಿ.ಎಸ್‌. ಯಲಗೋಡ, ಜಿ.ವಿ.ಪಿ ಸಂಘದ ಅಧ್ಯಕ್ಷ ಎಸ್‌.ಎ. ಗೂಳಿ, ಜೆಟಿಒ ಡಿ.ಎಸ್‌. ಶಿರಸಂಗಿಮಠ ಮಾತನಾಡಿದರು. ಈ ವೇಳೆ ಹುಲ್ಲೂರ ಶಾಖಾಧಿಕಾರಿ ಆರ್‌.ಬಿ. ಹಿರೇಮಠ, ಹಿರಿಯ ಸಹಾಯಕಾರದ ಎಸ್‌.ಬಿ. ಅಂಗಡಿ, ನೌಕರ ಸಂಘದ ಉಪಾಧ್ಯಕ್ಷ ಎಸ್‌.ಬಿ. ಗಣಾಚಾರಿ, ಎಸ್‌.ಎ. ಗೂಳಿ, ಗ್ರಾಮ ವಿದ್ಯುತ್‌ ಪ್ರತಿನಿಧಿ ಗಳು, ಗುತ್ತಿಗೆದಾರರು, ಸಿಬ್ಬಂದಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next