Advertisement
ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಈ ಬಾರಿಯ ಅದ್ಧೂರಿ ಚಾಲನೆ ದೊರೆತಿದ್ದು, ಬೆಳಿಗ್ಗೆ ಶ್ರೀ ದ್ಯಾಮವ್ವ -ಗದ್ದೆಮ್ಮ ದೇವಿಯರನ್ನು ದೇವಸ್ಥಾನದಿಂದ ಬೆನಕನ ಬಾವಿಗೆ ಕರೆತಂದು ಗಂಗಾ ಸ್ಥಳದಲ್ಲಿ ಮಿಂದು ಶುದ್ಧೀಕರಣಗೊಂಡ ನಂತರ ಗ್ರಾಮ ದೇವಿಯರ ಭವ್ಯ ಪೂರ್ಣಕುಂಭದ ಮೆರವಣಿಗೆಗೆ ಮಾಜಿ ಸಚಿವ ಅಪ್ಪಾಜಿ ನಾಡಗೌಡ್ರ ಚಾಲನೆ ನೀಡಿದರು.
Related Articles
Advertisement
ಮೆರವಣಿಗೆಯುದ್ದಕ್ಕೂ ಆನೆಹೊಸೂರಿನ ಕೋಲಾಟ, ಕೊಪ್ಪಳದ ಉಗ್ರ ನರಸಿಂಹ,ನಂದಿ, ಸುಂದರಿ ವೇಷಧಾರಿಗಳ ಗೊಂಬೆ ಕಲಾವಿದರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ರಾಜ್ಯದ ವಿವಿಧೆಡೆಯಿಂದ ಬಂದ ಮಹಿಳಾ ಕಲಾವಿದರ ಡೊಳ್ಳು ಕುಣಿತ, ಕರಡಿ ಮಜಲು, ವೀರಗಾಸೆ,ನೈಜ ಕುದರಿ ಕುಣಿತ, ಕೋಟೆಗುಡ್ಡ, ಕಕ್ಕೇರಿ, ಘಾಳಪೂಜಿ,ಬಿಜ್ಜೂರ-ಖಾನೀಕೇರಿ, ಜೈನಾಪೂರ, ನಾಲತವಾಡ, ಯಣ್ಣಿವಡಗೇರಿ ಗ್ರಾಮದ ಡೊಳ್ಳು ಕುಣಿತ, ಬ್ಯಾಂಡ್ ನಾದ ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಿತು.
ಮೆರವಣಿಗೆಯು ಪಟ್ಟಣದ ಬಸವೇಶ್ವರ ವೃತ್ತದಿಂದ ಸಾಗಿ ಗಣಪತಿ ಚೌಕ,ಗುಡಿ ಓಣಿ,ದೇಶಮುಖರ ಓಣಿ,ರಡ್ಡೇರ ಪೇಟೆ, ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ,ಹಟ್ಟಿ ಓಣಿ,ಖಾನಬಾವಿ ಓಣಿಯ,ಗಚ್ಚಿನಬಾವಿ ಮಾರ್ಗವಾಗಿ ದೇವಿಯರ ದೇವಸ್ಥಾನ ತಲುಪುತ್ತಿದ್ದಂತೆ ಜಯ-ಘೋಷಣೆಗಳು ಮುಗಿಲು ಮುಟ್ಟಿದವು. ಬಜಾರದಲ್ಲಿ ಗಂಗಾಧರ ಚಿನಿವಾಲರ ಶುದ್ಧ ನೀರು ಪಾನಕ ವಿತರಿಸಿದರು,
ದೇಶಮುಖರ ಓಣಿಯ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ತಣ್ಣನೆಯ ನೀರು, ಪಾನಕ,ಮಜ್ಜಿಗೆ ವಿತರಿಸುವ ಮೂಲಕ ಎಲ್ಲ ಮಚ್ಚುಗೆಗಳಿಸಿದರು.
ಈ ವೇಳೆ ಶಂಕರ್ರಾವ್ ದೇಶಮುಖ,ಗುರು ದೇಶಮುಖ,ಎಂಎಜಿ ಮಹಾಂತೇಶ ಗಂಗನಗೌಡರ, ಬಿ.ಬಿ.ಪಾಟೀಲ,ಪೃಥ್ವಿರಾಜ್ ನಾಡಗೌಡ,ನೆರಸಪ್ಪ ಹೊಸಮನಿ,ಬಸವರಾಜ ಗಡ್ಡಿ,ಶ್ರೀಶೈಲ(ಬಾಬು) ಬಡಿಗೇರ,ಈಶ್ವರ ಕುಂಟೋಜಿ, ಸಂಗಪ್ಪ ಸೇದಿಬಾಯಿ, ಎ.ಜಿ.ಗಂಗನಗೌಡರ, ಮುದ್ದಪ್ಪ ಮಸ್ಕಿ, ಚಂದ್ರಶೇಖರ ಗಂಗನಗೌಡ್ರ . ಗುಂಡಪ್ಪ ಮಾವಿನತೋಟ ಇದ್ದರು.