Advertisement

ನಲಸೋಪರ ನೂತನ ತುಳು ಒಕ್ಕೂಟದ ಸ್ಥಾಪನೆಯ ಪೂರ್ವಭಾವಿ ಸಭೆ

04:03 PM Feb 25, 2018 | |

ಮುಂಬಯಿ: ನಲಸೋಪರ ಪಶ್ಚಿಮ ಮತ್ತು ಪೂರ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆಲೆಸಿರುವ ತುಳುವರನ್ನು ಒಂದೇ ವೇದಿಕೆಯಲ್ಲಿ ತರುವ ಉದ್ಧೇಶದಿಂದ ತುಳು ಒಕ್ಕೂಟ ಸ್ಥಾಪನೆಯ ಬಗ್ಗೆ ಪೂರ್ವಭಾವಿ ಸಭೆಯು ಫೆ. 9 ರಂದು ನಲಸೋಪರ ಪೂರ್ವದ ಹೊಟೇಲ್‌ ರೀಜೆನ್ಸಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

Advertisement

ಸಭೆಯಲ್ಲಿ ಉಪಸ್ಥಿತರಿದ್ದ ನಲಸೋಪರ ಪರಿಸರದ ವಿವಿಧ ಸಂಘಟನೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರ ಸಮಕ್ಷಮದಲ್ಲಿ ನಲಸೋಪರದ ಹೊಟೇಲ್‌ ಉದ್ಯಮಿ ರಮೇಶ್‌ ವಿ. ಶೆಟ್ಟಿ ಕಾಪು ಇವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ನೇಮಿಸಲಾಯಿತು.

ಸಭೆಯನ್ನು ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್‌ ಆರ್‌. ಪಕ್ಕಳ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿದರು. 

ಹೊಟೇಲ್‌ ಉದ್ಯಮಿ, ಸಮಾಜ ಸೇವಕ ಶಶಿಧರ ಕೆ. ಶೆಟ್ಟಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಗಣೇಶ್‌ ಸುವರ್ಣ, ಕೋಡಿ ಗೋಪಾಲ ಪೂಜಾರಿ, ಮೋಹನ್‌ ಬಿ. ಶೆಟ್ಟಿ, ಮೋಹನ್‌ ಬಂಜನ್‌, ಮತ್ತಿತರ ಗಣ್ಯರು ಉಪಸ್ಥಿತರಿದ್ದು, ರಮೇಶ್‌ ವಿ. ಶೆಟ್ಟಿ ಅವರಿಗೆ ಪುಷ್ಪಗುಚ್ಚವನ್ನಿತ್ತು ಅಧಿಕಾರದ ಜವಾಬ್ದಾರಿಯನ್ನು ನೀಡಿದರು.

ಗೌರವಾಧ್ಯಕ್ಷರಾಗಿ ಶಶಿಧರ ಶೆಟ್ಟಿ, ಅಧ್ಯಕ್ಷರಾಗಿ ರಮೇಶ್‌ ವಿ. ಶೆಟ್ಟಿ ಕಾಪು, ಉಪಾಧ್ಯಕ್ಷರಾಗಿ ಗಣೇಶ್‌ ಸುವರ್ಣ, ಗೌರವ ಕಾರ್ಯದರ್ಶಿಯಾಗಿ ಜಗನ್ನಾಥ್‌ ಡಿ. ಶೆಟ್ಟಿ, ಕೋಶಾಧಿಕಾರಿಯಾಗಿ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಯಶವಂತ್‌ ಸಾಲ್ಯಾನ್‌, ಜತೆ ಕೋಶಾಧಿಕಾರಿಯಾಗಿ ದಿವಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಮಲ್ಲಿಕಾ ಚೌಟ, ಉಪ ಕಾರ್ಯಾಧ್ಯಕ್ಷೆಯಾಗಿ ಯಶೋದಾ ಕೋಟ್ಯಾನ್‌, ಕಾರ್ಯದರ್ಶಿಯಾಗಿ ಮಲ್ಲಿಕಾ ಪೂಜಾರಿ, ಕೋಶಾಧಿಕಾರಿಯಾಗಿ  ನಳಿನಿ ಪೂಜಾರಿ, ಜೊತೆ ಕೋಶಾಧಿಕಾರಿಯಾಗಿ ಶಕುಂತಳಾ ಮೆಂಡನ್‌, ಜತೆ ಕಾರ್ಯದರ್ಶಿಯಾಗಿ ಸುರೇಖಾ ಬಂಗೇರ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಅರುಣಾ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ನಂದಕುಮಾರ್‌ ಕುಂಬ್ಳೆ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮೋಹನ್‌ ಬಿ. ಶೆಟ್ಟಿ ಮತ್ತು ಉಪ ಕಾರ್ಯಾಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ, ಕ್ಯಾಟರಿಂಗ್‌ ಸಮಿತಿಯ ಕಾರ್ಯಾಧ್ಯಕ್ಷರಾಗಿ ದಯಾನಂದ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿ ತಾರನಾಥ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕೋಡಿ ಗೋಪಾಲ್‌ ಪೂಜಾರಿ, ಸದಸ್ಯತ್ವ ನೋದಣಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿನಯ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾಗಿ ನವೀನ್‌ ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪ್ರಕಾಶ್‌ ಕೋಟ್ಯಾನ್‌, ಕಾರ್ಯಕ್ರಮ ಸಮಿತಿಯ ಸಂಚಾಲಕರಾಗಿ ಶಂಕರ ಗಾಣಿಗ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ ಮೋಹನ್‌ ಬಂಜನ್‌ ಮತ್ತು ವೈದ್ಯಕೀಯ ವಿಭಾಗದ ಕಾರ್ಯಾಧ್ಯಕ್ಷರಾಗಿ ವಸಂತ ಶೆಟ್ಟಿ ಇವರನ್ನು ಇದೇ ಸಂದರ್ಭದಲ್ಲಿ ನೇಮಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next