Advertisement

ನಲಸೋಪರ ಶ್ರೀ ಮಾರಿಯಮ್ಮ ದೇವಸ್ಥಾನ:ನವರಾತ್ರಿ ಉತ್ಸವ

01:42 PM Oct 03, 2017 | Team Udayavani |

 ಮುಂಬಯಿ: ಪಶ್ಚಿಮ ಉಪನಗರ ನಲಸೋಪರ ಲೋಟಸ್‌ ರೋಡ್‌, ಅಚೋಲೆ ಪರಿಸರದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಶ್ರೀ ಶನಿಮಹಾತ್ಮ ದೇವಸ್ಥಾನದೊಂದಿಗೆ ಸ್ಥಾಪನೆಗೊಂಡ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 30ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಸೆ. 21 ರಂದು   ಕಲಶ ಪ್ರತಿಷ್ಠಾಪನೆಯ ಮೂಲಕ ಧಾರ್ಮಿಕ ಕಾರ್ಯಕ್ರಮವು ಪ್ರಾರಂಭಗೊಂಡು ದಿನಂಪ್ರತಿ ಸಂಜೆ 7 ರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿತ್ತು. ಸೆ. 28ರಂದು ದುರ್ಗಾಷ್ಟಮಿಯ ಆರಾಧನೆಯ ಅಂಗವಾಗಿ ಸಾರ್ವಜನಿಕ ಚಂಡಿಕಾ ಯಾಗ ನೆರವೇರಿತು. ಸೆ. 30ರಂದು ವಿಜಯ ದಶಮಿಯ ದಿನದಂದು ಮಧ್ಯಾಹ್ನ ಶ್ರೀದೇವಿಗೆ ಮಾರಿಯಮ್ಮ, ದುರ್ಗಾ ಪರಮೇಶ್ವರೀ ದೇವರಿಗೆ ಮಹಾಪೂಜೆ ಜರಗಿತು. ಆನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. 

ಸಂಜೆ ಪರಿಸರದ ಭಕ್ತರಿಂದ ಭಜನ ಕಾರ್ಯಕ್ರಮ, ಆನಂತರ ದೇವಸ್ಥಾನದ ಶನಿದೇವರು, ಶ್ರೀ ಧರ್ಮ ಮಾರಿಯಮ್ಮ, ಶ್ರೀ ದುರ್ಗಾಪರಮೇಶ್ವರಿ, ಮಹಾಕಾಳಿ ದೇವರಿಗೆ ವಿವಿಧ ಪೂಜೆ, ಶ್ರೀ ದೇವಿ ದರ್ಶನ, ಉತ್ಸವ ಬಲಿ ನಡೆಯಿತು.

ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್‌ ಭಟ್‌ ಅವರು, ಕಳೆದ 9 ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ನವದುರ್ಗೆಯರನ್ನು ಪೂಜಿಸಿ, ಸರ್ವರಿಗೂ ಅಭಯ ಪ್ರಾರ್ಥಿಸಲಾಗಿದ್ದು, ಜಗತ್ತಿನ ಸರ್ವ ಸಂಕುಲವನ್ನು ಕಾಯುವ ಶ್ರೀದೇವಿಯು ಭಕ್ತರಿಗೆ ಅಭಯಹಸ್ತ ನೀಡುವಳು. ದೈವಶಕ್ತಿಯನ್ನು ಹೊಂದಿರುವ ಈ ದೇವಸ್ಥಾನದಲ್ಲಿ ಭಕ್ತರ ಆಶೋತ್ತರಗಳನ್ನು  ಪೂರೈಸುವಳು. ಭಕ್ತಿಯಿಂದ ಶ್ರದ್ಧೆಯಿಂದ ಆರಾಧಿ ಸುವ ಭಕ್ತರಿಗೆ ದೇವಿಯ ಸದಾ ಅಭಯವನ್ನಿತ್ತು ಕಾಯುವುದರ ಜೊತೆಗೆ ಈ ದೇವಸ್ಥಾನದಲ್ಲಿ 9 ದಿನಗಳ ದೈವೀ ಭಕ್ತಿಯ ಪೂಜೆ ಪುರಸ್ಕಾರಗಳು ಜರಗಿದೆ ಎಂದು ಹೇಳಿದರು. ಉತ್ಸವ ಬಲಿ ಜರಗಿದ ನಂತರ ನೆರೆದ ಭಕ್ತರಿಗೆ ಶ್ರೀ ದೇವಿಯ ಪ್ರಸಾದವನ್ನಿತ್ತು ಹರಸಲಾಯಿತು.

ಶನಿಮಂದಿರದೊಂದಿಗೆ ಪ್ರಾರಂಭ ಗೊಂಡ ಈ ಮಂದಿರವು ಇಂದು ಶ್ರೀ ಧರ್ಮ ಮಾರಿಯಮ್ಮ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಹಾಕಾಳಿ, ಶ್ರೀ ಗಣಪತಿ, ಶ್ರೀ ರುದ್ರದೇವರ ಗುಡಿಗಳು ಸ್ಥಾಪಿತಗೊಂಡಿದ್ದು, ಎಲ್ಲಾ ದೇವರಿಗೂ ಪೂಜಾ ವಿಧಿ-ವಿಧಾನಗಳು ಜರಗುತ್ತಿದೆ. 

Advertisement

ಸಂಚಾಲಕರ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರದ ಚಿಂತನೆಯು ನಡೆಯುತ್ತಿದ್ದು, ಭಕ್ತಾದಿ ಗಳು, ದಾನಿಗಳ ಸಹಾಯದಿಂದ ಈ ಪರಿಸರದಲ್ಲಿ ಒಂದು ನವೀಕೃತ ಜೀರ್ಣೋದ್ಧಾರ ಮಂದಿರವು ನೆಲೆಕಾಣಲಿದೆ ಎಂದು ಮಂದಿರದ ಟ್ರಸ್ಟಿಗಳು ಹೇಳಿದರು. 

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next