Advertisement

ಸೀತೆ ಕಂಡ ನಳಸೇತು…

10:05 PM Nov 09, 2019 | Team Udayavani |

ಲಂಕೆಯಿಂದ ಅಯೋಧ್ಯೆಗೆ ಪುಷ್ಪಕ ವಿಮಾನದಲ್ಲಿ ಪಯಣಿಸುವಾಗ, ಕೆಳಗೆ ಕಂಡ ಸೇತುವೆಯನ್ನು ರಾಮ “ನಳಸೇತು’ ಎಂದು ಹೆಸರಿಸಿ, ಸೀತೆಗೆ ತೋರಿಸುತ್ತಾನೆ. ಮುಂದೆ ಇದುವೇ “ರಾಮಸೇತು’ ಎಂದು ಪ್ರಖ್ಯಾತವಾಗುತ್ತದೆ. ಭಾರತದಲ್ಲಿ ಬ್ರಿಟಿಷ್‌ ಆಳ್ವಿಕೆಯ ಸಮಯದಲ್ಲಿ ತಯಾರಿಸಿದ ಭೂಪಟಗಳಲ್ಲಿ ಇದರ ಉಲ್ಲೇಖವಿದೆ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕದಲ್ಲಿ, “ರಾಮಸೇತು ಶ್ರೀಲಂಕೆಯ ವಾಯುವ್ಯ ಭಾಗದ ಸಮೀಪವಿರುವ ಮನ್ನಾರ್‌ ದ್ವೀಪಗಳು ಮತ್ತು ಭಾರತದ ದಕ್ಷಿಣ ಕರಾವಳಿಯಲ್ಲಿರುವ ರಾಮೇಶ್ವರಂ ಮಧ್ಯೆ 30 ಮೈಲು ಉದ್ದವಿದೆ’ ಎಂಬ ಉಲ್ಲೇಖ ಕಾಣುತ್ತದೆ. ಸಿ.ಡಿ.ಮಕೆಲೀನ್‌ ವರದಿ ಹಾಗೂ ಏಶಿಯಾಟಿಕ್‌ ಸೊಸೈಟಿಯಲ್ಲಿ ದಾಖಲಾಗಿರುವ ಸಂಗತಿಯಂತೆ, “ಇದು ಕಾಲ್ನಡಿಗೆಯ ದಾರಿಯಾಗಿ ಬಳಕೆಯಲ್ಲಿತ್ತು¤’ ಎನ್ನುವುದು ತಿಳಿಯುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next