ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ನಲಪಾಡ್‌ಗೆ ಮತ್ತಷ್ಟು ದಿನ ಜೈಲುವಾಸ ಮಾಡಬೇಕಿದೆ.
ಪ್ರಭಾವಿ ವ್ಯಕ್ತಿಯಾಗಿರುವ ಆರೋಪಿ ಈಗಾಗಲೇ ಪ್ರಕರಣದ ಮೇಲೆ ಪ್ರಭಾವ ಬೀರಲು ಹಲವು ಯತ್ನ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಂತದಲ್ಲಿ ಆತ ಜೈಲಿನಿಂದ ಬಿಡುಗಡೆಯಾದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದಕ್ಕೆ ಖಾತರಿ ಇಲ್ಲ ಎಂಬ ಪ್ರಶ್ನೆಯನ್ನು ಎತ್ತಿರುವ ನ್ಯಾ. ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಬುಧವಾರ ನಲಪಾಡ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ ನ್ಯಾಯಪೀಠ, ಈ ಅರ್ಜಿ ಜಾಮೀನಿಗೆ ಅರ್ಹವಲ್ಲ ಎಂದು ಉಲ್ಲೇಖೀಸಿದೆ.
ಆರೋಪಿ ವಿರುದ್ಧ ದೂರು ನೀಡಿದ ಹಲವು ಗಂಟೆಗಳ ಬಳಿಕ ಎಫ್ಐಆರ್ ದಾಖಲಿಸಿಕೊಂಡಿರುವುದು, ಪ್ರತಿ ದೂರು ಸಲ್ಲಿಕೆಯಾಗಿರುವುದು. ತನಿಖಾಧಿಕಾರಿಗಳಿಗೆ ನಿರಾಕರಿಸಿ 3ನೇ ವ್ಯಕ್ತಿಗೆ ಆಸ್ಪತ್ರೆ ಬಿಡುಗಡೆ ವರದಿ ನೀಡಿರುವುದು. ವಿದ್ವತ್ ಆರೋಗ್ಯ ಚೇತರಿಕೆಯ ಬಗ್ಗೆ ಆಸ್ಪತ್ರೆ ವೈದ್ಯರು ನೀಡಿರುವ ಡಿಸಾcರ್ಜ್ ಸಮ್ಮರಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಪೀಠ ತಿಳಿಸಿದೆ.
ಸುಪ್ರೀಂಕೋರ್ಟ್ ಮೊರೆ ?: ಸದ್ಯದಲ್ಲಿಯೇ ಮೊಹಮ್ಮದ್ ನಲಪಾಡ್ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇಲ್ಲವೇ ಪ್ರಕರಣ ಸಂಬಂಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ಸೆಷನ್ಸ್ ಕೋರ್ಟ್‌ನಲ್ಲಿಯೇ ಮತ್ತೂಮ್ಮೆ ಜಾಮೀನು ಕೋರುವ ಸಾಧ್ಯತೆಯಿದೆ.
ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಅತ್ಯಂತ ಭಯನಕ ಎಂದು ಕೋರ್ಟ್ ಅಭಿಪ್ರಾಯಪಟ್ಟು ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದೆ. ಈ ಆದೇಶದಿಂದ ಸಾಮಾನ್ಯ ಜನರಿಗೂ ಭರವಸೆ ದೊರೆತಂತಾಗಿದೆ. ಬಲಾಡ್ಯರ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಸಿಕ್ಕುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.
– ಎಂ.ಎಸ್ ಶ್ಯಾಮ್ ಸುಂದರ್, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್