ಬೆಂಗಳೂರು: ರಾಜ್ಯ ಮತ್ತು ದೇಶದಲ್ಲಿರುವ ಯೋಗ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಕೌನ್ಸೆಲಿಂಗ್‌ನಿಂದ (ನ್ಯಾಕ್) ಗುಣಮಟ್ಟ ಮುದ್ರೆ ಪಡೆಯುವ ಕಾಲ ಸನ್ನಿಹಿತವಾಗುತ್ತಿದೆ.
ಇತ್ತೀಚಿನ ವರ್ಷದಲ್ಲಿ ಯೋಗ ಹೆಚ್ಚು ಜನಪ್ರಿಯವಾಗುತ್ತಿದೆ. ಅಲ್ಲದೆ, ಜೂನ್ 21ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಶಿಕ್ಷಣ ಮತ್ತು ತರಬೇತಿ ನೀಡುವ ಕಾಲೇಜು, ವಿಶ್ವವಿದ್ಯಾಲಯಗಳು ದೇಶದಲ್ಲಿ ಸಾಕಷ್ಟಿವೆ. ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದೇ ಯೋಗ ಕೋರ್ಸ್‌ಗಳನ್ನು ನೀಡುತ್ತಿದ್ದರೂ, ಅದಕ್ಕೆ ನ್ಯಾಕ್ ರ್ಯಾಕಿಂಗ್ ಇರಲಿಲ್ಲ. ಈವರೆಗೂ ಯೋಗ ಕಾಲೇಜು ಮತ್ತು ವಿಶ್ವವಿದ್ಯಾಲಯವನ್ನು ನ್ಯಾಕ್ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆಯೂ ಇರಲಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಯೋಗ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ನ್ಯಾಕ್ ಪರಿಶೀಲನಾ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದೆ.
ಯೋಗ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳನ್ನು ನ್ಯಾಕ್ ವ್ಯಾಪ್ತಿಯೊಳಗೆ ಸೇರಿಸುವ ಬಗ್ಗೆ ನ್ಯಾಕ್ ಮಂಡಳಿಯಲ್ಲಿ ಚರ್ಚೆ ಆರಂಭವಾಗಿದೆ. ಇದಕ್ಕಾಗಿ ಮೂರು ವಿಧದಲ್ಲಿ ಮಾಹಿತಿ ಸಂಗ್ರಹ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಯೋಗ ಕೋರ್ಸ್ ಗಳಿಗೆ ನ್ಯಾಕ್ ಮಾನ್ಯತೆ ನೀಡುವ ಸಂಬಂಧ ಇರ ಬೇಕಾದ ಗುಣ ಮಟ್ಟ ಹಾಗೂ ಕನಿಷ್ಠ ಅರ್ಹತೆಗಳ ಬಗ್ಗೆ ಕಾಲೇಜುಗಳಿಂದ ಮಾಹಿತಿ ಪಡೆಯುವ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ನ್ಯಾಕ್ ಹಿರಿಯ ಅಧಿಕಾರಿಯೊಬರು “ಉದಯವಾಣಿ’ಗೆ ಖಚಿತಪಡಿಸಿದರು.
ಕ್ವಾಲಿಟಿ ಇಂಡಿಕೇಟರ್ ಫ್ರೆàಮ್‌ವರ್ಕ್ (ಕ್ಯೂಐಎಫ್): ಯೋಗ ವಿವಿ ಮತ್ತು ಕಾಲೇಜುಗಳಿಂದ ಅಗತ್ಯ ಮಾಹಿತಿ ಪಡೆಯುವುದಕ್ಕಾಗಿ ಕ್ಯೂಐಎಫ್ ಸಿದ್ಧ ಪಡಿಸಲಾಗಿದೆ. ಯೋಗ ಕಾರ್ಯಕ್ರಮದ ಮಿಷನ್ ಮತ್ತು ಅದರ ಫಲಶ್ರುತಿ, ವಿದ್ಯಾರ್ಥಿಗಳ ದಾಖಲಾತಿ, ವಿದ್ಯಾರ್ಥಿಗಳ ಕಲಿಕಾ ಮತ್ತು ಬೋಧನಾ ವಿಧಾನ, ಶಿಕ್ಷಕರ ವಿದ್ಯಾರ್ಹತೆ ಮತ್ತು ಗುಣಮಟ್ಟ, ಯೋಗದಿಂದ ಆರೋಗ್ಯ, ಯೋಗ ಸಂಶೋಧನಾ ಸಾಮರ್ಥ್ಯ, ಸಂಶೋಧನಾ ಮೂಲಗಳು, ಯೋಗ ಸಂಶೋಧನೆಯಲ್ಲಿ ಹೊಸ ಆವಿಷ್ಕಾರ ಸೇರಿ ಒಟ್ಟು ಏಳು ವಿಭಾಗದಲ್ಲಿ 30ಕ್ಕೂ ಅಧಿಕ ವಿಷಯಗಳ ಮಾಹಿತಿಯನ್ನು ಕ್ಯೂಐಎಫ್ ಮೂಲಕ ಕಾಲೇಜು ಅಥವಾ ವಿವಿ ನ್ಯಾಕ್‌ಗೆ ಒದಗಿಸಬೇಕಾಗುತ್ತದೆ.
ಯೋಗ ಗುಣಮಟ್ಟ ಮೌಲ್ಯಮಾಪನದ ಮಾಹಿತಿ ಪಡೆಯಲು ಕರಡು ಅರ್ಜಿ ಮಾದರಿಯನ್ನು ತಯಾರಿಸಲಾಗಿದೆ. ಈ ಅರ್ಜಿಯಲ್ಲಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪೂರ್ಣ ವಿವರ ಮತ್ತು ಯಾವ ಯಾವ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆಂಬ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.ಹಾಗೆಯೆ, ಸಂಸ್ಥೆಯಿಂದ ಕೋರ್ಸ್‌ಗಳ ಅಂಕಿ ಸಂಖ್ಯೆ ಆಧಾರಿತ ಮಾಹಿತಿ ಪಡೆಯುವುದಕ್ಕಾಗಿ ಡಾಟಾ ಕ್ಯಾಪcರ್ ಫಾರ್ಮೆಟ್ ತಯಾರಾಗಿದೆ.
ಯೋಗ ವಿಶ್ವವಿದ್ಯಾಲಯ ಹಾಗೂ ಯೋಗ ಕೋರ್ಸ್ ನೀಡುತ್ತಿರುವ ಕಾಲೇಜುಗಳನ್ನು ನ್ಯಾಕ್ ಮಾನ್ಯತೆಯ ವ್ಯಾಪ್ತಿಗೆ ಒಳಪಡಿಸುವಂತೆ ಕೋರಿ ರಾಷ್ಟ್ರದ ವಿವಿಧ ಯೋಗ ವಿಶ್ವವಿದ್ಯಾಲಯದ ಪ್ರಮುಖರು ನ್ಯಾಕ್‌ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ನ್ಯಾಕ್ ಮಂಡಳಿಯು ಯೋಗ ಕಾಲೇಜುಗಳ ಮಾಹಿತಿಗಾಗಿ ಅಗತ್ಯವಾದ ಮಾದರಿಗಳನ್ನು ಸಿದಟಛಿಪಡಿಸಿದೆ.
ನ್ಯಾಕ್ ಉಪಯೋಗ: ಯೋಗ ಕಾಲೇಜು ಮತ್ತುವಿಶ್ವವಿದ್ಯಾಲಯಗಳಿಗೆ ನ್ಯಾಕ್ ಮಾನ್ಯತೆ ಇಲ್ಲದೆ ಇರುವುದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ರಾಷ್ಟ್ರೀಯ ಉತ್ಛತರ ಶಿಕ್ಷಾ ಅಭಿಯಾನ (ರುಸಾ)ದಿಂದ ನೇರವಾಗಿ ಅನುದಾನ ರುವುದಿಲ್ಲ. ನ್ಯಾಕ್ ಮಾನ್ಯತೆ ಪಡೆದ ನಂತರ ಯುಜಿಸಿ ಹಾಗೂ ರುಸಾ ಅನುದಾನ ಪಡೆಯಲು ಈ ಕಾಲೇಜು ಮತ್ತು ವಿವಿಗಳು ಅರ್ಹವಾಗುತ್ತವೆ. ಅಲ್ಲದೆ, ಯೋಗ ಕೋರ್ಸ್‌ನ ಗುಣಮಟ್ಟ ಕೂಡ ವಿವಿಧ ಕೋರ್ಸ್‌ಗಳ ಗುಣಮಟ್ಟಕ್ಕೆ ಸಮನಾಗುತ್ತದೆ.
ರಾಜು ಖಾರ್ವಿ ಕೊಡೇರಿ