Advertisement
ಶುಕ್ರವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 8 ವಿಕೆಟ್ ನೆರವಿನಿಂದ ಇನ್ನೂ 288 ರನ್ ಗಳಿಸಬೇಕಾದ ಒತ್ತಡ ಹೈದರಾಬಾದ್ ಮೇಲಿದೆ. ಎರಡೂ ಪಂದ್ಯ ರದ್ದಾದ್ದರಿಂದ ಅಂಬಾಟಿ ರಾಯುಡು ಪಡೆಗೆ ಸ್ಪಷ್ಟ ಗೆಲು ವೊಂದು ತುರ್ತಾಗಿ ಬೇಕಿದೆ. ಆದರೆ ಶ್ರೇಯಸ್ ಗೋಪಾಲ್-ಕೃಷ್ಣಪ್ಪ ಗೌತಮ್ ಜೋಡಿಯ ಸ್ಪಿನ್ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಉರುಳಿದ ಎರಡೂ ವಿಕೆಟ್‌ಗಳು ಇವರ ಬುಟ್ಟಿಗೇ ಬಿದ್ದಿವೆ. ಅಲ್ಲದೇ ಕರ್ನಾಟಕದ ದ್ವಿತೀಯ ಸರದಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ ಹೈದರಾಬಾದ್‌ನ ಮೆಹಿª ಹಸನ್ (88ಕ್ಕೆ 5) ಮತ್ತು ಆಕಾಶ್ ಭಂಡಾರಿ (64ಕ್ಕೆ 3) ಇಬ್ಬರೂ ಸ್ಪಿನ್ನರ್‌ಗಳೆಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಕೊನೆಯ ದಿನ “ಸ್ಪಿನ್ ಅಟ್ಯಾಕ್’ ಆದರೆ ಕರ್ನಾಟಕದ ಸತತ 2ನೇ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ.
ಟೀಮ್ ಇಂಡಿಯಾ ಡ್ನೂಟಿ ಮುಗಿಸಿ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ರಂಜನೀಯ ಶತಕದ ಮೂಲಕ ಕರ್ನಾಟಕಕ್ಕೆ ಆಸರೆಯಾದರು. ಇವರಿಗೆ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಉತ್ತಮ ಬೆಂಬಲವಿತ್ತರು. ನಾಯರ್ 134 ರನ್ ಬಾರಿಸಿದರೆ, ಬಿನ್ನಿ 72 ರನ್ ಕೊಡುಗೆ ಸಲ್ಲಿಸಿದರು. ಇವರಿಬ್ಬರ 5ನೇ ವಿಕೆಟ್ ಜತೆಯಾಟದಲ್ಲಿ 160 ರನ್ ಒಟ್ಟುಗೂಡಿದ್ದರಿಂದ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸುವಂತಾಯಿತು.
Related Articles
Advertisement
ನಾಯರ್-ಬಿನ್ನಿ ಹೊರತುಪಡಿಸಿದರೆ ಕರ್ನಾಟಕದ ಸರದಿಯಲ್ಲಿ ನಾಲ್ವರು ಖಾತೆ ಯನ್ನೇ ತೆರೆಯದಿದ್ದುದನ್ನು “ದೊಡ್ಡ ಸುದ್ದಿ’ ಎನ್ನಲಡ್ಡಿಯಿಲ್ಲ. ಇವರೆಂದರೆ ಮಾಯಾಂಕ್ ಅಗರ್ವಾಲ್, ಕೆ. ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಅಭಿಮನ್ಯು ಮಿಥುನ್. ಇವರಲ್ಲಿ ಅಗರ್ವಾಲ್ ಅವರದು ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯ ಸಂಪಾದನೆ!
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-183 ಮತ್ತು 332
(ನಾಯರ್ 134, ಬಿನ್ನಿ 72, ಸಮರ್ಥ್ 29, ರಾಹುಲ್ 23, ಸಿ.ಎಂ. ಗೌತಮ್ 21, ಮೆಹಿª ಹಸನ್ 88ಕ್ಕೆ 5, ಆಕಾಶ್ ಭಂಡಾರಿ 64ಕ್ಕೆ 3). ಹೈದರಾಬಾದ್-136 ಮತ್ತು 2 ವಿಕೆಟಿಗೆ 92 (ತನ್ಮಯ್ ಅಗರ್ವಾಲ್ ಬ್ಯಾಟಿಂಗ್ 43, ರಾಯುಡು ಬ್ಯಾಟಿಂಗ್ 18, ಗೌತಮ್ 32ಕ್ಕೆ 1, ಶ್ರೇಯಸ್ 21ಕ್ಕೆ 1).