Advertisement
ಪುಟ್ಟ ಪುಟ್ಟ ಕಾಸ್ಕೆಟಿಕ್ಸ್ ಶಾಪ್‌ಗಳು , ಫ್ಯಾನ್ಸಿ ಸ್ಟೋರ್ಸ್‌ಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿಯೂ ಕೂಡ ವಿವಿಧ ದರ್ಜೆಯ ವಿವಿಧ ಬಣ್ಣದ ನೈಲ್ ಆರ್ಟ್ ಸಲಕರಣೆಗಳು , ಅದಕ್ಕೆ ಬಳಸುವ ವಿಶೇಷ ನೈಲ್ ಪಾಲಿಶ್‌ಗಳು , ಸ್ಟೋನ್ಸ್ , ಸ್ಟಿಕ್ಕರ್ಸ್ , ಮೋಲ್ಸ್ ಏನೆಲ್ಲ ದೊರಕುತ್ತಿವೆ .
Related Articles
Advertisement
ಕ್ಲಾಸಿಕ್ ಫ್ರೆಂಚ್ ಹಸ್ತಾಲಂಕಾರ ಮಾಡಲು ಉಗುರು ಹೆಚ್ಚು ಉದ್ದವಿಲ್ಲ ಎಂದು ಹಲವರಿಗೆ ಚಿಂತೆ ಕಾಡುತ್ತಿರುತ್ತದೆ. ಅದಕ್ಕೆಂದೆ ಮೈಕ್ರೋ ಫ್ರೆಂಚ್ ನೈಲ್ ಆರ್ಟ್ ಪ್ರಯತ್ನಿಸುವುದು ಉತ್ತಮ. ಉಗುರುಗಳಿಗೆ ಕೇವಲ ಒಂದು ಬಣ್ಣವನ್ನು ಹಚ್ಚಿ, ಆ ಉಗುರುಗಳ ತುದಿಗೆ ಬಿಳಿ ಬಣ್ಣದ ನೈಲ್ ಪಾಲಿಶ್ ಹಚ್ಚಿದರೆ ಉಗುರು ಸುಂದರವಾಗಿ , ಆಕರ್ಷಕವಾಗಿ ಕಾಣಿಸುತ್ತದೆ.
ಇಟಾಲಿಯನ್ ನೈಲ್ ಆರ್ಟ್
ಇಟಾಲಿಯನ್ ಮೆನಿಕ್ಯೂರ್ ಎನ್ನುವುದು ಚಿತ್ರಕಲೆಯ ತಂತ್ರವಾಗಿದ್ದು, ಸಣ್ಣ ಉಗುರುಗಳು ಉದ್ದವಾಗಿ ಕಾಣುವಂತೆ ಮಾಡುವುದಾಗಿದೆ. ಉಗುರಿನ ಎರಡು ಬದಿಗಳಲ್ಲಿ ಸ್ವಲ್ಪ ಜಾಗವನ್ನು ಬಿಟ್ಟು ನೈಲ್ ಪಾಲಿಶ್ ಹಚ್ಚುವುದರಿಂದ ಉಗುರುಗಳು ಉದ್ದವಾಗಿ ಕಾಣುತ್ತಿದೆ. ಈ ಸಣ್ಣ ಟ್ರಿಕ್ ಸಣ್ಣ ಉಗುರುಗಳು ಸುಂದರವಾಗಿ ಕಾಣುವಂತೆ ಮಾಡಬಹುದು.
ಮಲ್ಟಿಕಲರ್ ಫ್ರೆಂಚ್ ಮೆನಿಕ್ಯೂರ್
ಫ್ರೆಂಚ್ ಮೆನಿಕ್ಯೂರ್‌ಗಳು ಯಾವಾಗಲೂ ಕ್ಲಾಸಿಕ್ ನೈಲ್ ಆರ್ಟ್ ಆಯ್ಕೆಯಾಗಿರುತ್ತವೆ. ಆದರೆ ಇದು ಸರಳವಾದ ಬಿಳಿ ಬಣ್ಣಗಳ ಮೇಲೆ ಬಹುವರ್ಣಗಳ ಬಗ್ಗೆ. ಇದರಲ್ಲಿ ಉಗುರುಗಳಿಗೆ ವಾಟರ್ ಕಲರ್ ನೈಲ್ ಪಾಲಿಶ್ ಅನ್ನು ಹಚ್ಚಿ ಬಳಿಕ ಒಂದೊಂದು ಉಗುರಿನ ಮೇಲೆ ವಿವಿಧ ಬಣ್ಣಗಳನ್ನು ಅರ್ಧ ಚಂದ್ರನ ಆಕಾರದಲ್ಲಿ ಹಚ್ಚುವುದಾಗಿದೆ. ಇದರಿಂದಾಗಿ ಉಗುರುಗಳು ಆಕರ್ಷಕವಾಗಿ ಕಾಣುತ್ತದೆ.