Advertisement
ಶಾಸಕ ನಾಗೇಂದ್ರಗೆ ತನ್ನ ಹುಟ್ಟೂರಲ್ಲೇ ಮುನ್ನಡೆ ಸಿಕ್ಕಿಲ್ಲವೆಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ನಾಗೇಂದ್ರ, “ಸಂಸದರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಗೆಲ್ಲಿಸಿದ್ದಾರೆ. 7 ವರ್ಷದಿಂದ ನೀವೇ ಸಂಸದರಾಗಿದ್ದೀರಾ, ಮೊದಲು ಅದನ್ನು ಹೇಳಿ. ನಾನು ನನ್ನ ಹುಟ್ಟೂರಿನಲ್ಲಿ ಪಾಲಿಕೆ ಸದಸ್ಯನಾಗಿದ್ದೆ. ನೀವು ನಮ್ಮ ಊರಲ್ಲಿ ಜಿಲ್ಲಾ ಪಂಚಾಯ್ತಿ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ. ನಾನು ನಿಮ್ಮ ರೀತಿ ದಿಢೀರ್ ಅಂತಾ ಬಂದು ಪದವಿ ಪಡೆದವನಲ್ಲ. 25 ವರ್ಷದಿಂದ ಜನಪ್ರತಿನಿಧಿಯಾಗಿದ್ದೇನೆ” ಎಂದರು.
Related Articles
Advertisement
ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲಿ ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡಿಲ್ಲದಿರಬಹುದು. ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರಬಹುದು. ಸಂಸದ ಪ್ರತಾಪಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಂದ್ರ, “ ಚಾಮುಂಡೇಶ್ವರಿಯ ಆಣೆಯಾಗಿಯೂ ಇದು ಕಮಿಷನ್ ಗಾಗಿ ಅಲ್ಲ. ಜನರ ಹಿತದೃಷ್ಟಿಯಿಂದಾಗಿ ನಾನು ಮಾತನಾಡುತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು, ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿವೆ. ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆ ಕಾಮಗಾರಿ ವೇಳೆ ಅನಾಹುತವಾದರೆ ಯಾರು ಜವಾಬ್ದಾರಿ? ಬೇರೆ ಬೇರೆ ಕಡೆ ಅನಾಹುತಗಳಾಗಿವೆ. ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ಕೇಳಿದರೆ ತಪ್ಪಾ? ಸಂಸದ ಪ್ರತಾಪ ಸಿಂಹಗೆ ಯಾಕೆ ಆ ಕಂಪನಿಯ ಮೇಲೆ ಒಲವು? ಕಂಪನಿಯವರು ನೇರವಾಗಿ ನಗರಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ ಎಂದರು.