Advertisement

ಕಲಾತ್ಮಕ ಸಿನಿಮಾಗಳಿಗೆ ಚಿತ್ರೋತ್ಸವ ವೇದಿಕೆ, ಕಿರುಚಿತ್ರಕ್ಕೆ ಭವಿಷ್ಯ

12:53 PM Nov 17, 2018 | Team Udayavani |

ಮೂಡುಬಿದಿರೆ:ಸಿನಿಮಾ ತುಂಬಾ ಜನಪ್ರಿಯ ಮಾಧ್ಯಮವಾಗಿದ್ದರಿಂದ ಅದು ವ್ಯವಹಾರದ ಚೌಕಟ್ಟಿನೊಳಗೆ ಸಿಲುಕಿದರೂ ಅದರ ನಡುವೆಯೂ ಸಮಾಜಕ್ಕೆ ಬೇಕಾದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸದಭಿರುಚಿಯ ಚಿತ್ರಪರಂಪರೆ ನಮ್ಮ ನಡುವೆ ಇದೆ. ಆದರೆ ಕಲಾತ್ಮಕ ಸಿನಿಮಾಗಳಿಗೆ ಮಾರುಕಟ್ಟೆಯೂ ಇಲ್ಲ, ಹಣಗಳಿಕೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಚಿತ್ರಗಳಿಗೆ ಚಿತ್ರೋತ್ಸವಗಳೇ ಬಹುದೊಡ್ಡ ವೇದಿಕೆ ಎಂದು ಹಿರಿಯ ನಿರ್ದೇಶಕ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

Advertisement

ಅವರು ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರ ಸಿರಿಯನ್ನು ಉದ್ಘಾಟಿಸಿ ಮಾತನಾಡಿದರು. ಈ
ಚಿತ್ರೋತ್ಸವಕ್ಕೆ ಸಂಪೂರ್ಣ ಬೆಂಬಲ ಕೊಟ್ಟವರು ಡಾ.ಮೋಹನ್ ಆಳ್ವ ಅವರು. ಚಿತ್ರಗಳ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟು ಕಲಾತ್ಮಕ ಚಿತ್ರ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಕೆಲವು ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಹಣಗಳಿಸಿ, ಜನರನ್ನು ತಲುಪುವುದು ಬಹಳ ಕಷ್ಟ, ಅದಕ್ಕೆ ಅನೇಕ ಕಾರಣಗಳಿವೆ.ಹಾಗಾಗಿ ಪರ್ಯಾಯವಾದ, ಸಮಾನಾಂತರವಾದ ಇಂತಹ ಚಿತ್ರಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ನಿಟ್ಟಿನಲ್ಲಿ ಅಕಾಡೆಮಿ ಕೂಡಾ ಶ್ರಮಿಸುತ್ತಿದೆ.

ಇತ್ತೀಚೆಗೆ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ 12 ಭಾಷೆಯ ಚಿತ್ರಗಳ ಪ್ರದರ್ಶನ ಮಾಡಿದ್ದೇವು, ಸುಳ್ಯದ ಪುಟ್ಟ ಊರಿನಲ್ಲಿ ಚಿತ್ರೋತ್ಸವ ಮಾಡಿದ್ದೇವೆ. ಗಡಿನಾಡಿನಲ್ಲಿ ಭಾಗದಲ್ಲೆಲ್ಲಾ ಚಿತ್ರೋತ್ಸವಗಳನ್ನು ಏರ್ಪಡಿಸುವುದರ ಮೂಲಕ ಜನರಿಗೆ
ಕಲಾತ್ಮಕ ಚಿತ್ರಗಳನ್ನು ನೋಡುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

Advertisement

ಸಾಮಾಜಿಕ ಜಾಲತಾಣ ಸಾಂಸ್ಕೃತಿಕ ತಾಣವಾಗಬೇಕು:
ಸಾಮಾಜಿಕ ಜಾಲತಾಣವನ್ನು ತಪ್ಪು ಮಾಹಿತಿ ಹರಡೋದಕ್ಕೆ, ಸಮಾಜದ ಆರೋಗ್ಯ ಕೆಡಿಸೋದಕ್ಕೆ ಬಳಸುವುದನ್ನು ಕ ಸಾಂಸ್ಕೃತಿಕ ತಾಣವನ್ನಾಗಿ ಮಾಡಬೇಕಾಗಿದೆ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್ ಬಳಸಿ ಸಿನಿಮಾ ರೂಪಿಸಲಿಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಚನಾತ್ಮಕವಾಗಿ ರೂಪುಗೊಳ್ಳುವ ನೆಲೆಯಲ್ಲಿ ತಮ್ಮ ಕೈಯಲ್ಲಿರುವ ಫೋನ್ ಅನ್ನು ಕ್ಯಾಮರವನ್ನಾಗಿ ಬಳಸಿಕೊಂಡು ಸಂಚಲನ ಮೂಡಿಸಬೇಕು ಎಂದು ನಾಗತಿಹಳ್ಳಿ ಕಿವಿಮಾತು ಹೇಳಿದರು.

ಕಿರುಚಿತ್ರಗಳನ್ನು ಮಾಡುವುದು ಇಂದು ಜಾಗತಿಕವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಎಲ್ಲಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಕೂಡಾ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದಾರೆ.ಒಬ್ಬ ವಿದ್ಯಾರ್ಥಿ 2 3 ನಿಮಿಷಗಳ ಕಿರುಚಿತ್ರವನ್ನು ಮಾಡಿ ಅವುಗಳನ್ನು ಸ್ಪರ್ಧೆಗೆ ಕಳುಹಿಸಿ ಗೆಲುವು ಸಾಧಿಸುವುದನ್ನು ಕಾಣುತ್ತಿದ್ದೇವೆ.ಕಳೆದ ಸಲ ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕಿರುಚಿತ್ರ ಸ್ಪರ್ಧೆ ನಡೆದಿತ್ತು. ಕನ್ನಡ ಕಲಿಯುವ ವಿಚಾರವನ್ನು ಇಟ್ಟುಕೊಂಡು 3ನಿಮಿಷಗಳ ಕಿರುಚಿತ್ರ ಪ್ರದರ್ಶನಗೊಂಡಿತ್ತು ಎಂದರು.

ಸಿನಿಸಿರಿ ಸಿನಿಮೋತ್ಸವದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿ ಡಾ.ನಾ.ದಾಮೋದರ ಶೆಟ್ಟಿ, ಸಿನಿಸಿರಿಯ ಸಂಚಾಲಕ ಶ್ರೀನಿವಾಸ ಹೊಡೆಯಾಲ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾದ ನಿರ್ದೇಶಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಚಲನಚಿತ್ರ ಪ್ರದರ್ಶನಗೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next