Advertisement

ನಾಗರಹೊಳೆಯಲ್ಲಿ ಮತ್ತೆ ಹುಲಿ, ಆನೆ ಶವ ಪತ್ತೆ

06:25 AM Feb 01, 2018 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವಲಯದ ಬಾಳೆಕೋವಿನ ಬಿಎಂಸಿ ಬೀಟ್‌ನ ಅರಣ್ಯ ಪ್ರದೇಶದಲ್ಲಿ 5-6 ವರ್ಷದ ಹುಲಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತ್ತೀಚೆಗೆ ಹುಲಿ ಸತ್ತಿರುವ ಮೂರನೇ ಪ್ರಕರಣ ಇದಾಗಿದೆ.

Advertisement

ವಾರದ ಹಿಂದೆ ಹುಲಿಯ ಆವಾಸ ಸ್ಥಾನಕ್ಕೆ ನಡೆದ ಹುಲಿಗಳ ಕಾದಾಟದಲ್ಲಿ ಸತ್ತಿರಬಹುದೆಂದು ಶಂಕಿಸಲಾಗಿದೆ. ಹುಲಿಗೆ ಕಾದಾಟದಲ್ಲಿ ನಾಲ್ಕಾರುಕಡೆ ಪೆಟ್ಟು ಬಿದ್ದಿದೆ, ಕೊಳೆತ ಸ್ಥಿತಿಯಲ್ಲಿದ್ದುದರಿಂದ ಹೆಣ್ಣೊ, ಗಂಡೋ ತಿಳಿದು ಬಂದಿಲ್ಲ. ಬೀಟ್‌ ನಡೆಸುತ್ತಿದ್ದ ಅರಣ್ಯ ಸಿಬ್ಬಂದಿ ಪ್ರಾಣಿಯ ಕೊಳೆತ ವಾಸನೆ ಜಾಡು ಹಿಡಿದು ಹೊರಟಾಗ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.

ಅಧಿಕಾರಿಗಳು ದೌಡು: ಸ್ಥಳಕ್ಕೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್‌ ಹಾಗೂ ಸ್ವಯಂಸೇವಾ ಸಂಸ್ಥೆಯ ರಾಜಕುಮಾರ್‌, ನಾಗರಾಜಭಟ್‌, ವೈಲ್ಡ್‌ ಲೆಫ್ ವಾರ್ಡನ್‌ ಮಾದಪ್ಪ ಮತ್ತು ನಾಣಚ್ಚಿ ಹಾಡಿಯ ಐಯಪ್ಪರ ಸಮ್ಮುಖದಲ್ಲಿ ವೈದ್ಯ ಡಾ.ಮುಜೀಬ್‌ ರೆಹಮಾನ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಎಸಿಎಫ್.ಪೌಲ್‌ ಆಂಟೋಣಿ, ಆರ್‌ಎಫ್ಓ ಅರವಿಂದ್‌ ಹಾಜರಿದ್ದರು.

ಆತಂಕ: ನಾಲ್ಕೈದು ದಿನಗಳ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ದಲ್ಲೂ ಎರಡು ಹುಲಿಗಳು ಹಾಗೂ ಆನೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬೆನ್ನಲ್ಲೆ ಕೊಳೆತ ಸ್ಥಿತಿಯಲ್ಲಿ ಹುಲಿ ಶವ ಸಿಕ್ಕಿರುವುದು ವನ್ಯಪ್ರಿಯರನ್ನು ಆತಂಕಕ್ಕೆ ದೂಡಿದೆ.

ಆನೆ ಶವ ಪತ್ತೆ
ನಾಗರಹೊಳೆ ಉದ್ಯಾನವನದ ಕಲ್ಲಹಳ್ಳಿ ವಲಯದಲ್ಲಿ 40 ವರ್ಷ ವಯಸ್ಸಿನ ಸಲಗದ ಶವ ಪತ್ತೆಯಾಗಿದ್ದು, ಕಾದಾಟದಲ್ಲಿ ಸಲಗ ಮೃತ ಪಟ್ಟಿದೆ ಎಂದು ಸಿಎಫ್ ಮಣಿಕಂಠನ್‌ ತಿಳಿಸಿದ್ದಾರೆ. ಕಲ್ಲಹಳ್ಳ ವಲಯದ ಪೆಸಾರಿ ಬೀಟ್‌ನ ನವಿಲುಗದ್ದೆ ನೀರು ತೋಡು ಬಳಿ ಮಾಮೂಲಿನಂತೆ ಬೀಟ್‌ ನಡೆಸುತ್ತಿದ್ದ ಸಿಬ್ಬಂದಿಗೆ ಸಲಗದ ಶವ ಗೋಚರಿಸಿದ್ದು,
ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆನೆಗಳ ಕಾದಾಟ ದಲ್ಲಿ ಗಾಯಗೊಂಡು ಸಲಗ 3 ದಿನಗಳ ಹಿಂದೆ ಮತಪಟ್ಟಿದೆ. ಕಾದಾಟದ ಕುರುಹು ಸ್ಥಳದಲ್ಲಿ ಕಂಡು ಬಂದಿದೆ. ಮಾಂಸಾಹಾರಿ ಪ್ರಾಣಿಗಳು ಆನೆಯ ಹೊಟ್ಟೆ ಭಾಗ ತಿಂದಿರುವುದು ಪತ್ತೆಯಾಗಿದೆ ಎಂದು ಮಣಿಕಂಠಣ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next