ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗೆ ಹೊಕ್ಕ ವನ್ಯ ಪ್ರೀಯರಿಗೀಗ ಬೋಗೇಶ್ವರನಿಲ್ಲದ ಕೊರಗು ನೀಗಿಸಲು ಮತ್ತೊಬ್ಬ ಗಜರಾಜ ಸಜ್ಜಾಗಿದ್ದಾನೆ.
ಇತ್ತೀಚೆಗೆ ದಮ್ಮನಕಟ್ಟೆ ಪ್ರವಾಸಿ ಕೇಂದ್ರದಿಂದ ಸಫಾರಿ ನಡೆಸಿದ್ದ ಮಹಾರಾಷ್ಟ್ರದ ವನ್ಯಪ್ರಿಯರೊಬ್ಬರು ಸಫಾರಿ ವೇಳೆಯಲ್ಲಿ ತಮಗೆ ಕಾಣಸಿಕ್ಕ ಭಾರೀ ಗಾತ್ರದ ನೀಳ ದಂತದ, ರಾಜಗಾಂಭಿರ್ಯದಿಂದ ಹೆಜ್ಜೆ ಹಾಕಿ ನಡೆದು ಬರುತ್ತಿದ್ದ ಗಜರಾಜನನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪಬ್ ನಲ್ಲಿ ವಿದ್ಯಾರ್ಥಿಗಳ ಫೇರ್ ವೆಲ್ ಪಾರ್ಟಿ; ಸಂಘಟನೆ ಕಾರ್ಯಕರ್ತರಿಂದ ದಾಳಿ
ರಾಜ ಗಾಂಭೀರ್ಯದಿಂದ ಸಾಗುತ್ತಿದ್ದ ಆನೆಯ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ಆನೆ ಬೋಗೇಶ್ವರ ಸ್ಥಾನ ತುಂಬುವ ಎಲ್ಲಾ ಲಕ್ಷಣಗಳಿದೆ ಎಂದು ಸ್ನೇಹಿತರೊಂದಿಗೆ ತಮ್ಮ ನಾಗರಹೊಳೆಯ ಅನುಭವವನ್ನು ಹಂಚಿಕೊಂಡು, ನಾಗರಹೊಳೆಯ ಜೀವ ವೈವಿದ್ಯತೆ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.