Advertisement

ನಾಗರಪಂಚಮಿ: ಭಕ್ತಿ-ನಿಷ್ಠೆಯಿಂದ ಕ್ಷೀರಾಭಿಷೇಕ

12:27 AM Aug 06, 2019 | Team Udayavani |

ಕಾಸರಗೋಡು: ನಾಡಿನೆಲ್ಲೆಡೆ ಸೋಮವಾರ ಭಕ್ತಿ-ನಿಷ್ಠೆ-ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ನಾಡಿನ ಪ್ರಮುಖ ದೇವಾಲಯಗಳಲ್ಲಿ, ಮಂದಿರಗಳಲ್ಲಿ, ನಾಗನ ಬನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ನಾಗನಿಗೆ ಎಳನೀರು ಮತ್ತು ಕ್ಷೀರಾಭಿಷೇಕ ನಡೆಸಿದರು. ವರ್ಷದ ಮೊದಲ ಹಬ್ಬದ ಸಡಗರ ಎಲ್ಲೆಡೆ ಕಂಡು ಬಂತು. ಪ್ರಕೃತಿಯನ್ನು ಪೂಜಿಸುವ ನಾಗಾರಾಧನೆ ಹೆಣ್ಮಕ್ಕಳಿಗೆ ವಿಶೇಷವಾಗಿದೆ.

Advertisement

ಕಾಸರಗೋಡಿನ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗಿನಿಂದಲೇ ನಾಗನಿಗೆ ಕ್ಷೀರಾಭಿಷೇಕ ಮತ್ತು ಎಳನೀರಿನ ಅಭಿಷೇಕ ಸಮರ್ಪಿಸಲು ಭಕ್ತರು ನೆರೆದಿದ್ದರು. ಇದೇ ರೀತಿ ಜಿಲ್ಲೆಯ ಬಹುತೇಕ ದೇವಸ್ಥಾನ, ಮಂದಿರ, ನಾಗಬನಗಳಲ್ಲಿ ದೃಶ್ಯಗಳು ಕಂಡು ಬಂತು. ನಾಗನಿಗೆ ಅಭಿಷೇಕ ಮಾಡುವ ಮೂಲಕ ಭಕ್ತರು ಕೃತಾರ್ಥ ಭಾವವನ್ನು ಹೊಂದಿದರು.

ಕಾಸರಗೋಡು ಬ್ಯಾಂಕ್‌ ರಸ್ತೆಯಲ್ಲಿರುವ ನಾಗರಾಜ ಕಟ್ಟೆಯಲ್ಲಿ ನಾಗನಿಗೆ ಹಾಲನ್ನೆರೆಯಲು ಭಾರೀ ಸಂಖ್ಯೆಯಲ್ಲಿ ಭಕ್ತರು ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತಿದ್ದರು.

ಕಾಸರಗೋಡು ನಗರದ ಎಸ್‌.ವಿ.ಟಿ. ರಸ್ತೆಯಲ್ಲಿರುವ ನಾಗನ ಕಟ್ಟೆಯಲ್ಲಿ ಭಕ್ತರುಅಭಿಷೇಕ ಮಾಡಿದರು.

ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನೆಲ್ಲಿಕುಂಜೆ ಕೋಮರಾಡಿ ದೈವಸ್ಥಾನದ ನಾಗನಿಗೆ ಹಾಲನ್ನೆರೆಯಲು ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ವಿಶೇಷ ಪೂಜೆ-ಪುನಸ್ಕಾರ ನಡೆಸಿದರು. ಹಲವೆಡೆ ನಾಗತಂಬಿಲ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next