Advertisement

ನಾಗರಮಡಿ ಫಾಲ್ಸ್‌: ಮತ್ತೋರ್ವ ಯುವತಿ ಶವ ಪತ್ತೆ

09:42 AM Sep 18, 2017 | Team Udayavani |

ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಮದ ಬಳಿಯ ನಾಗರಮಡಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿದ್ದ 5ಮಂದಿ ಪ್ರವಾಸಿಗರಲ್ಲಿ ಸೋಮವಾರ ಮತ್ತೋರ್ವ ಯುವತಿಯ ಮೃತ ದೇಹ ಪತ್ತೆಯಾಗಿದೆ.

Advertisement

ಗೋವಾದ ಮಡಗಾಂವ ರಾಯ್‌ ಗ್ರಾಮದಿಂದ ಐದು ಮಂದಿ ನಾಗರಮಡಿ ಫಾಲ್ಸ್‌ ವೀಕ್ಷಣೆಗೆ ಬಂದಿದ್ದರು. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಏಕಾಏಕಿ ನೀರು ಹರಿದು ಬಂದು ಐವರು ನೀರಿನಲ್ಲಿ ಕೊಚ್ಚಿ  ಹೋಗಿದ್ದರು. ಐವರಲ್ಲಿ ನಿನ್ನೆ ಇಬ್ಬರ ಮೃತ ದೇಹ ಪತ್ತೆಯಾಗಿತ್ತು. ಇನ್ನುಳಿದವರ ಮೃತ ದೇಹಕ್ಕೆ ಶೋಧಕಾರ್ಯ ಮುಂದವರಿದಿದೆ.

ಒಟ್ಟು 15 ಜನರ ತಂಡ ಎರಡು ಕಾರಿನಲ್ಲಿ ಬಂದಿತ್ತು. ಆರು ಜನರು 3 ಬೈಕ್‌ ಗಳಲ್ಲಿ ಬಂದಿದ್ದರು. ಮೃತದೇಹಗಳನ್ನು ಹುಡುಕಲು ಸ್ಥಳೀಯರು ಪೊಲೀಸರಿಗೆ ನೆರವಾಗಿದ್ದಾರೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೂ ಪ್ರವಾಸಿಗರು ನಾಗರಮಡಿ ನೋಡಲು ಬಂದಿದ್ದರು. ನಾಗರಮಡಿ ಫಾಲ್ಸ್‌ನಲ್ಲಿ ಅಪಾಯಕಾರಿ ಸುಳಿಗಳು ಇವೆ. ಇವರು ಇದನ್ನು ಲೆಕ್ಕಿಸದೇ ನೀರಿಗಿಳಿದಿದ್ದು ಅನಾಹುತಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next