ಉಡುಪಿ: ನಾಗದೇವರ ಶಕ್ತಿ ವಿಶ್ವವ್ಯಾಪಿಯಾಗಿದೆ. ಕಾಂಕ್ರೀಟ್ ಕಟ್ಟಡಕ್ಕಿಂತಲೂ ಪ್ರಕೃತಿ ಮಡಿಲಲ್ಲಿ ನಾಗನನ್ನು ಪೂಜಿಸಿದರೆ ಉತ್ತಮ. ನಾಗದೇವರು ಚಲಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ತೀರ್ಥ ಸ್ನಾನಕ್ಕಿಂತಲೂ ಮಿಗಿಲಾದುದು. ಆದಿ ಮತ್ತು ವ್ಯಾಧಿಗೆ ನಾಗದೇವರ ಅನುಗ್ರಹ ಅಗತ್ಯ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಬಳ್ಕೂರು ಡಾ| ಗೋಪಾಲ ಆಚಾರ್ಯ ಮತ್ತು ಕುಟುಂಬಿಕರಿಂದ ಬಳ್ಕೂರಿನ ಬಡ್ತಿಮಕ್ಕಿಯಲ್ಲಿ ಎ. 22ರಂದು ನಡೆದ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಕಟಪಾಡಿ ಆನೆಗುಂದಿ ಮಹಾಸಂಸ್ಥಾ ನದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಹಣವಿದ್ದ ಮಾತ್ರಕ್ಕೆ ನಾಗಮಂಡಲ ದಂತಹ ಪುಣ್ಯ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕೂ ಯೋಗ ಬೇಕು. ಅದನ್ನು ದೇವರೇ ನೀಡಬೇಕು; ಬೇರೆಯವ ರಿಂದ ಸಾಧ್ಯವಿಲ್ಲ ಎಂದರು.
ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಗುರು ಶಿವ ಸುಜ್ಞಾನ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸೂÅರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ
ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇ ಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿದರು. ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಛಾತ್ರ, ಉದ್ಯಮಿ ವಿಶ್ವನಾಥ ಭಟ್, ಬಳ್ಕೂರು ಡಾ| ಗೋಪಾಲ ಆಚಾರ್ಯ, ಪ್ರೇಮಾ ಗೋಪಾಲ ಆಚಾರ್ಯ ಉಪಸ್ಥಿತರಿದ್ದರು.
ಉಪನ್ಯಾಸಕ ರಾಮರಾಯ ಆಚಾರ್ಯ ಸ್ವಾಗತಿಸಿದರು. ಉಪ ನ್ಯಾಸಕ ಡಾ| ರವಿರಾಜ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು. ಶಿವರಾಮ ಕೆ.ಎಂ. ವಂದಿಸಿದರು.