Advertisement

Nagarahole ರಾಷ್ಟ್ರೀಯ ಉದ್ಯಾನದ ಆನೇಚೌಕೂರು ವಲಯದಲ್ಲಿ ಹೆಣ್ಣು ಹುಲಿ ಸಾವು

08:27 AM Mar 24, 2024 | Team Udayavani |

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದಲ್ಲಿ ಹುಲಿಗಳ ಕಾದಾಟದಲ್ಲಿ ಸಮಾರು ೧೩ ವರ್ಷ ಪ್ರಾಯದ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ.

Advertisement

ಆನೆಚೌಕೂರು ವನ್ಯಜೀವಿ ವಲಯದ ಗಣಗೂರು ಶಾಖೆಯ ಗಣಗೂರು ಗಸ್ತಿನ ತಾವರೆಕೆರೆ ಅರಣ್ಯ ಪ್ರದೇಶದಲ್ಲಿ ಮಾ.೨೩ರ ಶನಿವಾರ ಗಸಿನಲ್ಲಿದ್ದ ವೇಳೆ ಹುಲಿಯ ಶವ ಕಾಣಿಸಿಕೊಂಡಿದೆ. ಸ್ಥಳದಲ್ಲಿ ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿರುವ ಕುರುಹು ಸಹ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಸಹಾಯಕ ಅರಣ್ಯ ಸಂಕರಕ್ಷಣಾಕಾರಿ ಡಿ.ಎಸ್.ದಯಾನಂದ್, ವಲಯ ಅರಣ್ಯಾಕಾರಿ ಡಿ.ದೇವರಾಜು ರಾಷ್ಟ್ರೀಯ ಹುಲಿ ಪ್ರಾಕಾರದ ನಾಮ ನಿರ್ದೇಶನ ಸದಸ್ಯ ಬೋಸ್ ಮಾದಪ್ಪ, -ಮುಖ್ಯ ವನ್ಯಜೀವಿ ಪರಿಪಾಲಕರಾದ ತಮ್ಮಯ್ಯ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ಇತ್ತು ಪರಿಶೀಲಿಸಿದರು. ನಾಗರಹೊಳೆ ಉದ್ಯಾನದ ಮುಖ್ಯ ಪಶುವೈದ್ಯಾಕಾರಿ ರಮೇಶ್, ಬಾಳೆಲೆಯ ಪಶುವೈದ್ಯಾಕಾರಿ ಭವಿಷ್ಯ ಕುಮಾರ್ ಎಲ್ಲರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಸ್ಥಳದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು.

ಇದನ್ನೂ ಓದಿ: “ಇನ್ನು ಮುಂದೆ ನಾವು ಪ್ರಧಾನಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕು”: ಉದಯನಿಧಿ ಸ್ಟಾಲಿನ್

Advertisement

Udayavani is now on Telegram. Click here to join our channel and stay updated with the latest news.

Next