Advertisement
ಆರಂಭದ ಕಾಲದಲ್ಲಿ ಮನುಷ್ಯನು ಅಲೆಮಾರಿಯಾಗಿದ್ದು, ಆಲೋಚನಾ ಶಕ್ತಿ ಅಷ್ಟೊಂದು ಬೆಳೆದಿರಲಿಲ್ಲ. ಹಾಗಾಗಿಯೇ ಹೆಚ್ಚಾಗಿ ಕಾಡುಗಳೇ ಈತನ ವಾಸಸ್ಥಾನವಾಗಿತ್ತು. ಈ ಸಂದರ್ಭದಲ್ಲಿ ಸರೀಸೃಪಗಳು ಅದರಲ್ಲೂ “ಸಂಕಪಾಲ’ (ಶಂಖಪಾಲ, ಸಂಕಮಾಲೆ ಎಂದರೆ ಶಂಖಾಕೃತಿಯ ಹೆಡೆ ಇರುವ ಸರ್ಪ ಎಂದರ್ಥ) ಹಾವಿನ ಕಡಿತದಿಂದ ಹೆಚ್ಚಾಗಿ ಜೀವಿಗಳು ಹಾಗೂ ತನ್ನ ಸಹಚರರು ಸಾಯುವುದನ್ನು ಕಂಡ ಈತನಿಗೆ ಹಾವು ಎಂದರೆ ಮೃತ್ಯು ಎಂಬ ಕಲ್ಪನೆ ಬೆಳೆದಿರಬೇಕು. ಮುಂದೆ ಇದುವೇ ಹಾವಿನ ಬಗ್ಗೆ ಭಯಭಕ್ತಿ ಮೂಡಲು ಮತ್ತು ಕಾಲ ಕ್ರಮೇಣವಾಗಿ ಸರ್ಪಗಳ ಬಗ್ಗೆ ಪುರಾಣ ಐತಿಹ್ಯಗಳು ಬೆಳೆಯಲು ಕಾರಣವಾಗಿರಬೇಕು.
Related Articles
Advertisement
ಬುದ್ಧನು ಹುಟ್ಟಿದಾಗ ಆತನನ್ನು ಸ್ತುತಿಸಲೆಂದು ನಂದ ಮತ್ತು ಉಪನಂದ ಎಂಬ ಹೆಸರಿನ ನಾಗರು ಬಂದರೆಂದು ಉಲ್ಲೇಖವಿದ್ದು, ಬುದ್ಧನ ಜಾತಕ ಕಥೆಗಳು ನಾಗನ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ಜೈನ ಧರ್ಮದಲ್ಲಿ ಕೂಡ ನಾಗಾರಾಧನೆಗೆ ಅವಕಾಶವಿದ್ದು, ಜೈನರ 24 ತೀರ್ಥಂಕರರ ಮೂರ್ತಿಗಳ ಪಕ್ಕದಲ್ಲಿ ಅವರನ್ನು ಗುರುತಿಸಲು ನಾಗಯಕ್ಷರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.
ಬಂಗಾಳದಲ್ಲಿ ಮಾನಸ (ಪಾರ್ವತಿ ದೇವಿಯ ಮಗಳು) ಎಂಬ ನಾಗದೇವತೆಯ ಆರಾಧನೆ ನಡೆಯುತ್ತದೆ. ಕೇರಳದಲ್ಲಿ ನಾಗಾರಾಧನ ಪದ್ಧತಿ ಬಹಳ ಪ್ರಾಚೀನ ಕಾಲದಿಂದಲೂ ಇದೆ. ತಮಿಳುನಾಡು, ಆಂಧ್ರಪ್ರದೇಶ ಹೀಗೆ ಭಾರತದ ಅನೇಕ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ನಾಗನ ಆರಾಧನೆ ನಡೆಯುತ್ತಾ ಬಂದಿದೆ.
ವಿದೇಶದಲ್ಲೂ ನಾಗಾರಾಧನೆಯ ಕುರುಹುಗಳಿದ್ದು, ಮೆಕ್ಸಿಕೋದ ಪುರಾಣದಲ್ಲಿ ಸಿಹೂಕೊಹಂಟೆ ಎಂಬ ನಾಗದೇವಿ ಒಂದು ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಮುಂದೆ ಇವರಿಂದಲೇ ಮನುಕುಲ ಸೃಷ್ಟಿಯಾಯಿತು ಎಂಬ ಕಥೆಯಿದೆ. ಪ್ರಾಚೀನ ಗ್ರೀಕರ ಶಿಲ್ಪಕಲೆಗಳಲ್ಲಿ, ಗ್ರೀಸ್ ವೀರರ ಚಿತ್ರದ ಜತೆ ನಾಗನ ಅಥವಾ ನಾಗನ ಹೆಡೆಯ ಚಿತ್ರಗಳು ಕಂಡು ಬರುತ್ತವೆ.
ಈಜಿಪ್ಟಿನ ಸೂರ್ಯದೇವ ಹೆಲಿಯಸನು ನಾಗದೇವಿ ಓಪ್ಸಳನ್ನು ಮದುವೆಯಾದ ಎಂಬುದಾಗಿ ಅಲ್ಲಿನ ಪುರಾಣ ತಿಳಿಸುತ್ತದೆ. ರೋಮ್ ದೇಶದಲ್ಲಿನ ಎಪಿರಿಯಸ್ ಎಂಬ ಗುಹಾ ದೇವಾಲಯದಲ್ಲಿ ಮಹಿಳೆಯರು ನಾಗ ಪೂಜೆ ನಡೆಸುತ್ತಿದ್ದುದ್ದರ ಬಗ್ಗೆ ಉÇÉೇಖವಿದೆ.
ತುಳುನಾಡಿನ ವಾತಾವರಣದಲ್ಲಿ ಆದ್ರìತೆ ಮತ್ತು ದಟ್ಟವಾದ ಕಾಡು ಇರುವುದರಿಂದ ಪ್ರಾಚೀನ ಕಾಲದಿಂದಲೂ ಈ ಪ್ರದೇಶ ಸರೀಸೃಪಗಳ ಆವಾಸಸ್ಥಾನವಾಗಿದೆ. ಹಾಗಾಗಿಯೇ ನಮ್ಮ ಪೂರ್ವಜರು ತಾವು ನಂಬುವ ನಾಗನಿಗೆ ಕಾಡಿನ ತಂಪು ಜಾಗದಲ್ಲಿ ಒಂದು ಕಲ್ಲನ್ನು ಹಾಕಿ ಆರಾಧಿಸಿಕೊಂಡು ಬಂದಿದ್ದಾರೆ. ಮುಂದೆ ಇಂತಹ ಸ್ಥಳಗಳು ಬನ, ವನ, ಹಾಡಿ, ನಾಗಬನ, ಕಾಪು, ದೇವರ ಕಾಡು/ಹಾಡಿಗಳೆಂದು ಕರೆಯಲ್ಪಟ್ಟವು.
ಹಿಂದಿನ ಕಾಲದಲ್ಲಿ ನಾಗಬನಗಳು ಹೆಚ್ಚಾಗಿ ನದಿ, ಹಳ್ಳಗಳ ದಂಡೆಗಳಲ್ಲಿ, ಗದ್ದೆಯ ಬದುಗಳಲ್ಲಿ ರುವುದರಿಂದ ನಾಗ-ವೃಕ್ಷ-ಜಲ ಇವುಗಳ ಸಂಬಂಧ ಬಹಳ ಪ್ರಾಚೀನ ವಾದುದು ಎಂಬು ದನ್ನು ಗಮನಿಸ ಬಹುದು. ಮುಂದೆ ಇಲ್ಲಿ ಇನ್ನಷ್ಟು ಜಾತಿಯ ಮರಗಳು, ಸಸ್ಯವರ್ಗ ಗಳು ಬೆಳೆ ಯುತ್ತಾ ಆ ಪ್ರದೇಶವು ಬನ ಎಂದೆನಿಸಿ ಕೊಳ್ಳುತ್ತದೆ. ಮುಂದೆ ವರ್ಷಕ್ಕೊಮ್ಮೆ ಒಂದು ನಿರ್ದಿಷ್ಟ ದಿನದಂದು ಇಂತಹ ಬನಗಳ ಒಳಗೆ ಪ್ರವೇ ಶಿಸಲು ತಡೆ ಯೊಡ್ಡುವ ಪೊದೆ ಗಂಟಿಗಳನ್ನು ಕಡಿದು ದಾರಿ ಮಾಡಿ ಇಲ್ಲಿನ ಪ್ರಾಕೃತಿಕ ನಾಗಬನದಲ್ಲಿ ಪೂಜೆ ನಡೆಯುತ್ತಿತ್ತು.
ರಾಜಮನೆತನದ ಅವಧಿಯಲ್ಲಿ ನಾಗ ಶಿಲ್ಪಗಳನ್ನು ಮಾಡುವುದರ ಮೂಲಕ ನಾಗನ ಆರಾಧನೆಯನ್ನು ಮೊದಲಿ ಗಿಂತಲೂ ಶಾಸ್ತ್ರೋ ಕ್ತವಾಗಿ ಮಾಡಲು ಆರಂಭಿಸಿ ದರು. ಇದಕ್ಕೆ ಸಂಬಂಧಿಸಿ ದಂತೆ ತುಳುನಾಡಿನ ಅನೇಕ ನೆಲೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪ್ರಾಚೀನ ನಾಗಶಿಲ್ಪ ಗಳು ಪತ್ತೆಯಾ ಗಿವೆ.
ಆದರೆ ಪ್ರಸ್ತುತ ನಾವು ಮಾಡುತ್ತಿರುವು ದಾದರೂ ಏನು? ಅಭಿವೃದ್ಧಿ, ನಗರೀಕರಣಗಳ ನೆಪವೊಡ್ಡಿ ಕಾಡುಗಳ ನಾಶ ಮಾಡಿ, ನಾಗಬನಗಳನ್ನು ಕಾಂಕ್ರೀಟಿಕರ ಣಗೊಳಿ ಸುವ ಮೂಲಕ, ಪೂರ್ವಜರ ಚಿಂತನೆ, ನಂಬಿಕೆಗಳನ್ನು ಮೌಡ್ಯ ಎಂದು ಬದಿಗೊತ್ತಿ, ಅಜ್ಞಾನವನ್ನು ಮೈಗಂಟಿ ಸಿಕೊಂಡು ನಮ್ಮದೇ ಆಡಂಭರದ ನಾಗರಾ ಧನೆಯನ್ನು ಮಾಡಿಕೊಳ್ಳುವ ಮೂಲಕ ಪರಿಸರವನ್ನು ಅವನತಿಯತ್ತ ತಳ್ಳುತ್ತಿದ್ದೇವೆ ಎಂದೆನಿಸುತ್ತಿಲ್ಲವೇ? ಇನ್ನು ಮುಂದಾದರೂ ಅಳಿದುಳಿದ ನಿಸರ್ಗದತ್ತ ಬನಗಳನ್ನು ಸಂರಕ್ಷಿಸುತ್ತ ಜೀವಸಂಕುಲ ಹಾಗೂ ನಮ್ಮದೇ ಮುಂದಿನ ಪೀಳಿಗೆಯ ಉಳಿವಿಗೆ ಆರೋಗ್ಯಪೂರ್ಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.
–ಶ್ರುತೇಶ್ ಆಚಾರ್ಯ
ಮೂಡುಬೆಳ್ಳೆ