Advertisement

ಶ್ರದ್ಧಾ ಭಕ್ತಿಯ ನಾಗರಪಂಚಮಿ ಆಚರಣೆ

10:49 AM Jul 26, 2020 | Suhan S |

ಚಿತ್ರದುರ್ಗ: ಕೋವಿಡ್ ಸಂಕಷ್ಟದ ನಡುವೆಯೂ ನಗರದ ನಾಗರಕಟ್ಟೆಗಳಲ್ಲಿ ನಾಗರ ಕಲ್ಲುಗಳಿಗೆ, ಹುತ್ತಕ್ಕೆ ಹಾಲೆರೆದು ಭಕ್ತಿ ಸಮರ್ಪಣೆ ಮಾಡುವ ಮೂಲಕ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.

Advertisement

ಸ್ತ್ರೀಯರು ವಿಶೇಷವಾಗಿ ಆಚರಿಸುವ ನಾಗರ ಪಂಚಮಿಗೆ ಚಿಗಳಿ, ತಮಟ, ಅಳಿಟ್ಟು, ತಂಬಿಟ್ಟು, ಅಳ್ಳು, ಕಡಲೆಕಾಳು, ಗೆಜ್ಜೆವಸ್ತ್ರ ಹಾಗೂ ತೆಂಗಿನಕಾಯಿ, ಬಾಳೆಹಣ್ಣು ವಿವಿಧ ಪೂಜಾ ಪರಿಕರಗಳನ್ನು ತಂದು ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ನಗರದ ಬರಗೇರಮ್ಮ ದೇವಸ್ಥಾನ, ಉಚ್ಚಂಗಿಯಲ್ಲಮ್ಮ ದೇಗುಲ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ, ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಕಾಮನಬಾವಿ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿರುವ ನಾಗರಕಟ್ಟೆಗಳಿಗೆ, ನಾಗರ ಹುತ್ತಗಳಿಗೆ ಭಕ್ತರು ಬೆಳಿಗ್ಗೆಯಿಂದಲೇ ಬಂದು ಹಾಲು ಎರೆದರು.

ಈ ಹಬ್ಬದಂದು ಸ್ನೇಹಿತರ, ಸಂಬಂಕರ ಮನೆ, ಮನೆಗಳಿಗೆ ತೆರಳಿ ರೊಟ್ಟಿ, ಪಲ್ಯ ಹಂಚಿ ಬರುವುದು ಸಾಮಾನ್ಯ. ಆದರೆ, ಈ ಬಾರಿ ಅಂತಹ ದೃಶ್ಯ ವಿರಳವಾಗಿತ್ತು. ಮನೆಗಳಲ್ಲಿ ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಹೆಸರುಕಾಳು, ಎಣ್ಣೆಗಾಯಿ ಪಲ್ಯ, ಗಡಸಪ್ಪು ಪಲ್ಯ ತಯಾರಿಸಿ ಭೋಜನ ಸವಿದರು. ಜೋಳದ ರೊಟ್ಟಿಯನ್ನೇ ಬಹುತೇಕರು ತಯಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next