Advertisement
‘ಹುಬ್ಬಳ್ಳಿಯಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ರತ್ನಗಿರಿಯಿಂದ ಸ್ವರ್ಣಕೇದಗೆ ತರುತ್ತೇವೆ. ಆದರೆ ಈ ಬಾರಿ ಡ್ಯಾಂ ಒಡೆದು ಎಲ್ಲ ತೊಂದರೆಯಾಗಿದೆ’ ಎನ್ನುತ್ತಾರೆ ಕೇದಗೆ ವ್ಯಾಪಾರಿಗಳಾದ ಇಮ್ತಿಯಾಜ್, ಮಂಜು, ಶೇಖಯ್ಯ ಮತ್ತು ಈರಣ್ಣ.
ಕೆಂದಾಳೆಯ ಎರಡು ಜಾತಿಯ ಬೊಂಡಗಳು ಕೇರಳದಿಂದ ಬಂದಿವೆ. ಬಾರಕೂರು ಹಾಗೂ ಕೆಲವು ಸ್ಥಳೀಯ ಸೀಯಾಳಗಳೂ ಇವೆ. ಕೆಂದಾಳೆ ಬೊಂಡವನ್ನು ರಥಬೀದಿಯಲ್ಲಿ ಶನಿವಾರ 50 ರೂ.ಗಳಿಗೆ ಮಾರಾಟ ಮಾಡಲಾಯಿತು. ಕೆಲವು ಅಂಗಡಿಗಳಲ್ಲಿ ಇದು 40-45 ರೂ.ಗಳಿಗೂ ಮಾರಾಟವಾಗುತ್ತಿತ್ತು. ಇತರೆ ಜಾತಿಯ ಸೀಯಾಳ ದರ 35 ರೂ. ಇತ್ತು. ಅರಿಸಿನ ಎಳೆಯ ಕಟ್ಟಿಗೂ ಬೇಡಿಕೆ ಕಂಡು ಬಂತು. 25 ಎಲೆಗಳ ಒಂದು ಕಟ್ಟಿಗೆ 40 ರೂ. ದರ ನಿಗದಿಯಾಗಿತ್ತು. ಬಾಳೆ ಹಣ್ಣು ಕೂಡ ದುಬಾರಿ ಎಂಬ ಮಾತು ವ್ಯಾಪಾರಿಗಳಿಂದಲೇ ಕೇಳಿಬಂತು. ಪುಟ್ ಬಾಳೆ ಕೆ.ಜಿಗೆ 80 ಕೆ.ಜಿ ರೂ. ಇತ್ತು. ಮೂಡೆ ಎಲೆಯ ಕೊಟ್ಟೆ, ವಿವಿಧ ರೀತಿಯ ಹೂ, ಹಣ್ಣುಗಳಿಗೆ ಗ್ರಾಹಕರಿಂದ ಬೇಡಿಕೆ ಇತ್ತು. ರಥಬೀದಿಯಲ್ಲದೆ ನಗರದ ಇತರೆ ಅಂಗಡಿಗಳು ಕೂಡ ಬೊಂಡ , ಹೂ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿರಿಸಿವೆ. ನಗರದ ಬಟ್ಟೆ, ಆಭರಣ ಅಂಗಡಿಗಳಲ್ಲಿಯೂ ಶನಿವಾರ ಜನಸಂದಣಿ ಕಂಡುಬಂತು.
Related Articles
Advertisement
ಹೂ ದುಬಾರಿಸೇವಂತಿಗೆ ಮೊಳಕ್ಕೆ 40, 60, 50 ಹೀಗೆ ವಿವಿಧ ದರಗಳಲ್ಲಿ ಬಿಕರಿಯಾಯಿತು. ರವಿವಾರ ಮತ್ತಷ್ಟು ಹೂ ಬರುವ ನಿರೀಕ್ಷೆ ಇದೆ. ಆದರೆ ಈ ಬಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಸನದಿಂದ ಬಂದಿದ್ದ ಹೂವಿನ ವ್ಯಾಪಾರಿ ನಾಗರಾಜ್ ಹೇಳಿದರು. ಹಿಂಗಾರ ಒಂದಕ್ಕೆ 150 ರೂ. ದರವಿದೆ. 500 ಕೇದಗೆ ಮಾತ್ರ
ಕಳೆದ ವರ್ಷ 20,000 ಕೇದಗೆ ತಂದಿದ್ದೆವು. ಆದರೆ ಈ ವರ್ಷ ರತ್ನಗಿರಿಯಲ್ಲಿ ಮಳೆಯಿಂದಾಗಿ 500 ಮಾತ್ರ ತರಲು ಸಾಧ್ಯವಾಗಿದೆ. ಹಾಗಾಗಿ ಬೆಲೆಯೂ ಹೆಚ್ಚು ಮಾಡುವುದು ಅನಿವಾರ್ಯವಾಯಿತು. ಕಳೆದ ವರ್ಷ 100ರಿಂದ 150 ರೂ.ಗಳಿಗೆ ಕೇದಗೆ ಮಾರಾಟ ಮಾಡಿದ್ದೆವು.
-ಇಮ್ತಿಯಾಜ್,ಕೇದಗೆ ವ್ಯಾಪಾರಿ