Advertisement

ನಾಗರ ಪಂಚಮಿ ನಾಡಿಗೆ ದೊಡ್ಡದು: ಸಂಭ್ರಮಾಚರಣೆ

06:10 AM Jul 28, 2017 | |

ತೆಕ್ಕಟ್ಟೆ: ನಿಸರ್ಗವನ್ನು ಆರಾಧಿಸುವ ನಿಟ್ಟಿನಿಂದ ಹಿಂದೂಗಳು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗದೇವತೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಎಲ್ಲ ದುರಿತಗಳನ್ನು ನಿವಾರಿಸಿ ರಕ್ಷಿಸಲೆಂದು ನಾಗದೇವರಿಗೆ ಹಾಲು ಹಣ್ಣು ಅರ್ಪಿಸಿ ಸಂತೃಪ್ತರನ್ನಾಗಿಸುವ ವಿಶೇಷ ಹಬ್ಬ ನಾಗರಪಂಚಮಿ. 

Advertisement

ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದಾದ  ಕೋಣಿ ಆಚಾರ್‌ ಬೆಟ್ಟು,ಕುಂಭಾಶಿ,ಹಲೂ¤ರು ಹಾಗೂ ತೆಕ್ಕಟ್ಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಮುಂತಾದ  ಗ್ರಾಮೀಣ ಭಾಗಗಳಲ್ಲಿ ಗುರುವಾರದಂದು ಸಂಭ್ರಮದಿಂದ ನಡೆಯಿತು.

ಈ ಸಂದರ್ಭದಲ್ಲಿ ನೂರಾರು ಭಕ್ತರು ನಾಗ ಬನಗಳಲ್ಲಿ ತನು ಎರೆದು ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉಳೂ¤ರು, ಕೆದೂರು, ಬೇಳೂರು, ಮೊಗೆಬೆಟ್ಟು, ಕೊರ್ಗಿ, ಹೊಸಮಠ, ತೆಕ್ಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿ ನಾಗ ಸಾನ್ನಿಧ್ಯಕ್ಕೆ ಹಾಲು ಹಣ್ಣು ಅರ್ಪಿಸಲಾಯಿತು.

ಭಕ್ತರಲ್ಲಿ ಗೊಂದಲ
ಹಲವೆಡೆಗಳಲ್ಲಿ  ನಾಗರಪಂಚಮಿಯ ಬಗ್ಗೆ ಕ್ಯಾಲೆಂಡರ್‌ನಲ್ಲಿ ಉಲ್ಲೇಖೀಸಿದ ದಿನಾಂಕ ಹಾಗೂ ಶಾಸ್ತ್ರದಲ್ಲಿನ ಪಂಚಮಿಯ ಬಗೆಗಿನ ಗೊಂದಲಕರ ಮಾಹಿತಿಯಿಂದಾಗಿ ಅದೆಷ್ಟೋ ಭಕ್ತರು ಗೊಂದಲಕ್ಕೆ ಒಳಗಾದ ಘಟನೆ ಸಂಭವಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next