Advertisement
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 2016ರಲ್ಲಿ ನಿವೃತ್ತಿಯಾಗಿರುವ 61 ವರ್ಷದ ನಾಗನಾಥರಾವ ಮೂಲತಃ ಔರಾದ (ಬಿ) ತಾಲೂಕಿನ ನಿಡೋದಾ ಗ್ರಾಮದವರು. ಹಿರಿಯರೊಂದಿಗೆ ಬೀದರಿಗೆ 1973ರಲ್ಲಿ ವಲಸೆ ಬಂದಿದ್ದು, 1988ರಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ನೌಕರಿ ಪಡೆದಿದ್ದರು. ಕೃಷಿಯನ್ನು ಹೆಚ್ಚು ಲಾಭದಾಯಕ ಮಾಡಿಕೊಳ್ಳಲು ಕಮಠಾಣಾ, ಯಾಕತಪುರ ಗ್ರಾಮಗಳಲ್ಲಿರುವ ಜಮೀನಿನಲ್ಲ್ಲಿ ನೀರಾವರಿಗಾಗಿ ತಲಾ ಒಂದೊಂದು ಕೊಳವೆ ಬಾವಿ ತೋಡಿಸಿದರು.
Related Articles
Advertisement
ತಮ್ಮ ಎರಡೂ ತೋಟಗಳಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಲ್ಲದೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಶೇ.90ರಷ್ಟು ಸಹಾಯಧನ ಪಡೆದಿದ್ದಾರೆ. ಮಳೆ ನೀರಿನ ಸಂಗ್ರಹಣೆಗಾಗಿ 20x20x3 ಅಡಿ ಅಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, 1.35 ಲಕ್ಷ ರೂ. ಸಹಾಯಧನ ಪಡೆದುಕೊಂಡಿದ್ದಾರೆ.
ಈಗ ಟ್ರ್ಯಾಕ್ಟರ್ ಮತ್ತಿತರ ಯಂತ್ರೋಪಕರಣ ಮತ್ತು ಪ್ರತಿ ತೋಟದಲ್ಲಿ ಒಬ್ಬೊಬ್ಬ ಆಳಿನ ಸಹಾಯದಿಂದ ಕೆಲಸ ಮಾಡಿಸುತ್ತಿದ್ದಾರೆ. ಹುಬ್ಬಳ್ಳಿಯ ಮತ್ತು ಸ್ಥಳೀಯ ಹಣ್ಣು ಮಾರಾಟಗಾರರು ಇವರ ತೋಟಕ್ಕೆ ಬಂದು ಮಾವು, ಗೋಡಂಬಿ ಮತ್ತು ಬಾಳೆ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಮಾವು, ಬಾಳೆ ಮತ್ತು ತರಕಾರಿ ಬೆಳೆಗಳ ಕಟಾವು ಹಾಗೂ ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಮಾಡಲು ತೋಟಗಾರಿಕೆ ಇಲಾಖೆಯಿಂದ ಪ್ಯಾಕ್‌ಹೌಸ್, ಎರೆಹುಳು ಗೊಬ್ಬರದ ಘಟಕಗಳನ್ನು ನಿರ್ಮಿಸಿಕೊಳ್ಳುವ ಯೋಜನೆಯನ್ನು ಇವರು ಹೊಂದಿದ್ದಾರೆ. ಇವರ ಮಗ ಸಿವಿಲ್ ಇಂಜಿನಿಯರ್ ಆಗಿದ್ದಾರೆ.
ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಕೃಗೊಳ್ಳಲು ಅನುವಾಗುವಂತೆ ಒಂದೆರಡು ದೇಸಿ ಹಸುಗಳ ಸಾಕಣೆ ಮತ್ತು ಬಾಳೆ ಫಸಲು ತೆಗೆದುಕೊಂಡು ನಾಲ್ಕು ಎಕರೆಯಲ್ಲಿ ಶುಂಠಿ (ಅಲ್ಲಾ) ಬೆಳೆಯುವ ಹಾಗೂ ಬದುಗಳ ಮೇಲೆ ಅರಣ್ಯ ಗಿಡಗಳನ್ನು ಬೆಳೆಸುವ ಯೋಜನೆ ರೂಪಿಸಿಕೊಂಡಿದ್ದಾರೆ.
ಎರಡೂ ತೋಟಗಳ ನಿರ್ವಹಣೆಗೆ ಪ್ರತಿ ವರ್ಷ 1.5 ರಿಂದ 2 ಲಕ್ಷ ರೂ. ವರೆಗೆ ಖರ್ಚು ಮತ್ತು 5ರಿಂದ 6 ಲಕ್ಷ ರೂ. ವರೆಗೆ ಆದಾಯ ಬರುತ್ತಿದೆ. ಸಮಗ್ರ ಕೃಷಿ, ಬಹು ಬೆಳೆ ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಯೋಚನೆಯಿದೆ. ಅಲ್ಲದೇ ಫಸಲನ್ನು ಸ್ವಂತ ಮಾರಾಟ ಮಾಡುವ ಉದ್ದೇಶವೂ ಇದೆ. ತಮ್ಮ ಸಾಧನೆಗೆ ತೋಟಗಾರಿಕೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ, ಸಹಾಯಕ ನಿರ್ದೇಶಕ ಶಿವಪುತ್ರ ಶಂಭು, ಮನ್ನಳ್ಳಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಗೌತಮ ಶಿಂಧೆ ಅವರ ಮಾರ್ಗದರ್ಶನ ಕಾರಣ. ತೋಟಗಾರಿಕೆಗೆ ಸಂಬಂಧಿಸಿದಂತೆ ಮೊ.ಸಂಖ್ಯೆ: 9901040501ಗೆ ಸಂಪರ್ಕಿಸಬಹುದು.•ನಾಗನಾಥರಾವ್ ನಿಡೋದೆ,
ಪ್ರಗತಿಪರ ರೈತ •ಜಿ. ಚಂದ್ರಕಾಂತ,
ನಿವೃತ್ತ ವಾರ್ತಾ ಇಲಾಖೆ ಉಪ ನಿರ್ದೇಶಕರು