Advertisement
ಜ. 26ರ ಬೆಳಗ್ಗೆ 6ರಿಂದ ಜ. 27, ಜ. 28, 30ರ ಬೆಳಗ್ಗೆ 7ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಜ. 29ರ ಬೆಳಗ್ಗೆ 7.30ರಿಂದ ಮಹಾ ರುದ್ರಯಾಗ, ರಾತ್ರಿ 8ರಿಂದ ವಿವಿಧ ವೇದಿಕೆಗಳಲ್ಲಿ ವಾರಾಣಸಿಯಿಂದ ಆಗಮಿಸಿರುವ ಅರ್ಚಕ ವೃಂದದವರಿಂದ ಸಾಮೂಹಿಕ ಗಂಗಾರತಿ ಜರಗಲಿದೆ.
ಜ.1ರ ಬೆಳಗ್ಗೆ 9.45ಕ್ಕೆ ಅಷ್ಟೋತ್ತರ ಶತಕಲಶಾಭಿಷೇಕ, 10ರಿಂದ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ನಾಗದೇವರ ದರ್ಶನ, ಕಾಶೀ ವಾರಾಣಸಿಯಿಂದ ತರಿಸಲಾದ ಪವಿತ್ರ ಗಂಗಾಜಲ ಭಕ್ತರಿಗೆ ಸಂಪ್ರೋಕ್ಷಣೆ, ದಾರ ವಿತರಣೆ, ಪಲ್ಲಪೂಜೆ, ಸಂಜೆ 4.30ರಿಂದ ಹಾಲಿಟ್ಟು ಸೇವೆ, 5.30ರಿಂದ ಗಂಗಾರತಿ, 6.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ಆರಂಭಗೊಳ್ಳುವುದು. ಧಾರ್ಮಿಕ ಸಭೆ
ಜ. 26ರಿಂದ 30ರ ತನಕ ಸಂಜೆ ಶ್ರೀವಿಶ್ವೇಶತೀರ್ಥ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಗೌರವಾಧ್ಯಕ್ಷ ಡಾ| ಜಿ. ಶಂಕರ್ ಪ್ರತೀದಿನ ಅಧ್ಯಕ್ಷತೆ ವಹಿಸಲಿದ್ದಾರೆ. ಜ. 26ರಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ಆಶೀರ್ವಚನ, ಜೋತಿಷಿ ಕಬಿಯಾಡಿ ಜಯರಾಮ ಆಚಾರ್ಯರಿಂದ ಪ್ರಾಸ್ತಾವಿಕ ನುಡಿ, ಜ. 27ರ ಸಂಜೆ 7ರಿಂದ ನಡೆಯುವ ಸಭೆಯಲ್ಲಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಶೀರೂರು ಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರಿಂದ ಆಶೀರ್ವಚನ, ಜೋತಿಷಿ ವಿ| ಶ್ರೀನಿವಾಸ ಭಟ್ ಕುತ್ಪಾಡಿ ಉಪನ್ಯಾಸ ನೀಡುವರು.
Related Articles
Advertisement
ಅನ್ನಸಂತರ್ಪಣೆ, ಸಾಂಸ್ಕೃತಿಕ ವೈಭವಪ್ರತೀ ದಿನ ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ವೈಭವ ನಡೆಯಲಿದೆ. ಜ. 26ರ ರಾತ್ರಿ 8ರಿಂದ ನೃತ್ಯ-ಸಂಗೀತ ವೈಭವ, ಜ. 27ರ ರಾತ್ರಿ 9ರಿಂದ ಭಕ್ತಿ ಗಾನ ಸುಧೆ, ಜ. 28ರ ರಾತ್ರಿ 8ರಿಂದ ವರಾಹರೂಪಂ, ವ್ಹಾ ಪೊರ್ಲುಯಾ-ತುಳು, ಕನ್ನಡ, ದೇಶೀಯ ಜಾನಪದ ಸಂಗೀತ ಫ್ಯೂಷನ್, ಜ. 29ರ ರಾತ್ರಿ 8.30ರಿಂದ ಸಂಪೂರ್ಣ ಶ್ರೀಕೃಷ್ಣ ದರ್ಶನ-ನೃತ್ಯ ರೂಪಕ, ಜ. 30ರ ರಾತ್ರಿ 8.30ರಿಂದ “ಅಧ್ಯಕ್ಷೆರ್’ ತುಳು ನಗೆ ನಾಟಕ, ಜ. 31ರ ಬೆಳಗ್ಗೆ 10.30ರಿಂದ ವಿಶ್ವೇಶತೀರ್ಥ ವೇದಿಕೆಯಲ್ಲಿ ಶತವೀಣಾವಾದನ ವಿಶೇಷ, ಮಧ್ಯಾಹ್ನ 12.30ರಿಂದ ಸ್ಯಾಕೊÕàಫೋನ್ ವಾದನ, 3ರಿಂದ ಭಕ್ತಿ ರಸಾಯನ, ಶ್ರೀ ವಾಸುಕೀ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಭಕ್ತಿ-ಭಾವ-ಜಾನಪದ ಸಂಗೀತ, ಮಧ್ಯಾಹ್ನ 1ರಿಂದ ಭಕ್ತಿ ಗಾನಾಮೃತ ಜರಗಲಿದೆ. ಹೊರೆಕಾಣಿಕೆ ಮೆರವಣಿಗೆ
ಜ. 27ರ ಸಂಜೆ 4.30ರಿಂದ ನಾಗದೇವರಿಗೆ ನೂತನವಾಗಿ ನಿರ್ಮಿಸಿದ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ಪ್ರಭಾವಳಿಯಲ್ಲಿ ರಜತ ಬಲಿ ಮೂರ್ತಿಯನ್ನು ಹಸುರುವಾಣಿ ಹೊರೆಕಾಣಿಕೆ ಸಹಿತ ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ತಂದು ಶ್ರೀ ನಾಗ ಸಾನ್ನಿಧ್ಯಕ್ಕೆ ಸಮರ್ಪಣೆಯಾಗಲಿದೆ. ಇದನ್ನೂ ಓದಿ: Invitation: ಪೆರ್ಡೂರು ಬಂಟರ ಸಮುದಾಯ ಭವನ: ಆಮಂತ್ರಣ ಪತ್ರಿಕೆ ಬಿಡುಗಡೆ