ನವದೆಹಲಿ: ನಾಗಾಲ್ಯಾಂಡ್‌ನಲ್ಲಿ ಇಂದು ನಡೆದ ಮತ ಎಣಿಕೆ ಮುಕ್ತಾಯಗೊಂಡಿದ್ದು ಬಿಜೆಪಿ – ಎನ್‌ಡಿಪಿಪಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದ್ದು ಎನ್‌ಡಿಎ ಸರ್ಕಾರ ರಚನೆಯಾಗುವ ಸಾಧ್ಯತೆ ದಟ್ವವಾಗಿದೆ.
ಈ ಮಧ್ಯೆ ನಾಗಾಲ್ಯಾಂಡ್ ರಾಜಕೀಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸ್ಸೀವ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಹೆಕನಿ ಜಖಲು ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ದಿಮಾಪುರ-||| ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾಗಿರುವ ಹೆಕನಿ ಜಖಲು ಅವರು ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾಗುತ್ತಿರುವ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ.
ಪ್ರತಿಷ್ಟಿತ ನಾರಿ ಶಕ್ತಿ ಪ್ರಶಸ್ತಿಗೆ ಭಾಜನರಾಗಿರುವ ಹೆಕನಿ ಜಖಲು ದಿಮಾಪುರ-||| ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14,241 ಮತಗಳನ್ನು ಪಡೆದು ಗೆಲುವಿನ ನಗು ಬೀರಿದ್ದಾರೆ.
ಅವರ ಪ್ರಬಲ ಪ್ರತಿಸ್ಪರ್ಧಿ ರಾಮ್‌ವಿಲಾಸ್ ನೇತೃತ್ವದ ಲೋಕ ಜನ ಶಕ್ತಿ ಪಕ್ಷದ ಅಝೆತೋ ಝೀಮೋಮಿ ಅವರು 12,705 ಮತಗಳನ್ನುಪಡೆದಿದ್ದಾರೆ. ಒಟ್ಟಾರೆಯಾಗಿ 1,536 ಮತಗಳ ಅಂತರದಿಂದ ಗೆದ್ದಿರುವ ಹೆಕನಿ ಜಖಲು ನಾಗಾಲ್ಯಾಂಡ್ ವಿಧಾನಸಭೆ ಪ್ರವೇಶಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ:
ಕಿಚ್ಚ ಸುದೀಪ್, ಉಪೇಂದ್ರ ಬಳಿ ಕ್ಷಮೆ ಕೇಳಿದ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್